‘ಸಮನ್ವಿ ಸಾವಿಗೆ ಸರ್ಕಾರ ನೇರ ಕಾರಣ’; ರಿಷಿ ಕುಮಾರ ಸ್ವಾಮೀಜಿ ಆರೋಪ
ಸಮನ್ವಿ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ. ಬಣಜಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ತಂದೆ ರೂಪೇಶ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಸಮನ್ವಿ ಪಂಚಭೂತಗಳಲ್ಲಿ ಲೀನಳಾಗಿದ್ದಾಳೆ.
ಜ.13ರಂದು ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ಮೇಲೆ ಬಾಲನಟಿ ಸಮನ್ವಿ ಹಾಗೂ ಕಿರುತೆರೆ ನಟಿ ಅಮೃತಾ ನಾಯ್ಡು ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ಗೆ ಲಾರಿ ಬಂದು ಹೊಡೆಯಿತು. ಮಾರ್ಗಮಧ್ಯೆ ಸಮನ್ವಿ ಮೃತಪಟ್ಟಳು. ಇಂದು (ಜನವರಿ 14) ಅವಳ ಅಂತ್ಯಕ್ರಿಯೆ ನೆರವೇರಿದೆ. ರಿಷಿ ಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿದೆ. ಆ ಬಳಿಕ ಮಾತನಾಡಿದ ಅವರು ಸರ್ಕಾರವನ್ನು ದೂಷಿಸಿದರು. ‘ಬೆಂಗಳೂರಿನ ರಸ್ತೆಗಳಲ್ಲಿ ಹೊಂಡಗುಂಡಿಯೇ ತುಂಬಿದೆ. ಕೋಣನಕುಂಟೆಯಲ್ಲಿ ಯಾವುದೇ ಆಂಬುಲೆನ್ಸ್ಗಳು ಓಡಾಡೋಕೆ ಸಾಧ್ಯವಾ? ರಸ್ತೆಗಳು ಆ ರೀತಿಯಲ್ಲಿ ಇದೆ. ಸಮನ್ವಿ ಸಾವಿಗೆ ಸರ್ಕಾರ ಹಾಗೂ ಪಿಡಬ್ಲ್ಯೂಡಿ ಅವರೇ ನೇರ ಕಾರಣ’ ಎಂದು ದೂರಿದ್ದಾರೆ ಅವರು. ಸಮನ್ವಿ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ. ಬಣಜಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ತಂದೆ ರೂಪೇಶ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಸಮನ್ವಿ ಪಂಚಭೂತಗಳಲ್ಲಿ ಲೀನಳಾಗಿದ್ದಾಳೆ.
ಇದನ್ನೂ ಓದಿ: Samanvi Funeral: ಬೆಂಗಳೂರಿನಲ್ಲಿ ನೆರವೇರಿದ ಬಾಲನಟಿ ಸಮನ್ವಿ ಅಂತ್ಯಕ್ರಿಯೆ; ಮುಗಿಲುಮುಟ್ಟಿದ ಆಕ್ರಂದನ