ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ; ಕ್ಷಮೆ ಕೇಳಿದ ಅನುಶ್ರೀ

ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ; ಕ್ಷಮೆ ಕೇಳಿದ ಅನುಶ್ರೀ
ಶಿವಣ್ಣ-ಅನುಶ್ರೀ

ಇಂದು (ಮೇ 8) ವಿಶ್ವ ತಾಯಂದಿರ ದಿನ. ಈ ವಿಶೇಷ ದಿನದಂದು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವಿಶೇಷ ಎಪಿಸೋಡ್​ ಏರ್ಪಡಿಸಲಾಗಿತ್ತು. ಈ ಎಪಿಸೋಡ್​ನಲ್ಲಿ ಅಮ್ಮನ ಕಾನ್ಸೆಪ್ಟ್ ಮೇಲೆ ಡ್ಯಾನ್ಸ್ ಮಾಡಲಾಯಿತು.

TV9kannada Web Team

| Edited By: Rajesh Duggumane

May 08, 2022 | 9:43 PM

ಪಾರ್ವತಮ್ಮ ರಾಜ್​ಕುಮಾರ್ ಅವರನ್ನು (Parvathamma Rajkumar) ಕಂಡರೆ ಕರ್ನಾಟಕದ ಜನತೆಗೆ ವಿಶೇಷ ಪ್ರೀತಿ ಇದೆ. ಅವರು ನಿರ್ಮಾಣದ ಮೂಲಕ ಮನೆ ಮಾತಾದವರು. ಮನೆಯಲ್ಲಿ ತಾಯಿ ಆಗಿಯೂ ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದರು. ಇನ್ನು ಪಾರ್ವತಮ್ಮ ಅವರನ್ನು ಕಂಡರೆ ಶಿವರಾಜ್​ಕುಮಾರ್​​ಗೆ (Shivarajkumar) ವಿಶೇಷ ಗೌರವ ಇದೆ. ಅನೇಕ ವೇದಿಕೆ ಮೇಲೆ ಶಿವಣ್ಣ  ಅಮ್ಮನ ಬಗ್ಗೆ ಹೇಳುತ್ತಾ ಭಾವುಕರಾಗಿದ್ದರು. ಈಗ ಅವರು ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ಈಗಾಗಲೇ ಐದು ಸೀಸನ್​​ಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ಈಗ ಆರನೇ ಸೀಸನ್ ಆರಂಭವಾಗಿದೆ. ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿರುವ ಈ ಶೋಗೆ ಶಿವಣ್ಣ ಜಡ್ಜ್​ ಆಗಿದ್ದಾರೆ. ಶಿವರಾಜ್​ಕುಮಾರ್ ಡ್ಯಾನ್ಸ್ ಮೂಲಕವೂ ಜನಪ್ರಿಯತೆ ಗಳಿಸಿದವರು. ಈ ಕಾರಣಕ್ಕೆ ಶಿವಣ್ಣ ಅವರನ್ನು ಜಡ್ಜ್​ ಸ್ಥಾನದಲ್ಲಿ ಕೂರಿಸಲಾಗಿದೆ.

ಇಂದು (ಮೇ 8) ವಿಶ್ವ ತಾಯಂದಿರ ದಿನ. ಈ ವಿಶೇಷ ದಿನದಂದು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವಿಶೇಷ ಎಪಿಸೋಡ್​ ಏರ್ಪಡಿಸಲಾಗಿತ್ತು. ಈ ಎಪಿಸೋಡ್​ನಲ್ಲಿ ಅಮ್ಮನ ಕಾನ್ಸೆಪ್ಟ್ ಮೇಲೆ ಡ್ಯಾನ್ಸ್ ಮಾಡಲಾಯಿತು. ಕೊನೆಯಲ್ಲಿ ಜಡ್ಜ್​ ಹಾಗೂ ನಿರೂಪಕಿ ಅನುಶ್ರೀ ಅವರು ತಾಯಿ ಇರುವ ಫೋಟೋವನ್ನು ಪ್ರದರ್ಶನ ಮಾಡಲಾಯಿತು. ಶಿವಣ್ಣ-ಪಾರ್ವತಮ್ಮನ ಫೋಟೋ ಎಲ್ಲರ ಗಮನ ಸೆಳೆಯಿತು.

ಈ ಫೋಟೋ ನೋಡುತ್ತಿದ್ದಂತೆ ಶಿವರಾಜ್​ಕುಮಾರ್ ಅವರು ಗಳಗಳನೆ ಅತ್ತುಬಿಟ್ಟರು. ದುಃಖವನ್ನು ನಿಯಂತ್ರಿಸಿಕೊಳ್ಳಲು ಅವರ ಬಳಿಯಿಂದ ಸಾಧ್ಯವೇ ಆಗಲಿಲ್ಲ. ಜಡ್ಜ್​ಗಳು ಶಿವಣ್ಣ ಅವರನ್ನು ಸಮಾಧಾನ ಮಾಡಿದರು. ರಕ್ಷಿತಾ ಕೂಡ ಶಿವಣ್ಣ ಅವರನ್ನು ಸಮಾಧಾನ ಮಾಡೋಕೆ ಪ್ರಯತ್ನಿಸಿದರು. ಕೊನೆಗೂ ಅವರು ಸಮಾಧಾನಗೊಂಡರು.

View this post on Instagram

A post shared by Zee Kannada (@zeekannada)

ಇದನ್ನೂ ಓದಿ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ಶೋ ಅನ್ನು ಆ್ಯಂಕರ್ ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ. ತಾಯಿಯ ಫೋಟೋವನ್ನು ಪ್ರದರ್ಶನ ಮಾಡಿ ಕಣ್ಣೀರು ಹಾಕಿಸಿದ್ದಕ್ಕೆ ಅವರು ಶಿವರಾಜ್​ಕುಮಾರ್ ಬಳಿ ಕ್ಷಮೆ ಕೇಳಿದರು. ಜೀ ಕನ್ನಡ ವಾಹಿನಿ ಇದರ ಪ್ರೋಮೋ ಹಂಚಿಕೊಂಡಿದೆ. ಇದಕ್ಕೆ ವೀಕ್ಷಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada