Niveditha Gowda: ‘ವಿಕ್ರಾಂತ್ ರೋಣ’ ಹಾಡಿಗೆ ಬೋಲ್ಡ್ ಆಗಿ ಸ್ಟೆಪ್ ಹಾಕಿದ ನಿವೇದಿತಾ ಗೌಡ-ಚಂದನ್
ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ನಿವೇದಿತಾ ಅವರು ನಾನಾ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಜತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ರಿಲೀಸ್ಗೆ ಇನ್ನೂ ಎರಡು ತಿಂಗಳು ಬಾಕಿ ಇದೆ. ಆಗಲೇ ಸಿನಿಮಾದ ಕ್ರೇಜ್ ಜೋರಾಗಿದೆ. ಎಲ್ಲ ಕಡೆಗಳಲ್ಲೂ ಸಿನಿಮಾ ಬಗ್ಗೆ ಟಾಕ್ ಶುರುವಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ‘ರಾ ರಾ ರಕ್ಕಮ್ಮಾ’ ಹಾಡು (Ra Ra Rakkamma Song) ಯೂಟ್ಯೂಬ್ನಲ್ಲಿ ಲಕ್ಷಲಕ್ಷ ವೀವ್ಸ್ ಪಡೆಯುತ್ತಿದೆ. ಪರ ಭಾಷೆಗಳಲ್ಲೂ ಹಾಡಿಗೆ ಮೈಲೇಜ್ ಸಿಕ್ಕಿದೆ. ಈ ಹಾಡಿಗೆ ಅನೇಕ ಸೆಲೆಬ್ರಿಟಿಗಳು ರೀಲ್ಸ್ ಮಾಡುತ್ತಿದ್ದಾರೆ. ಈಗ ನಿವೇದಿತಾ ಗೌಡ ಹಾಗೂ ಚಂದನ್ ಗೌಡ ಈ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳ ಬಳಿ ಈ ಹಾಡಿನ ಸ್ಟೆಪ್ಸ್ ಪ್ರಯತ್ನಿಸುವಂತೆ ಕೋರಿದ್ದಾರೆ ಚಂದನ್.
ಚಂದನ್ ಹಾಗೂ ನಿವೇದಿತಾ ಗೌಡ ಇಬ್ಬರೂ ‘ಬಿಗ್ ಬಾಸ್’ ಮನೆಯಲ್ಲಿ ಭೇಟಿ ಆದವರು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆಯಿತು. ನಂತರ ಪರಸ್ಪರ ಪ್ರೀತಿಸೋಕೆ ಶುರು ಮಾಡಿದರು. ಈಗ ಮದುವೆ ಆಗಿ ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ನಿವೇದಿತಾ ಅವರು ನಾನಾ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಜತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳನ್ನು ಖುಷಿಪಡಿಸಲು ವಿವಿಧ ಫೋಟೋ ಹಾಗೂ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ.
‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮಾ’ ಹಾಡಿಗೆ ಚಂದನ್ ಹಾಗೂ ನಿವೇದಿತಾ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ‘ಈ ಸ್ಟೆಪ್ ಪ್ರಯತ್ನಿಸಿ. ಸಖತ್ ಫನ್ ಆಗಿದೆ’ ಎಂದು ಬರೆದುಕೊಂಡಿದ್ದಾರೆ ಚಂದನ್. ಈ ಡ್ಯಾನ್ಸ್ಗೆ ಫ್ಯಾನ್ಸ್ ಖುಷ್ ಆಗಿದ್ದಾರೆ. ‘ಡ್ಯಾನ್ಸ್ ಸಖತ್ ಆಗಿ ಮಾಡುತ್ತಿದ್ದೀರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಕ್ಯೂಟ್ ಕಪಲ್’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ ಬಗ್ಗೆ ನಿವೇದಿತಾ ಗೌಡ ಮಾತು
ಇತ್ತೀಚೆಗೆ ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ ಕೂಡ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಲಕ್ಷಾಂತರ ಮಂದಿ ಆ ಡ್ಯಾನ್ಸ್ ಇಷ್ಟಪಟ್ಟಿದ್ದರು. ಇದಾದ ಬೆನ್ನಲ್ಲೇ ಈಗ ಚಂದನ್ ಹಾಗೂ ನಿವೇದಿತಾ ಡ್ಯಾನ್ಸ್ ವೈರಲ್ ಆಗುತ್ತಿದೆ. ಪೋಸ್ಟ್ ಮಾಡಿದ ಒಂದು ಗಂಟೆಯಲ್ಲಿ 2 ಲಕ್ಷ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.