Kannada News » Photo gallery » Duniya Vijay Birthday: Fan wishes NBK 107 movie actor with special hairstyle
ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿದ ಅಭಿಮಾನಿ; ಇಲ್ಲಿವೆ ಫೋಟೋಗಳು
Duniya Vijay Birthday: ಇಂದು (ಜ.20) ನಟ ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಆದರೆ ಕೊರೊನಾ ಮುನ್ನೆಚ್ಚರಿಕೆಯ ಕಾರಣದಿಂದ ಅವರು ಅಭಿಮಾನಿಗಳ ಜತೆ ಸೇರಿ ಬರ್ತ್ಡೇ ಆಚರಿಸಿಕೊಳ್ಳುತ್ತಿಲ್ಲ.
ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಂದು (ಜ.20) ಬರ್ತ್ಡೇ ಪ್ರಯುಕ್ತ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
1 / 5
ದುನಿಯಾ ವಿಜಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಮಂಜು ಎಂಬ ಅಭಿಮಾನಿಯು ವಿಶೇಷವಾಗಿ ಶುಭ ಕೋರಿದ್ದಾರೆ. ಆ ಫೋಟೋಗಳು ವೈರಲ್ ಆಗಿವೆ.
2 / 5
ದುನಿಯಾ ವಿಜಯ್ ನಟನೆಯ ಮುಂಬರುವ ಬಹುನಿರೀಕ್ಷಿತ ತೆಲುಗು ಚಿತ್ರಕ್ಕೆ ಈ ಮೂಲಕ ಮಂಜು ಶುಭ ಹಾರೈಸಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ NBK 107 ಎಂದು ಶೀರ್ಷಿಕೆ ಇಡಲಾಗಿದೆ.
3 / 5
ತಲೆಯಲ್ಲಿ NBK 107 ಮತ್ತು DV ಎಂದು ಬರೆಸಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ನಟನ ಮೇಲಿರುವ ಅಭಿಮಾನವನ್ನು ಮಂಜು ಪ್ರದರ್ಶಿಸಿದ್ದಾರೆ. ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಎಲ್ಲರೂ ವಿಶ್ ಮಾಡುತ್ತಿದ್ದಾರೆ.
4 / 5
ಕೊರೊನಾ ವೈರಸ್ ಹರಡುವ ಭೀತಿ ಜೋರಾಗಿದೆ. ಆ ಕಾರಣದಿಂದ ಈ ಬಾರಿ ಅಭಿಮಾನಿಗಳ ಜೊತೆ ಸೇರಿ ಬರ್ತ್ಡೇ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದುನಿಯಾ ವಿಜಯ್ ತಿಳಿಸಿದ್ದಾರೆ.