AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಾಭಾರತ’ ಸೀರಿಯಲ್​​ ಕೃಷ್ಣ ಪಾತ್ರಧಾರಿ ನಿತೀಶ್​ ಭಾರದ್ವಜ್​ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ​

Nitish Bhardwaj Divorce: 2009ರಲ್ಲಿ ನಿತೀಶ್​​ ಭಾರದ್ವಜ್​ ಮತ್ತು ಸ್ಮಿತಾ ವಿವಾಹ ನೆರವೇರಿತ್ತು. ಇತ್ತೀಚಿನ ವರ್ಷಗಳಲ್ಲಿ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿದೆ.

‘ಮಹಾಭಾರತ’ ಸೀರಿಯಲ್​​ ಕೃಷ್ಣ ಪಾತ್ರಧಾರಿ ನಿತೀಶ್​ ಭಾರದ್ವಜ್​ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ​
ನಿತೀಶ್ ಭಾರದ್ವಜ್
TV9 Web
| Updated By: ಮದನ್​ ಕುಮಾರ್​|

Updated on: Jan 19, 2022 | 11:30 AM

Share

ಸೆಲೆಬ್ರಿಟಿಗಳು ವಿಚ್ಛೇದನ (Divorce) ಪಡೆಯುತ್ತಿರುವ ಸುದ್ದಿ ಪದೇಪದೇ ಕೇಳಿಬರುತ್ತಿದೆ. ಆಮಿರ್​ ಖಾನ್​-ಕಿರಣ್​ ರಾವ್​, ಸಮಂತಾ-ನಾಗ ಚೈತನ್ಯ, ಧನುಷ್​-ಐಶ್ವರ್ಯಾ ಸೇರಿದಂತೆ ಅನೇಕ ಸ್ಟಾರ್​ ದಂಪತಿಗಳು ಡಿವೋರ್ಸ್​ ಪಡೆಯುವ ಮೂಲಕ ಸುದ್ದಿ ಆಗಿದ್ದಾರೆ. ಆ ಸಾಲಿಗೆ ಖ್ಯಾತ ಕಿರುತೆರೆ ನಟ ನಿತೀಶ್​​ ಭಾರದ್ವಜ್​ (Nitish Bhardwaj) ಕೂಡ ಸೇರ್ಪಡೆ ಆಗುತ್ತಿರುವುದು ಅಚ್ಚರಿ ಮೂಡಿಸಿದೆ. ‘ಮಹಾಭಾರತ’ (Mahabharata Serial) ಸೀರಿಯಲ್​ನಲ್ಲಿ ಕೃಷ್ಣನ ಪಾತ್ರ ಮಾಡುವ ಮೂಲಕ ಫೇಮಸ್​ ಆದವರು ನಿತೀಶ್​​ ಭಾರದ್ವಜ್​. ಈಗ ಅವರಿಗೆ 58 ವರ್ಷ ವಯಸ್ಸು. ತಮ್ಮ ಎರಡನೇ ಪತ್ನಿ ಸ್ಮಿತಾ ಅವರಿಂದ ವಿಚ್ಛೇದನ ಪಡೆಯಲು 2019ರಲ್ಲೇ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದಾಗಿ ನಿತೀಶ್​​ ತಿಳಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ವಿಚಾರ ಬಾಯಿಬಿಟ್ಟಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿ ಹೊರಹಾಕಿದ್ದಾರೆ. ಸೆಲೆಬ್ರಿಟಿಗಳು ಸಾಲು ಸಾಲಾಗಿ ವಿಚ್ಛೇದನ ಪಡೆಯುತ್ತಿರುವುದರಿಂದ ‘ಡಿವೋರ್ಸ್​ ಎಂಬುದು ಹೊಸ ಟ್ರೆಂಡ್​ ಆಗಿದೆ’ ಎಂದು ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ. ಈವರೆಗೂ ವಿಚ್ಛೇದನ ಪಡೆದ ಅನೇಕ ಸೆಲೆಬ್ರಿಟಿಗಳ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ನಿತೀಶ್​ ಭಾರದ್ವಜ್​ ಅವರು 1991ರಲ್ಲಿ ಮೋನಿಷಾ ಪಾಟಿಲ್​ ಜೊತೆ ಮದುವೆ ಆಗಿದ್ದರು. ನಂತರ 2005ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಅವರಿಬ್ಬರ ದಾಂಪತ್ಯ ಜೀವನ ಅಂತ್ಯವಾಗಿತ್ತು. ಬಳಿಕ 2009ರಲ್ಲಿ ನಿತೀಶ್​​ ಭಾರದ್ವಜ್​ ಮತ್ತು ಸ್ಮಿತಾ ವಿವಾಹ ನೆರವೇರಿತು. ಇತ್ತೀಚಿನ ವರ್ಷಗಳಲ್ಲಿ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿದೆ. ಹಾಗಾಗಿ ಜೀವನದ ಪಯಣದಲ್ಲಿ ಬೇರೆ ಬೇರೆಯಾಗಲು ಅವರು ನಿರ್ಧರಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಸ್ಮಿತಾ ಸೇವೆ ಸಲ್ಲಿಸಿದ್ದಾರೆ. ಸ್ಮಿತಾ ಹಾಗೂ ನಿತೀಶ್​​ ಜೋಡಿಗೆ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದಾರೆ. ಮೊದಲ ಪತ್ನಿಯಿಂದ ನಿತೀಶ್​​ ಅವರು ಇಬ್ಬರು ಮಕ್ಕಳನ್ನು ಪಡೆದಿದ್ದರು.

ಬಿ.ಆರ್​. ಚೋಪ್ರಾ ನಿರ್ದೇಶನದ ಮಹಾಭಾರತ ಸೀರಿಯಲ್​ 1988ರಲ್ಲಿ ಪ್ರಸಾರ ಆರಂಭಿಸಿತು. ಆ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡುವ ಮೂಲಕ ರಾತ್ರೋರಾತ್ರಿ ನಿತೀಶ್​​ ಭಾರದ್ವಜ್​ ಸ್ಟಾರ್​ ಆಗಿ ಬಿಟ್ಟರು. ಆ ಪಾತ್ರ ಮಾಡಿದಾಗ ಅವರಿಗೆ ಕೇವಲ 23 ವರ್ಷ ವಯಸ್ಸು. ನಂತರ 2000ನೇ ಇಸವಿಯಲ್ಲಿ ಪ್ರಸಾರವಾದ ‘ವಿಷ್ಣು ಪುರಾಣ’ ಧಾರಾವಾಹಿಯಲ್ಲಿ ವಿಷ್ಣು ಪಾತ್ರವನ್ನು ನಿತೀಶ್​​ ಮಾಡಿದರು. ವಿಷ್ಣುವಿನ ಹಲವು ಅವತಾರಗಳಲ್ಲಿ ಅವರು ಕಾಣಿಸಿಕೊಂಡರು. 2002ರ ‘ರಾಮಾಯಣ’ ಸೀರಿಯಲ್​ನಲ್ಲಿ ಅವರು ರಾಮ ಮತ್ತು ವಿಷ್ಣು ಪಾತ್ರವನ್ನು ಮಾಡಿದರು. ‘ಗೀತ ರಹಸ್ಯ’ ಮತ್ತು ‘ಅಪರಾಧಿ’ ಸೀರಿಯಲ್​ಗಳನ್ನು ನಿತೀಶ್​​ ನಿರ್ದೇಶನ ಮಾಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ ಅನುಭವವೂ ಅವರಿಗೆ ಇದೆ. ಈಗ ವಿಚ್ಛೇದನದ ಕಾರಣಕ್ಕೆ ಅವರು ಸುದ್ದಿ ಆಗುತ್ತಿದ್ದಾರೆ.

ಇದನ್ನೂ ಓದಿ:

ಧನುಷ್​-ಐಶ್ವರ್ಯಾ ಲವ್​ ಸ್ಟೋರಿ; 21ನೇ ವಯಸ್ಸಿಗೆ ಪ್ರೀತಿಸಿ ಮದುವೆ ಆಗಿದ್ದ ನಟ

‘ಅವನಿಗೆ ನನ್ನ ಬಗ್ಗೆಯೇ ಹೆಚ್ಚು ಚಿಂತೆ ಆಗಿತ್ತು’; ಮಗನ ಡಿವೋರ್ಸ್​ ಬಗ್ಗೆ ಬಾಯ್ಬಿಟ್ಟ ನಾಗಾರ್ಜುನ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್