‘ಧನುಷ್​-ಐಶ್ವರ್ಯಾ ವಿಚ್ಛೇದನ ಪಡೆದಿಲ್ಲ, ಇದು ಸಣ್ಣ ಜಗಳ ಅಷ್ಟೇ’; ಧನುಷ್ ತಂದೆ ಅಚ್ಚರಿಯ ಹೇಳಿಕೆ​

‘ಧನುಷ್​-ಐಶ್ವರ್ಯಾ ವಿಚ್ಛೇದನ ಪಡೆದಿಲ್ಲ, ಇದು ಸಣ್ಣ ಜಗಳ ಅಷ್ಟೇ’; ಧನುಷ್ ತಂದೆ ಅಚ್ಚರಿಯ ಹೇಳಿಕೆ​
ಕಸ್ತೂರಿ ರಾಜ, ಐಶ್ವರ್ಯಾ, ಧನುಷ್

Dhanush | Aishwaryaa: ಧನುಷ್​-ಐಶ್ವರ್ಯಾ ಅವರ ಡಿವೋರ್ಸ್​ ಸುದ್ದಿಯನ್ನು ಕಸ್ತೂರಿ ರಾಜ ತಳ್ಳಿ ಹಾಕಿದ್ದಾರೆ. ‘ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ವಿಚ್ಛೇದನ​ ಅಲ್ಲ’ ಎಂದು ಅವರು ಹೇಳಿದ್ದಾರೆ.

TV9kannada Web Team

| Edited By: Madan Kumar

Jan 20, 2022 | 12:03 PM

ಕಾಲಿವುಡ್​ನ ಖ್ಯಾತ ನಟ ಧನುಷ್​ (Dhanush) ಅವರು ಐಶ್ವರ್ಯಾ ರಜನಿಕಾಂತ್​ (Aishwaryaa Rajinikanth) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ವಿಚಾರವನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಅಧಿಕೃತಗೊಳಿಸಿದ್ದಾರೆ. ಜ.17ರ ರಾತ್ರಿಯೇ ಅವರು ಈ ಕುರಿತು ಟ್ವೀಟ್​ ಮಾಡಿದ್ದರು. ಆದರೆ ಧನುಷ್​-ಐಶ್ವರ್ಯಾ ಡಿವೋರ್ಸ್​ ಪಡೆದಿಲ್ಲ ಎಂಬ ಮಾಹಿತಿ ಈಗ ಕೇಳಿಬಂದಿದೆ. ಹಾಗಂತ ಇದು ಗಾಸಿಪ್​ ಅಲ್ಲ. ಧನುಷ್​ ತಂದೆ ಕಸ್ತೂರಿ ರಾಜ (Kasthuri Raja) ಅವರು ಈ ಮಾತನ್ನು ಹೇಳಿದ್ದಾರೆ. ತಮಿಳಿನ ‘ದಿನತಂತಿ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ಮುಖ್ಯ ವಿಚಾರಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಸ್ತೂರಿ ರಾಜ ಅವರ ಮಾತು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ‘ಇದೊಂದು ಫ್ಯಾಮಿಲಿಯ ಸಣ್ಣ ಜಗಳ ಅಷ್ಟೇ’ ಎಂದು ಅವರು ಹೇಳಿದ್ದಾರೆ. ಹಾಗಾದರೆ ಧನುಷ್​ ಮತ್ತು ಐಶ್ವರ್ಯಾ ಮತ್ತೆ ಒಂದಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

2004ರಲ್ಲಿ ಐಶ್ವರ್ಯಾ ಮತ್ತು ಧನುಷ್​ ಮದುವೆ ನೆರವೇರಿತ್ತು. ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಹಾಗಾಗಿ ಇಬ್ಬರೂ ಪರಸ್ಪರ ಬೇರಾಗಲು ನಿರ್ಧರಿಸಿದ್ದಾರೆ. ಈ ವಿಷಯ ತಿಳಿಸಲು ಧನುಷ್​ ಮಾಡಿದ ಟ್ವೀಟ್​ನಲ್ಲಿ ಡಿವೋರ್ಸ್​ ಎಂಬ ಪದವನ್ನು ಬಳಸಿಲ್ಲ. ಅದಕ್ಕೆ ಪೂರಕ ಎಂಬಂತೆ ಈಗ ಅವರ ತಂದೆ ಕಸ್ತೂರಿ ರಾಜ ಅವರು ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಮಗ-ಸೊಸೆಯ ಡಿವೋರ್ಸ್​ ಸುದ್ದಿಯನ್ನು ಕಸ್ತೂರಿ ರಾಜ ತಳ್ಳಿ ಹಾಕಿದ್ದಾರೆ. ‘ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ಒಂದು ಕುಟುಂಬದ ಜಗಳ ಅಷ್ಟೇ. ಗಂಡ-ಹೆಂಡತಿ ನಡುವೆ ಇದೆಲ್ಲ ಸಹಜ. ಇದು ಡಿವೋರ್ಸ್​ ಅಲ್ಲ. ಅವರಿಬ್ಬರು ಈಗ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್​​ನಲ್ಲಿ ಇದ್ದಾರೆ. ಅವರಿಗೆ ನಾನು ಒಂದಷ್ಟು ಸಲಹೆ ನೀಡಿದ್ದೇನೆ’ ಎಂದು ಕಸ್ತೂರಿ ರಾಜ ಹೇಳಿದ್ದಾರೆ.

ಧನುಷ್​ ಟ್ವೀಟ್​ನಲ್ಲಿ ಏನಿತ್ತು?

‘18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ಹಾದಿಯಲ್ಲಿ ಇಬ್ಬರೂ ಬೆಳೆದೆವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಿಕೆಯನ್ನು ಕಲಿತೆವು. ಈಗ ಇಬ್ಬರೂ ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವೆವು’ ಎಂದು ಧನುಷ್​ ಟ್ವೀಟ್​ ಮಾಡಿದ್ದರು. ಅಲ್ಲದೇ ಇಬ್ಬರ ಖಾಸಗಿತನವನ್ನು ಗೌರವಿಸುವಂತೆ ಅವರು ಮನವಿ ಮಾಡಿಕೊಂಡಿದ್ದರು. ಧನುಷ್​ ಅವರ ಈ ನಿರ್ಧಾರದಿಂದ ಅಭಿಮಾನಿಗಳಿಗೆ ಶಾಕ್​ ಆಗಿದ್ದು ನಿಜ.

ಇದನ್ನೂ ಓದಿ:

ಧನುಷ್​-ಐಶ್ವರ್ಯಾ ಲವ್​ ಸ್ಟೋರಿ; 21ನೇ ವಯಸ್ಸಿಗೆ ಪ್ರೀತಿಸಿ ಮದುವೆ ಆಗಿದ್ದ ನಟ

‘ಮಹಾಭಾರತ’ ಸೀರಿಯಲ್​​ ಕೃಷ್ಣ ಪಾತ್ರಧಾರಿ ನಿತೀಶ್​ ಭಾರದ್ವಜ್​ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ​

Follow us on

Related Stories

Most Read Stories

Click on your DTH Provider to Add TV9 Kannada