- Kannada News Photo gallery Niveditha Gowda towel prank Goes viral And Fans angry over Chandan Shetty wife
‘ನಿಮ್ಮ ಗೌರವ ನೀವೇ ತೆಗೆದುಕೊಳ್ತೀರ’; ಟವೆಲ್ ಪ್ರ್ಯಾಂಕ್ ಮಾಡಿದ ನಿವೇದಿತಾ ಗೌಡಗೆ ಜನರ ಬುದ್ಧಿಮಾತು
ಪೋಸ್ಟ್ ಮಾಡಿ ಒಂದು ದಿನ ಕಳೆಯುವುದರೊಳಗೆ ಅಂದಾಜು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಗೌಡ ತುಂಬ ಬಾಲಿಶವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
Updated on:Jan 13, 2022 | 8:25 PM

ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರು ತುಂಬ ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪತಿ ಚಂದನ್ ಶೆಟ್ಟಿ ಜೊತೆಗೂಡಿ ಅವರು ಅನೇಕ ರೀಲ್ಸ್ ಮಾಡುತ್ತಾರೆ.

ಅವುಗಳಿಗೆ ಅಭಿಮಾನಿಗಳಿಂದ ಸಖತ್ ಮೆಚ್ಚುಗೆ ಕೂಡ ವ್ಯಕ್ತವಾಗುತ್ತದೆ. ಆದರೆ ಕೆಲವೊಮ್ಮೆ ನೆಟ್ಟಿಗರು ಗರಂ ಆಗುತ್ತಾರೆ. ಹೌದು, ನಿವೇದಿತಾ ಗೌಡ ಹಂಚಿಕೊಂಡಿರುವ ಹೊಸ ರೀಲ್ಸ್ ಬಗ್ಗೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ.

ಇನ್ಸ್ಟಾಗ್ರಾಮ್ನಲ್ಲಿ ಇದಕ್ಕೆ ಒಂದಷ್ಟು ನೆಗೆಟಿವ್ ಕಮೆಂಟ್ಗಳು ಬಂದಿವೆ. ಅಷ್ಟಕ್ಕೂ ಈ ರೀಲ್ಸ್ನಲ್ಲಿ ನಿವೇದಿತಾ ಮಾಡಿದ್ದೇನು? ಧರಿಸಿದ್ದ ಟವೆಲ್ ಅನ್ನು ಕ್ಯಾಮೆರಾ ಎದುರಲ್ಲೇ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಗೆಯ ಪ್ರ್ಯಾಂಕ್ ವಿಡಿಯೋಗಳು ವೈರಲ್ ಆಗುತ್ತವೆ. ನಿವೇದಿತಾ ಗೌಡ ಕೂಡ ಅಂಥದ್ದೊಂದು ಪ್ರ್ಯಾಂಕ್ ಮಾಡಲು ಪ್ರಯತ್ನಿಸಿದ್ದಾರೆ. ‘ನನ್ನ ಗಂಡನಿಗೆ ಪ್ರ್ಯಾಂಕ್ ಮಾಡುತ್ತೇನೆ’ ಎಂಬ ಕ್ಯಾಪ್ಷನ್ನೊಂದಿಗೆ ಈ ವಿಡಿಯೋ ಆರಂಭ ಆಗುತ್ತದೆ.

ತಾವು ಧರಿಸಿದ್ದ ಟವೆಲ್ ಅನ್ನು ಕ್ಯಾಮೆರಾ ಎದುರಿನಲ್ಲಿಯೇ ಕಿತ್ತು ಎಸೆಯುವಂತೆ ನಿವೇದಿತಾ ಗೌಡ ನಟಿಸುತ್ತಾರೆ. ಅದನ್ನು ನಿಜವೆಂದು ನಂಬಿ, ಪತ್ನಿಯ ಮಾನ ಕಾಪಾಡಲು ಚಂದನ್ ಶೆಟ್ಟಿ ಓಡೋಡಿ ಬರುತ್ತಾರೆ. ಇಂಥದ್ದೊಂದು ನಾಟಕೀಯ ಪ್ರಸಂಗ ಈ ರೀಲ್ಸ್ನಲ್ಲಿ ಇದೆ.

ಪೋಸ್ಟ್ ಮಾಡಿ ಒಂದು ದಿನ ಕಳೆಯುವುದರೊಳಗೆ ಅಂದಾಜು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಗೌಡ ತುಂಬ ಬಾಲಿಶವಾಗಿ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದೆಲ್ಲ ಅತಿಯಾಯ್ತು ಅಂತ ಕೆಲವು ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದು ಪ್ರ್ಯಾಂಕ್ ಅಲ್ಲ, ಸ್ಕ್ರಿಪ್ಟೆಡ್ ವಿಡಿಯೋ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ನಿಮ್ಮ ಗೌರವವನ್ನು ನೀವೇ ಕಳೆದುಕೊಳ್ಳುತ್ತಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
Published On - 8:25 pm, Thu, 13 January 22




