‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?

Shivarajkumar | Rajinikanth: ಆಗಸ್ಟ್​ ವೇಳೆಗೆ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಇನ್ನುಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ವರದಿ ಆಗಿದೆ.

‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?
ಗೀತಾ ಶಿವರಾಜ್​ಕುಮಾರ್​, ರಜನಿಕಾಂತ್​, ಶಿವರಾಜ್​ಕುಮಾರ್ (ಫೈಲ್​ ಫೋಟೋ)
Follow us
| Edited By: shivaprasad.hs

Updated on:May 05, 2022 | 3:05 PM

ಚಂದನವನದಲ್ಲಿ ಬ್ಯಾಕ್​ ಟು ಬ್ಯಾಟ್​ ಸಿನಿಮಾ ಮಾಡುತ್ತ ಅತಿ ಹೆಚ್ಚು ಬ್ಯುಸಿ ಆಗಿರುವ ನಟ ಎಂದರೆ ಅದು ಶಿವರಾಜ್​ಕುಮಾರ್​. ಹಿರಿಯರು-ಕಿರಿಯರು ಎಂಬ ಭೇದ ಇಲ್ಲದೇ ಎಲ್ಲ ನಿರ್ದೇಶಕರ ಜೊತೆಗೂ ಅವರು ಕೆಲಸ ಮಾಡುತ್ತಾರೆ. ಈವರೆಗೂ 125ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿರುವ ಶಿವರಾಜ್​ಕುಮಾರ್​ (Shivarajkumar) ಅವರ ಅಭಿಮಾನಿ ಬಳಗ ದೊಡ್ಡದು. ಅವರ ಜೊತೆ ಕೆಲಸ ಮಾಡಲು ಪರಭಾಷೆಯ ಖ್ಯಾತ ನಿರ್ದೇಶಕರೆಲ್ಲ ಆಸಕ್ತಿ ತೋರುತ್ತಿದ್ದಾರೆ. ಈಗ ‘ಹ್ಯಾಟ್ರಿಕ್​ ಹೀರೋ’ ಅಭಿನಯಿಸಲಿರುವ ಮುಂದಿನ ಸಿನಿಮಾ ಬಗ್ಗೆ ಗುಸುಗುಸು ಕೇಳಿಬಂದಿದೆ. ಹೊಸ ಚಿತ್ರದಲ್ಲಿ ಶಿವರಾಜ್​ಕುಮಾರ್​ ಮತ್ತು ‘ಸೂಪರ್​ ಸ್ಟಾರ್​’ ರಜನಿಕಾಂತ್​ (Rajinikanth) ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ‘ಬೀಸ್ಟ್​’ ಖ್ಯಾತಿಯ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ (Nelson Dilipkumar) ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ ಎಂದು ವರದಿ ಆಗಿದೆ. ಈ ಸುದ್ದಿ ಕೇಳಿ ಶಿವರಾಜ್​ಕುಮಾರ್​ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಒಂದು ವೇಳೆ ಈ ಮಾಹಿತಿ ಖಚಿತವೇ ಆಗಿದ್ದರೆ ಇದೇ ಮೊದಲ ಬಾರಿಗೆ ಶಿವರಾಜ್​ಕುಮಾರ್​ ಮತ್ತು ರಜನಿಕಾಂತ್​ ಅವರು ಒಟ್ಟಿಗೆ ನಟಿಸಿದಂತಾಗುತ್ತದೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದು ರಜನಿಕಾಂತ್​ ನಟಿಸಲಿರುವ 169ನೇ ಸಿನಿಮಾ ಆಗಿರಲಿದೆ. ರಜನಿಕಾಂತ್​ ಅವರು ನಾಯಕನಾಗಿ ಅಭಿನಯಿಸಲಿದ್ದು, ಶಿವರಾಜ್​ಕುಮಾರ್​ ಕೂಡ ಒಂದು ಮುಖ್ಯಪಾತ್ರವನ್ನು ಮಾಡಲಿದ್ದಾರಂತೆ. ಇದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಪ್ರತಿಷ್ಠಿತ ಸನ್​ ಪಿಕ್ಚರ್ಸ್​ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಈ ಬಗ್ಗೆ ಮೂಲಗಳು ತಿಳಿಸಿವೆ ಎಂದು ‘ಸಿನಿಮಾ​ ಎಕ್ಸ್​ಪ್ರೆಸ್’​ ವರದಿ ಮಾಡಿದೆ.

ನೆಲ್ಸನ್​ ದಿಲೀಪ್​ ಕುಮಾರ್​ ಅವರು ಈಗಾಗಲೇ ಶಿವರಾಜ್​ಕುಮಾರ್​ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಶೀಘ್ರವೇ ಅವರು ಬೆಂಗಳೂರಿಗೆ ಬಂದು ಇನ್ನೊಂದು ಸುತ್ತಿನ ಚರ್ಚೆ ನಡೆಸಲಿದ್ದಾರೆ. ಆಗಸ್ಟ್​ ವೇಳೆಗೆ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಇನ್ನುಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ

ಈಗಾಗಲೇ ತಿಳಿದಿರುವಂತೆ ರಜನಿಕಾಂತ್​ ಅವರಿಗೆ ಕನ್ನಡ ಚಿತ್ರರಂಗದ ಜೊತೆ ಒಳ್ಳೆಯ ನಂಟು ಇದೆ. ಅದರಲ್ಲೂ ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ಅವರು ಮೊದಲಿನಿಂದಲೂ ಒಡನಾಟ ಹೊಂದಿದ್ದಾರೆ. ಅಣ್ಣಾವ್ರ ಜೊತೆ ಅವರಿಗೆ ಸ್ನೇಹವಿತ್ತು. ಅಣ್ಣಾವ್ರ ಮಕ್ಕಳ ಸಿನಿಮಾಗಳಿಗೂ ಅವರು ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಈಗ ಶಿವರಾಜ್​ಕುಮಾರ್​ ಮತ್ತು ರಜನಿಕಾಂತ್​ ಒಟ್ಟಾಗಿ ನಟಿಸಿದರೆ ಅದು ಹೈವೋಲ್ಟೇಜ್​ ಸಿನಿಮಾ ಆಗಿರಲಿದೆ ಎಂಬುದರಲ್ಲಿ ಅನುಮಾನವೇ ಬೇಡ.

ಅನೇಕ ಸಿನಿಮಾಗಳ ಕೆಲಸಗಳಲ್ಲಿ ಶಿವಣ್ಣ ತೊಡಗಿಕೊಂಡಿದ್ದಾರೆ. ‘ಬೈರಾಗಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ‘ವೇದ’ ಸಿನಿಮಾ ಶೂಟಿಂಗ್​ ಚಾಲ್ತಿಯಲ್ಲಿದೆ. ಯೋಗರಾಜ್​ ಭಟ್​ ಜೊತೆಗೂ ಶಿವರಾಜ್​ಕುಮಾರ್​ ಒಂದು ಸಿನಿಮಾ ಮಾಡಬೇಕಿದೆ. ಇದೆಲ್ಲದರ ನಡುವೆ ನೆಲ್ಸನ್​ ದಿಲೀಪ್​ ಕುಮಾರ್​ ಅವರ ನ್ಯೂಸ್​ ಕೇಳಿಬಂದಿದೆ. ಕಾಲಿವುಡ್​ನಲ್ಲಿ ನೆಲ್ಸನ್​ ದಿಲೀಪ್​ ಕುಮಾರ್ ಜನಪ್ರಿಯರಾಗಿದ್ದಾರೆ. ‘ದಳಪತಿ’ ವಿಜಯ್​ ನಟನೆಯ ‘ಬೀಸ್ಟ್​’ ಚಿತ್ರಕ್ಕೆ ಅವರು ನಿರ್ದೇಶನ ಮಾಡಿದ್ದರು. ‘ಕೆಜಿಎಫ್​ 2’ ಎದುರು ಬಿಡುಗಡೆಯಾದ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಈಗ ಮುಂದಿನ ಸಿನಿಮಾದಲ್ಲಿ ನೆಲ್ಸನ್​ ದಿಲೀಪ್​ ಕುಮಾರ್ ಯಾವ ತಂತ್ರ ಪ್ರಯೋಗ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:09 am, Thu, 5 May 22

ತಾಜಾ ಸುದ್ದಿ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ