ಐಷಾರಾಮಿ ಕಾರುಗಳ ಒಡೆಯ ಪೃಥ್ವಿರಾಜ್ ಮನೆಗೆ ಮತ್ತೊಂದು ಲಕ್ಷುರಿ ಕಾರು; ಇದರ ಬೆಲೆ ಎಷ್ಟು ಗೊತ್ತಾ?
ಮಿನಿ ಕೂಪರ್ ಜೆಸಿಡಬ್ಲ್ಯು ಕಾರನ್ನು ಪೃಥ್ವಿರಾಜ್ ಖರೀದಿ ಮಾಡಿದ್ದಾರೆ. ನೋಡೋಕೆ ಚಿಕ್ಕದಿದ್ದರೂ ಈ ಕಾರಿನ ಬೆಲೆ ಬರೋಬ್ಬರಿ 45.5 ಲಕ್ಷ ರೂಪಾಯಿ. ಈ ಕಾರು ಸಾಕಷ್ಟು ಐಷಾರಾಮಿ ಫೀಚರ್ಗಳನ್ನು ಹೊಂದಿದೆ.
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ಗೆ ಮಾಲಿವುಡ್ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. 2002ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರಿಗೆ ಇಲ್ಲಿಯವರೆಗೆ ಕೊಂಚವೂ ಬೇಡಿಕೆ ಕಡಿಮೆ ಆಗಿಲ್ಲ. ಅವರ ಕೈಯಲ್ಲಿ ಈಗ ಬರೋಬ್ಬರಿ 10ಕ್ಕೂ ಅಧಿಕ ಸಿನಿಮಾಗಳಿವೆ. ಹೀಗಿರುವಾಗಲೇ ಪೃಥ್ವಿರಾಜ್ ಹೊಸ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.
ಮಿನಿ ಕೂಪರ್ ಜೆಸಿಡಬ್ಲ್ಯು ಕಾರನ್ನು ಪೃಥ್ವಿರಾಜ್ ಖರೀದಿ ಮಾಡಿದ್ದಾರೆ. ನೋಡೋಕೆ ಚಿಕ್ಕದಿದ್ದರೂ ಈ ಕಾರಿನ ಬೆಲೆ ಬರೋಬ್ಬರಿ 45.5 ಲಕ್ಷ ರೂಪಾಯಿ. ಈ ಕಾರು ಸಾಕಷ್ಟು ಐಷಾರಾಮಿ ಫೀಚರ್ಗಳನ್ನು ಹೊಂದಿದೆ. ಅಲ್ಲದೆ, ಈ ಕಾರಿನ ಪರ್ಫಾರ್ಮೆನ್ಸ್ ಕೂಡ ಅದ್ಭುತವಾಗಿದೆ. ಈ ಕಾರಣಕ್ಕೆ ಈ ಕಾರಿಗೆ ಬೆಲೆ ಹೆಚ್ಚು. ಇನ್ನು, ಪೃಥ್ವಿರಾಜ್ ಈ ಕಾರನ್ನು ಖರೀದಿ ಮಾಡುವಾಗ ಸಾಕಷ್ಟು ಬದಲಾವಣೆ ಮಾಡಿಸಿದ್ದಾರೆ. ಇದಕ್ಕಾಗಿ ಅವರು ಹೆಚ್ಚಿನ ಹಣ ಪಾವತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪೃಥ್ವಿರಾಜ್ಗೆ ಕಾರಿನ ಕ್ರೇಜ್ ಹೆಚ್ಚಿದೆ. ಇವರ ಮನೆಯಲ್ಲಿ ಲ್ಯಾಂಬೋರ್ಗಿನಿ, ರೇಂಜ್ ರೋವರ್, ಬಿಎಂಡಬ್ಲ್ಯೂ ಸೇರಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಇದಕ್ಕೆ ಈಗ ಮಿನಿ ಕೂಪರ್ ಕೂಡ ಸೇರ್ಪಡೆ ಆಗಿದೆ. ಈ ಕಾರಿನ ಬಣ್ಣ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿದೆ.
View this post on Instagram
ಪೃಥ್ವಿರಾಜ್ ಅವರು ಕಾರನ್ನು ಶೋ ರೂಮ್ನಲ್ಲಿ ಪಡೆದುಕೊಳ್ಳುತ್ತಿರುವ ಫೋಟೋ ಹಾಗೂ ರಸ್ತೆಯಲ್ಲಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೂಡ ಈ ಫೋಟೋಗಳನ್ನು ತಮ್ಮ ಫ್ಯಾನ್ ಪೇಜ್ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಹಿಂದಿಯಲ್ಲಿ ತೆರೆಗೆ ಬಂದಿದ್ದ ‘ಅಂಧಾಧುನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾ ತೆಲುಗಿಗೂ ರಿಮೇಕ್ ಆಗಿತ್ತು. ಈಗ ಮಲಯಾಳಂನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಪೃಥ್ವಿರಾಜ್ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ತೆರೆಗೆ ಬರೋಕೆ ರೆಡಿ ಆಗಿದೆ. ಇದಲ್ಲದೆ, ಇನ್ನೂ ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ನಾನು ಭಿಕ್ಷುಕಿ, ನಿತ್ಯ ಎಲ್ಲದಕ್ಕೂ ಭಿಕ್ಷೆ ಎತ್ತುತ್ತಲೇ ಇರಬೇಕು; ನಟಿ ವಿಜಯಲಕ್ಷ್ಮಿ
ಪೃಥ್ವಿರಾಜ್ ಸಿನಿಮಾ ವಿರುದ್ಧ ಮುಂದುವರಿದ ಪ್ರತಿಭಟನೆ; ಅಕ್ಷಯ್ ಕುಮಾರ್ ಪ್ರತಿಕೃತಿ ದಹನ