‘ಧನುಷ್​ ಒಳ್ಳೆಯ ಅಳಿಯ’ ಎಂದು ಮಗಳ ಗಂಡನನ್ನು ರಜನಿಕಾಂತ್​ ಹೊಗಳಿದ್ದ ವಿಡಿಯೋ ವೈರಲ್​

‘ಧನುಷ್​ ಒಳ್ಳೆಯ ಅಳಿಯ’ ಎಂದು ಮಗಳ ಗಂಡನನ್ನು ರಜನಿಕಾಂತ್​ ಹೊಗಳಿದ್ದ ವಿಡಿಯೋ ವೈರಲ್​
ರಜನಿಕಾಂತ್​, ಧನುಷ್​, ಐಶ್ವರ್ಯಾ

Aishwaryaa Rajinikanth | Dhanush: ‘ಧನುಷ್​ ತುಂಬ ಒಳ್ಳೆಯ ಅಳಿಯ. ಹೆಂಡತಿ ಬಗ್ಗೆ ಕಾಳಜಿ ವಹಿಸುತ್ತಾನೆ’ ಎಂದು ರಜನಿಕಾಂತ್​ ಹೇಳಿದ್ದರು. ಆದರೆ ಇಂದು ಮಗಳು-ಅಳಿಯನ ವಿಚ್ಛೇದನದಿಂದ ಅವರು ಬೇಸರಗೊಂಡಿದ್ದಾರೆ.

TV9kannada Web Team

| Edited By: Madan Kumar

Jan 20, 2022 | 1:59 PM

ಕೆಲವು ಸೆಲೆಬ್ರಿಟಿಗಳನ್ನು ಜನರು ತೀವ್ರವಾಗಿ ಹಚ್ಚಿಕೊಂಡಿರುತ್ತಾರೆ. ಅವರ ಖಾಸಗಿ ಬದುಕಿನ ವಿಚಾರಗಳನ್ನೂ ಅಭಿಮಾನಿಗಳು ಫಾಲೋ ಮಾಡುತ್ತಾರೆ. ನಟ ಧನುಷ್ (Dhanush)​ ಮತ್ತು ಐಶ್ವರ್ಯಾ ರಜನಿಕಾಂತ್​ ದಂಪತಿಯನ್ನು ಫ್ಯಾನ್ಸ್​ ಹೆಚ್ಚು ಇಷ್ಟಪಡುತ್ತಿದ್ದರು. ಆದರೆ ಈ ಜೋಡಿ ಏಕಾಏಕಿ ದೂರಾಗುತ್ತಿರುವ ಸುದ್ದಿ ಘೋಷಿಸಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ನಡುವೆ ರಜನಿಕಾಂತ್​ (Rajinikanth) ಅವರ ಹಳೆಯ ಒಂದು ವಿಡಿಯೋ ವೈರಲ್​ ಆಗುತ್ತಿದೆ. ಆ ವಿಡಿಯೋದಲ್ಲಿ ತಮ್ಮ ಅಳಿಯನನ್ನು ಅವರು ಮನಸಾರೆ ಹೊಗಳಿದ್ದರು. ಸಾರ್ವಜನಿಕ ವೇದಿಕೆಯಲ್ಲಿ ಧನುಷ್​ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದರು. ಅಳಿಯನ ಒಳ್ಳೆಯ ಗುಣಗಳನ್ನು ರಜನಿಕಾಂತ್​ ಕೊಂಡಾಡಿದ್ದರು. ಆದರೆ ಈಗ ಏನಾಗಿದೆ? ಧನುಷ್​ ಮತ್ತು ರಜನಿಕಾಂತ್​ ಪುತ್ರಿ ಐಶ್ವರ್ಯಾ (Aishwaryaa Rajinikanth) ಸಂಸಾರದಲ್ಲಿ ಬಿರುಕು ಮೂಡಿದೆ. ಇಬ್ಬರ ನಡುವಿನ ವೈಮನಸ್ಸಿಗೆ ಕಾರಣ ಏನೆಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಅದು ‘ಕಾಳ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ. ರಜನಿಕಾಂತ್​ ನಟನೆಯ ಆ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಧನುಷ್​. ವಂಡರ್​ಬಾರ್​ ಫಿಲ್ಮ್ಸ್​ ಬ್ಯಾನರ್​ನಲ್ಲಿ ಆ ಚಿತ್ರ ತಯಾರಾಗಿತ್ತು. ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ ಮಾತನಾಡಿದ ರಜನಿಕಾಂತ್​ ಅವರು ಧನುಷ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.

‘ಧನುಷ್​ ತುಂಬ ಒಳ್ಳೆಯ ಹುಡುಗ. ತಂದೆ-ತಾಯಿಯನ್ನು ದೇವರಂತೆ ಕಾಣುತ್ತಾನೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಹೆಂಡತಿ ಬಗ್ಗೆ ಕಾಳಜಿ ವಹಿಸುತ್ತಾನೆ. ಆತ ಒಳ್ಳೆಯ ಮನುಷ್ಯ, ಒಳ್ಳೆಯ ತಂದೆ, ಒಳ್ಳೆಯ ಅಳಿಯ ಮತ್ತು ಪ್ರತಿಭಾವಂತ’ ಎಂದು ರಜನಿಕಾಂತ್​ ಹೇಳಿದ್ದರು. ಆದರೆ ಇಂದು ಮಗಳು-ಅಳಿಯನ ವಿಚ್ಛೇದನದಿಂದ ಅವರು ಬೇಸರಗೊಂಡಿದ್ದಾರೆ. ಆ ಕುರಿತು ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಧನುಷ್​​ ತಂದೆ ಹೇಳೋದೇ ಬೇರೆ!

2004ರಲ್ಲಿ ಐಶ್ವರ್ಯಾ ಮತ್ತು ಧನುಷ್​ ಮದುವೆ ನೆರವೇರಿತ್ತು. ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಹಾಗಾಗಿ ಇಬ್ಬರೂ ಪರಸ್ಪರ ಬೇರಾಗಲು ನಿರ್ಧರಿಸಿದ್ದಾರೆ. ಈ ವಿಷಯ ತಿಳಿಸಲು ಧನುಷ್​ ಮಾಡಿದ ಟ್ವೀಟ್​ನಲ್ಲಿ ಡಿವೋರ್ಸ್​ ಎಂಬ ಪದವನ್ನು ಬಳಸಿಲ್ಲ. ಅದಕ್ಕೆ ಪೂರಕ ಎಂಬಂತೆ ಈಗ ಅವರ ತಂದೆ ಕಸ್ತೂರಿ ರಾಜ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮಗ-ಸೊಸೆಯ ಡಿವೋರ್ಸ್​ ಸುದ್ದಿಯನ್ನು ಕಸ್ತೂರಿ ರಾಜ ತಳ್ಳಿ ಹಾಕಿದ್ದಾರೆ. ‘ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ಒಂದು ಕುಟುಂಬದ ಜಗಳ ಅಷ್ಟೇ. ಗಂಡ-ಹೆಂಡತಿ ನಡುವೆ ಇದೆಲ್ಲ ಸಹಜ. ಇದು ಡಿವೋರ್ಸ್​ ಅಲ್ಲ. ಅವರಿಬ್ಬರು ಈಗ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್​​ನಲ್ಲಿ ಇದ್ದಾರೆ. ಅವರಿಗೆ ನಾನು ಒಂದಷ್ಟು ಸಲಹೆ ನೀಡಿದ್ದೇನೆ’ ಎಂದು ಕಸ್ತೂರಿ ರಾಜ ಹೇಳಿದ್ದಾರೆ.

ಇದನ್ನೂ ಓದಿ:

ಧನುಷ್​-ಐಶ್ವರ್ಯಾ ಲವ್​ ಸ್ಟೋರಿ; 21ನೇ ವಯಸ್ಸಿಗೆ ಪ್ರೀತಿಸಿ ಮದುವೆ ಆಗಿದ್ದ ನಟ

‘ಮಹಾಭಾರತ’ ಸೀರಿಯಲ್​​ ಕೃಷ್ಣ ಪಾತ್ರಧಾರಿ ನಿತೀಶ್​ ಭಾರದ್ವಜ್​ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ​

Follow us on

Related Stories

Most Read Stories

Click on your DTH Provider to Add TV9 Kannada