ಪಾರ್ವತಮ್ಮ ರಾಜ್ಕುಮಾರ್ ಸಹೋದರಿ ಎಸ್.ಎ. ನಾಗಮ್ಮ ನಿಧನ
ನಾಗಮ್ಮ ಅವರಿಗೆ ವಯಸ್ಸಾಗಿತ್ತು. ಹೀಗಾಗಿ, ಅನೇಕ ಕಾಯಿಲೆಗಳು ಅವರನ್ನು ಸುತ್ತಿಕೊಂಡಿದ್ದವು. ಕಳೆದ ಎರಡು ವಾರಗಳಿಂದ ಅನಾರೋಗ್ಯ ಹದಗೆಟ್ಟಿತ್ತು. ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿ ಇಂದು ಬೆಳಿಗ್ಗೆ ಅವರು ಕೊನೆ ಉಸಿರೆಳೆದಿದ್ದಾರೆ.
ರಾಜ್ಕುಮಾರ್ ಅವರ (Rajkumar) ಪತ್ನಿ ಪಾರ್ವತಮ್ಮ (Parvathamma) ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹಲವು ಸಿನಿಮಾಗಳನ್ನು ನಿರ್ಮಿಸಿ ಅವರು ಭೇಷ್ ಎನಿಸಿಕೊಂಡವರು. ಅವರ ಸಹೋದರಿ ಎಸ್.ಎ. ನಾಗಮ್ಮ ಅವರು (SA Nagamma)ಇಂದು (ಮೇ 14) ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಚಿನ್ನೇಗೌಡ ಅವರು ಸ್ಯಾಂಡಲ್ವುಡ್ನಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ನಾಗಮ್ಮ ಅವರು ಚಿನ್ನೇಗೌಡ ಅವರಿಗೂ ಸಹೋದರಿ. ನಾಗಮ್ಮ ಅವರ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಾಗಮ್ಮ ಅವರಿಗೆ ವಯಸ್ಸಾಗಿತ್ತು. ಹೀಗಾಗಿ, ಅನೇಕ ಕಾಯಿಲೆಗಳು ಅವರನ್ನು ಸುತ್ತಿಕೊಂಡಿದ್ದವು. ಕಳೆದ ಎರಡು ವಾರಗಳಿಂದ ಅನಾರೋಗ್ಯ ಹದಗೆಟ್ಟಿತ್ತು. ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿ ಇಂದು ಬೆಳಿಗ್ಗೆ ಅವರು ಕೊನೆ ಉಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಹೋದರ ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಗೂ ತಂಗಿ ಜಯಮ್ಮ, ಮಗ ಮಹೇಶ್ ಹಾಗೂ ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.
ನಾಗಮ್ಮ ಅವರ ಅಂತ್ಯಕ್ರಿಯೆ ಇಂದೇ ನೆರವೇರಲಿದೆ. ಸಂಜೆ ಇಳಂದೂರಿನ ಕೆಸ್ತೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯದಲ್ಲಿ ಕುಟುಂಬ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಅವರ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ರಾಜ್ಕುಮಾರ್ ಕುಟುಂಬಕ್ಕೆ ಕಳೆದ ವರ್ಷ ಆಘಾತ ಎದುರಾಗಿತ್ತು. ಪುನೀತ್ ರಾಜ್ಕುಮಾರ್ ಅವರ ನಿಧನ ವಾರ್ತೆಯಿಂದ ಫ್ಯಾನ್ಸ್ ತುಂಬಾನೇ ಅಪ್ಸೆಟ್ ಆದರು. ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಅವರಿಗೆ ಈಗಲೂ ಸಾಧ್ಯವಾಗುತ್ತಿಲ್ಲ. ಇಂದಿಗೂ ಅಪ್ಪು ಅವರನ್ನೂ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಹೀಗಿರುವಾಗಲೇ ಪಾರ್ವತಮ್ಮ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಬೇಸರದ ಸಂಗತಿ
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:33 pm, Sat, 14 May 22