ಗರ್ಲ್ಫ್ರೆಂಡ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೃಥ್ವಿ ಷಾ; ಕಾಲೆಳೆದ ಕಪಿಲ್ ಶರ್ಮಾ
‘ದಿ ಕಪಿಲ್ ಶರ್ಮಾ ಶೋ’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಕಾಮಿಡಿ ಶೋ. ಈ ಬಾರಿ ಟೀಂ ಇಂಡಿಯಾ ಆಟಗಾರರಾದ ಪೃಥ್ವಿ ಷಾ ಹಾಗೂ ಶಿಖರ್ ಧವನ್ ಆಗಮಿಸಿದ್ದರು. ಈ ವೇಳೆ ಪೃಥ್ವಿಗೆ ಗರ್ಲ್ಫ್ರೆಂಡ್ ಬಗ್ಗೆ ಪ್ರಶ್ನೆ ಒಂದನ್ನು ಕೇಳಲಾಯಿತು.
ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಖಾಸಗಿ ವಿಚಾರವನ್ನು ಆದಷ್ಟು ಗುಟ್ಟಾಗಿ ಇಡೋಕೆ ಪ್ರಯತ್ನಿಸುತ್ತಾರೆ. ಆ ಬಗ್ಗೆ ಸುದ್ದಿ ಲೀಕ್ ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳಲ್ಲಿ ನಾನಾ ರೀತಿಯ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಪಾಪರಾಜಿಗಳ ಕ್ಯಾಮೆರಾ ಇವರ ಮೇಲೆ ನೆಟ್ಟಿರುತ್ತದೆ. ಈ ಕಾರಣಕ್ಕೆ, ಪ್ರೀತಿ-ಪ್ರೇಮದ ವಿಚಾರದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಗುಟ್ಟು ಕಾಯ್ದುಕೊಳ್ಳುತ್ತಾರೆ. ಸಾಕಷ್ಟು ಕ್ರಿಕೆಟರ್ಗಳು ಕೂಡ ವೈಯಕ್ತಿಕ ವಿಚಾರವನ್ನು ಹೇಳಿಕೊಳ್ಳೋಕೆ ಹಿಂದೇಟು ಹಾಕುತ್ತಾರೆ. ಈಗ ಗರ್ಲ್ಫ್ರೆಂಡ್ ಬಗ್ಗೆ ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ (Team India) ಆಟಗಾರ ಪೃಥ್ವಿ ಷಾ (Prithvi Shaw) ನೇರವಾಗಿ ಉತ್ತರಿಸಿದ್ದಾರೆ. ಆದರೆ, ಉತ್ತರ ಹೇಳಿದ ನಂತರ ಅವರು ಮಾಡಿದ ರೀತಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
‘ದಿ ಕಪಿಲ್ ಶರ್ಮಾ ಶೋ’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಕಾಮಿಡಿ ಶೋ. ಈ ಶೋಗೆ ಸಿನಿಮಾ ತಂಡದವರು ಮಾತ್ರವಲ್ಲದೆ, ಬೇರೆಬೇರೆ ಕ್ಷೇತ್ರದವರೂ ಆಗಮಿಸುತ್ತಾರೆ. ಕ್ರಿಕೆಟ್ ಲೋಕದ ಸಾಕಷ್ಟು ಮಂದಿ ಈ ಶೋಗೆ ಆಗಮಿಸಿದ್ದರು. ಈ ಬಾರಿ ಟೀಂ ಇಂಡಿಯಾ ಆಟಗಾರರಾದ ಪೃಥ್ವಿ ಷಾ ಹಾಗೂ ಶಿಖರ್ ಧವನ್ ಆಗಮಿಸಿದ್ದರು. ಈ ವೇಳೆ ಪೃಥ್ವಿಗೆ ಗರ್ಲ್ಫ್ರೆಂಡ್ ಬಗ್ಗೆ ಪ್ರಶ್ನೆ ಒಂದನ್ನು ಕೇಳಲಾಯಿತು. ಪೃಥ್ವಿ ಇದಕ್ಕೆ ನೇರವಾಗಿ ಉತ್ತರ ನೀಡಿದರು.
‘ನನಗೆ ಗರ್ಲ್ಫ್ರೆಂಡ್ ಇಲ್ಲ’ ಎನ್ನುವ ಮಾತನ್ನು ಪೃಥ್ವಿ ಷಾ ಹೇಳಿದರು. ಆ ಬಳಿಕ ನಾಲಿಗೆ ಕಚ್ಚಿಕೊಂಡರು. ಸೋನಿ ಟಿವಿ ಈ ಬಗ್ಗೆ ಪ್ರೋಮೋ ಹಂಚಿಕೊಂಡಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ನಟಿ ಪ್ರಾಚಿ ಸಿಂಗ್ ಜತೆ ಪೃಥ್ವಿ ಷಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿಲ್ಲ.
View this post on Instagram
ಇತ್ತೀಚೆಗೆ ಚಿತ್ರರಂಗದಲ್ಲಿ ಬಯೋಪಿಕ್ ಟ್ರೆಂಡ್ ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಕಷ್ಟು ಜನರ ಬಯೋಪಿಕ್ಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಅನೇಕರು ಯಶಸ್ಸು ಕಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಕಾಮಿಡಿಯನ್ ಕಪಿಲ್ ಶರ್ಮಾ ಕುರಿತು ಈಗ ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಕಪಿಲ್ ಶರ್ಮಾ ಅವರ ಆರಂಭಿಕ ಜೀವನ ಹೇಗಿತ್ತು? ಅವರು ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ? ಹೀಗೆ ಹಲವು ವಿಚಾರಗಳ ಬಗ್ಗೆ ಈ ಬಯೋಪಿಕ್ನಲ್ಲಿ ಹೇಳಲಾಗುತ್ತದೆ. ‘ಫನ್ಕಾರ್’ ಎನ್ನುವ ಶೀರ್ಷಿಕೆಯನ್ನು ಸಿನಿಮಾಗೆ ಇಡಲಾಗಿದೆ. ಮೃಗದೀಪ್ ಸಿಂಗ್ ಲಂಬಾ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ಕಪಿಲ್ ಶರ್ಮಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ
ಹೆಂಡತಿ ಬಿಟ್ಟುಹೋದ ನೋವು, ಆರ್ಥಿಕ ಸಂಕಷ್ಟ; ಆತ್ಮಹತ್ಯೆಗೆ ಯತ್ನಿಸಿದ ‘ದಿ ಕಪಿಲ್ ಶರ್ಮಾ ಶೋ’ ಹಾಸ್ಯನಟ