‘ಅವನಿಗೆ ನನ್ನ ಬಗ್ಗೆಯೇ ಹೆಚ್ಚು ಚಿಂತೆ ಆಗಿತ್ತು’; ಮಗನ ಡಿವೋರ್ಸ್​ ಬಗ್ಗೆ ಬಾಯ್ಬಿಟ್ಟ ನಾಗಾರ್ಜುನ

ಸಮಂತಾ-ನಾಗ ಚೈತನ್ಯ ಕುರಿತು ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ಆ ಯಾವ ವಿಚಾರಗಳ ಬಗ್ಗೆಯೂ ನಾಗ ಚೈತನ್ಯ ಮಾತನಾಡಲಿಲ್ಲ. ಮಗನ ಈ ಮೌನವನ್ನು ನಾಗಾರ್ಜುನ ಇಷ್ಟಪಟ್ಟಿದ್ದಾರೆ.

‘ಅವನಿಗೆ ನನ್ನ ಬಗ್ಗೆಯೇ ಹೆಚ್ಚು ಚಿಂತೆ ಆಗಿತ್ತು’; ಮಗನ ಡಿವೋರ್ಸ್​ ಬಗ್ಗೆ ಬಾಯ್ಬಿಟ್ಟ ನಾಗಾರ್ಜುನ
ಅಕ್ಕಿನೇನಿ ನಾಗಾರ್ಜುನ, ಸಮಂತಾ, ನಾಗ ಚೈತನ್ಯ

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ನಂತರ ವಿಚ್ಛೇದನ ಪಡೆದಾಗ ಒಂದು ಕ್ಷಣ ಅಚ್ಚರಿ ಆಗುವುದು ಸಹಜ. ಸೆಲೆಬ್ರಿಟಿ ದಂಪತಿಗಳಾಗಿದ್ದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ವಿಚಾರದಲ್ಲೂ ಹಾಗೆಯೇ ಆಯಿತು. ಕಳೆದ ವರ್ಷ ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಸಮಂತಾ (Samantha) ಅಂತ್ಯ ಹಾಡಿದಾಗ ಅವರ ಅಭಿಮಾನಿಗಳಿಗೆ ಶಾಕ್​ ಆಯಿತು. ಆ ವಿಚಾರದ ಬಗ್ಗೆ ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ಚಿಕ್ಕದೊಂದು ಹೇಳಿಕೆ ಬಿಡುಗಡೆ ಮಾಡಿದ್ದರು. ಬಳಿಕ ಅವರು ಸಂಪೂರ್ಣ ಸೈಲೆಂಟ್​ ಆಗಿಬಿಟ್ಟಿದ್ದರು. ಈಗ ಮಗನ ಡಿವೋರ್ಸ್​ ಬಗ್ಗೆ ಅವರು ಮೌನ ಮುರಿದಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ಬೇರೆ ಬೇರೆ ಆದಾಗ ತಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಸಂಕ್ರಾಂತಿ ಪ್ರಯುಕ್ತ ‘ಬಂಗಾರ‍್ರಾಜು’ ಸಿನಿಮಾ ತೆರೆಕಂಡಿದೆ. ಆ ಚಿತ್ರದ ಪ್ರಚಾರದ ವೇಳೆ ನಾಗಾರ್ಜುನ ಅವರು ಈ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಕೂಡ ನಟಿಸಿದ್ದಾರೆ.

ಫಸ್ಟ್​ಪೋಸ್ಟ್​ಗೆ ನೀಡಿದ ಸಂದರ್ಶನದಲ್ಲಿ ನಾಗಾರ್ಜುನ ಅವರು ಕೆಲವು ಪ್ರಮುಖ ವಿಚಾರಗಳ ಕುರಿತು ಬಾಯ್ಬಿಟ್ಟಿದ್ದಾರೆ. ವಿಚ್ಛೇದನದ ಸುದ್ದಿ ಘೋಷಣೆ ಆಗುವುದಕ್ಕಿಂತ ಮುನ್ನವೇ ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ಡಿವೋರ್ಸ್​ ಸುದ್ದಿ ಅಧಿಕೃತ ಆದ ಬಳಿಕವೂ ಗಾಸಿಪ್​ಗಳು ನಿಲ್ಲಲಿಲ್ಲ. ಆದರೆ ಆ ಯಾವ ವಿಚಾರಗಳ ಬಗ್ಗೆಯೂ ನಾಗ ಚೈತನ್ಯ ಮಾತನಾಡಲಿಲ್ಲ. ಮಗನ ಈ ಮೌನವನ್ನು ನಾಗಾರ್ಜುನ ಇಷ್ಟಪಟ್ಟಿದ್ದಾರೆ.

‘ಈ ಎಲ್ಲ ಸಂದರ್ಭಗಳಲ್ಲಿ ಅವನು ಅಷ್ಟೊಂದು ಶಾಂತನಾಗಿ ಇದ್ದಿದ್ದಕ್ಕೆ ಅವನ ಬಗ್ಗೆ ನನಗೆ ಹೆಮ್ಮೆ ಇದೆ. ಒಂದು ಮಾತು ಹೇಳುವಷ್ಟು ಕೂಡ ಆತ ಪ್ರಚೋದನೆಗೆ ಒಳಗಾಗಲಿಲ್ಲ. ಎಲ್ಲ ತಂದೆಯರ ರೀತಿ ನಾನು ಕೂಡ ಮಗನ ಬಗ್ಗೆ ಚಿಂತೆಗೆ ಒಳಗಾಗಿದ್ದೆ. ಆದರೆ ಅವನಿಗೆ ನನ್ನ ಬಗ್ಗೆಯೇ ಚಿಂತೆ ಜಾಸ್ತಿ ಆಗಿತ್ತು’ ಎಂದು ನಾಗಾರ್ಜುನ ಹೇಳಿದ್ದಾರೆ.

ಕೊವಿಡ್​ ಹಾವಳಿಯ ಕಾರಣದಿಂದ ಅನೇಕ ರಾಜ್ಯಗಳ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿರ್ಬಂಧ ಹೇರಲಾಗಿದೆ. ನೈಟ್​ ಕರ್ಫ್ಯೂ ಹಾಗೂ ವೀಕೆಂಡ್​ ಕರ್ಫ್ಯೂ ಸಹ ಜಾರಿಯಲ್ಲಿದೆ. ಹಾಗಿದ್ದರೂ ಕೂಡ ‘ಬಂಗಾರ‍್ರಾಜು’ ಚಿತ್ರವನ್ನು ಬಿಡುಗಡೆ ಮಾಡಿರುವುದು ಅಚ್ಚರಿಗೆ ಕಾರಣ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾದ ಭವಿಷ್ಯ ಏನಾಗಬಹುದು ಎಂಬ ಕೌತುಕ ನಿರ್ಮಾಣ ಆಗಿದೆ.

ಇದನ್ನೂ ಓದಿ:

ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

Click on your DTH Provider to Add TV9 Kannada