AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Head Bush Movie: ‘ಹೆಡ್​ ಬುಷ್’ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ ಅಜಿತ್ ಜಯರಾಜ್; ಧನಂಜಯ್ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ

Daali Dhananjay | Ajith Jayaraj | Agni Sridhar: ‘ಹೆಡ್ ಬುಷ್’ ಚಿತ್ರಕ್ಕೆ ಜಯರಾಜ್ ಪುತ್ರ ಅಜಿತ್ ಜಯರಾಜ್ ವಿರೋಧ ವ್ಯಕ್ತಪಡಿಸಿ ಫಿಲ್ಮ್ ಚೇಂಬರ್​ಗೆ ನೀಡಿರುವ ದೂರಿಗೆ ಸಂಬಂಧಿಸಿದಂತೆ ಟಿವಿ9 ಜತೆ ನಿರ್ಮಾಪಕರೂ ಆಗಿರುವ ಧನಂಜಯ್ ಮಾತನಾಡಿದ್ದಾರೆ. ಬರಹಗಾರ ಅಗ್ನಿ ಶ್ರೀಧರ್ ಜತೆ ಅಜಿತ್ ಅವರು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಧನಂಜಯ್ ನುಡಿದಿದ್ದಾರೆ.

Head Bush Movie: ‘ಹೆಡ್​ ಬುಷ್’ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ ಅಜಿತ್ ಜಯರಾಜ್; ಧನಂಜಯ್ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ
ಧನಂಜಯ್ (ಎಡ ಚಿತ್ರ), ‘ಹೆಡ್ ಬುಷ್’ ಪೋಸ್ಟರ್ (ಮಧ್ಯ), ಅಜಿತ್ ಜಯರಾಜ್ (ಬಲ ಚಿತ್ರ)
TV9 Web
| Edited By: |

Updated on:May 04, 2022 | 6:41 PM

Share

ಧನಂಜಯ್ (Dhananjay) ಅವರ ಹೊಸ ಚಿತ್ರ ‘ಹೆಡ್ ಬುಷ್’ ಚಿತ್ರವು (Head Bush Movie) ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಎನ್ನಲಾಗುವ ಜಯರಾಜ್ ಕತೆಯನ್ನಾಧರಿಸಿದೆ. ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ಜಯರಾಜ್ ಪುತ್ರ ಅಜಿತ್ ಜಯರಾಜ್ (Ajith Jayaraj) ಫಿಲ್ಮ್ ಚೇಂಬರ್​ಗೆ ಇಂದು (ಮೇ.4) ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಟಿವಿ9 ಜತೆ ನಿರ್ಮಾಪಕರೂ ಆಗಿರುವ ನಾಯಕ ನಟ ಧನಂಜಯ್ ಮಾತನಾಡಿದ್ದಾರೆ. ‘‘ಹೆಡ್​ಬುಷ್ ಅಗ್ನಿ ಶ್ರೀಧರ್ ಅವರ ಪುಸ್ತಕವನ್ನು ಆಧರಿಸಿದೆ. ಅಜಿತ್ ಅವರು ಬರಹಗಾರರಾದ ಶ್ರೀಧರ್ ಅವರಲ್ಲೇ ಮಾತನಾಡಿ ಗೊಂದಲವನ್ನು ಬಗೆಹರಿಸಿಕೊಳ್ಳಬೇಕು’’ ಎಂದಿದ್ದಾರೆ ಧನಂಜಯ್. ಫಿಲ್ಮ್ ಚೇಂಬರ್​ಗೆ ನೀಡಿದ್ದ ದೂರಿನಲ್ಲಿ ಅಜಿತ್, ತಮ್ಮ ತಂದೆಯ ಕತೆಯನ್ನಿಟ್ಟುಕೊಂಡು ಸಿನಿಮಾ ಮಾಡಬಾರದು ಎಂದು ಹೇಳಿದ್ದರು. ವೈಯಕ್ತಿಕ ಹಕ್ಕುಗಳಿಗೆ ತೊಂದರೆಯಾಗುತ್ತಿದೆ. ತಂದೆಯವರ ಕತೆಯನ್ನಾಧರಿಸಿದ್ದರ ಬಗ್ಗೆ ಚಿತ್ರತಂಡದ ಜತೆ ಮಾತನಾಡಿದ್ದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ದೂರು ನೀಡುತ್ತಿದ್ದೇನೆ, ಕಾನೂನು ಹೋರಾಟಕ್ಕೂ ಸಿದ್ಧ ಎಂದು ಅಜಿತ್ ಹೇಳಿದ್ದರು. ಈ ಎಲ್ಲಾ ವಿಚಾರಕ್ಕೆ ಧನಂಜಯ್ ವಿವರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಧನಂಜಯ್ ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಸಾರಾಂಶ:

ಸಿನಿಮಾ ಪ್ರಾರಂಭವಾದಾಗ ಅಜಿತ್ ವಿಶ್ ಮಾಡಿದ್ದರು ಎಂದು ತಿಳಿಸಿರುವ ಧನಂಜಯ್, ‘‘ನೀವು ಪಾತ್ರ ಮಾಡುತ್ತಿರುವುದು ಖುಷಿಯ ವಿಚಾರ ಎಂದಿದ್ದರು. ಆದರೆ ಇದೀಗ ಏಕೆ ದೂರು ನೀಡಿದ್ದಾರೆ ಎಂದು ಗೊತ್ತಿಲ್ಲ. ಸಿನಿಮಾ ಅಂತ ಬಂದಾಗ, ನಿರ್ಮಾಪಕನಾಗಿ ನಾನು ಹೇಳೋದಾದರೆ ಅಗ್ನಿ ಶ್ರೀಧರ್ ಅವರ ಪುಸ್ತಕ ‘ದಾದಾಗಿರಿಯ ದಿನಗಳು’ ಪ್ರಕಟವಾಗಿ (ಮೈ ಡೇಸ್ ಇನ್ ಅಂಡರ್​ವರ್ಲ್ಡ್) ಸುಮಾರು 20 ವರ್ಷ ಆಗಿದೆ. ಅದರ ಹಕ್ಕುಗಳನ್ನು ತೆಗೆದುಕೊಂಡು ನಾವು ಚಿತ್ರ ಮಾಡಿದ್ದೇವೆ. ಅಜಿತ್ ಅವರ ಸಮಸ್ಯೆಗಳೇನೇ ಇದ್ದರೂ ಅದು ಶ್ರೀಧರ್ ಅವರ ಬಳಿ ಬಗೆಹರಿಸಿಕೊಳ್ಳಬೇಕು. ಕಾರಣ, ಆ ಪುಸ್ತಕ 20 ವರ್ಷಗಳಿಂದ ಇದೆ. ಚಿತ್ರ ಅನೌನ್ಸ್ ಆದಾಗ, ಚಿತ್ರೀಕರಣವಾಗುವಾಗ ಸುಮ್ಮನಿದ್ದು ಚಿತ್ರೀಕರಣ ಮುಗಿದ ಮೇಲೆ ದೂರು ನೀಡಿರುವುದು ಸರಿಯಲ್ಲ’’ ಎಂದಿದ್ದಾರೆ.

ಇದನ್ನೂ ಓದಿ
Image
‘ಇಂದು ಕೊಹ್ಲಿ ಸೆಂಚುರಿ ಬಾರಿಸಿದರೆ..’; ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ ಸಿಂಪಲ್ ಸುನಿ
Image
ರಾಕಿ ಭಾಯ್​ಗೆ ಈದ್​ ಗಿಫ್ಟ್​; ಹಬ್ಬದ ದಿನವೇ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 9.57 ಕೋಟಿ ರೂ. ಬಾಚಿದ ‘ಕೆಜಿಎಫ್​ 2’
Image
Head Bush Movie: ‘ಹೆಡ್​ಬುಷ್’ ಸಿನಿಮಾಗೆ ವಿರೋಧ; ತಂದೆಯ ಸಿನಿಮಾ ಮಾಡದಂತೆ ಫಿಲ್ಮ್​ ಚೇಂಬರ್​ಗೆ ದೂರು ನೀಡಿದ ಅಜಿತ್ ಜಯರಾಜ್
Image
ಚಳಿಗಾಲದಲ್ಲಿ ಆಥಿಯಾ-ರಾಹುಲ್ ಮದುವೆ? ಈ ಬಗ್ಗೆ ಆಪ್ತರು ಹೇಳೋದೇನು?

‘‘ಅಜಿತ್ ಅವರಿಗೂ ಸಿನಿಮಾ ಆಗೋದು ತಿಳಿದಿತ್ತು. ಇದಕ್ಕೆ ಹಾಕಿರುವ ಬಹುದೊಡ್ಡ ಶ್ರಮವೂ ಗೊತ್ತು. ಆದರೆ ಸಡನ್ ಆಗಿ ಅವರು ದೂರು ನೀಡಿರೋದು ನೋಡಿದಾಗ ಅವರಿಗೆ ಯಾರಾದರೂ ಹೇಳಿಕೊಟ್ಟಿದ್ದಾರೇನೋ ಅನಿಸುತ್ತದೆ. ಅವರ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಬೆಳೆಯೋ ಸಮಯದಲ್ಲಿ ಇದು ಸಹಜ. ‘ಬಡವ ರಾಸ್ಕಲ್’ ಉತ್ತಮವಾಗಿ ಗುರುತಿಸಿಕೊಂಡಿದೆ. ಇದೀಗ ಮತ್ತೊಂದು ದೊಡ್ಡ ಮಟ್ಟದ ಪ್ರಯತ್ನ ಮಾಡೋಣ ಎಂದು ‘ಹೆಡ್ ಬುಷ್’ ಮಾಡಿದ್ದೇವೆ. ಇಂತಹ ದೊಡ್ಡ ಪ್ರಾಜೆಕ್ಟ್​ಗಳಿಗೆ ಸಮಸ್ಯೆ ಬರೋದು ಸಹಜ’’ ಎಂದು ಧನಂಜಯ್ ನುಡಿದಿದ್ದಾರೆ.

ಸ್ವತಃ ಕಲಾವಿದರಾಗಿರುವ ಅಜಿತ್ ಜಯರಾಜ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿರುವ ಧನಂಜಯ್, ‘‘ಸಿನಿಮಾದಲ್ಲಿ ಯಾರನ್ನು ಹೇಗೆ ತೋರಿಸಿದ್ದಾರೆ ಎನ್ನೋದು ಯಾರಿಗೂ ಸಿನಿಮಾ ನೋಡದೇ ಗೊತ್ತಾಗುವುದಿಲ್ಲ. ಅವರೇ ಕಲ್ಪಿಸಿಕೊಂಡು, ಕಾನೂನಿನ ಮೊರೆ ಹೋಗುತ್ತೇನೆ ಎಂದರೆ ಅವರಿಗೆ ಏನು ಸಿಗುತ್ತದೆ ಎನ್ನುವುದು ತಿಳಿದಿಲ್ಲ. ಅವರಿಗೆ ಒಳ್ಳೆಯದಾಗಲಿ’’ ಎಂದಿದ್ದಾರೆ.

ಅಜಿತ್ ಪ್ರಶ್ನೆಗಳಿಗೆ ಚಿತ್ರತಂಡ ಉತ್ತರಿಸಿರಲಿಲ್ಲವೇ? ಧನಂಜಯ್ ಹೇಳಿದ್ದಿದು:

ಅಜಿತ್ ತಮ್ಮ ಮಾತಿನಲ್ಲಿ ಚಿತ್ರತಂಡವನ್ನು ಸಂಪರ್ಕಿಸಿದ್ದೆ, ಆದರೆ ಉತ್ತರ ಸಿಗಲಿಲ್ಲ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಧನಂಜಯ್, ‘‘ಅಜಿತ್ ನನ್ನ ಜತೆ ಸತತವಾಗಿ ಸಂಪರ್ಕದಲ್ಲಿದ್ದರು. ಅವರ ಮದುವೆಗೆ ಹೋಗಿದ್ದೆ. ಅವರ ಕುಟುಂಬವನ್ನು ಭೇಟಿಯಾಗಿದ್ದೆ. ಅವರ ಸಿನಿಮಾವೊಂದಕ್ಕೆ ಧ್ವನಿಯನ್ನೂ ನೀಡಿದ್ದೆ. ‘ಹೆಡ್ ಬುಷ್’ ಚಿತ್ರಕ್ಕೆ ಅವರೂ ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿದ್ದರು. ದೂರು ನೀಡುವ ಮುನ್ನ ನನ್ನ ಬಳಿ ಅವರು ಮಾತನಾಡಿಲ್ಲ. ಈ ನಡುವೆ ಅವರು ಚಿತ್ರದಲ್ಲಿ ಜಯರಾಜ್ ಅವರನ್ನು ಹೇಗೆ ತೋರಿಸುತ್ತಿದ್ದೀರಾ ಎಂದು ಪ್ರಶ್ನೆಗೆ ಅವರು ಕೇಳಿದಾಗೆಲ್ಲಾ ಉತ್ತರ ನೀಡಿದ್ದೇನೆ. ಜತೆಗೆ ಅವರಿಗೆ ಅಗ್ನಿ ಶ್ರೀಧರ್ ಅವರ ಪುಸ್ತಕವನ್ನಾಧರಿಸಿದ ಚಿತ್ರವಿದು. ನಿಮಗೇನಾದರೂ ಸಮಸ್ಯೆಯಿದ್ದರೆ ಶ್ರೀಧರ್ ಅವರ ಬಳಿ ಮಾತನಾಡಿ, ನಾನೂ ಮಾತನಾಡುತ್ತೇನೆ ಎಂದೂ ತಿಳಿಸಿದ್ದೆ’’ ಎಂದಿದ್ದಾರೆ.

ತಮ್ಮ ನಿಲುವಿನ ಬಗ್ಗೆ ತಿಳಿಸಿದ ಧನಂಜಯ್, ‘‘ಅವರ ಸಮಸ್ಯೆ ಏನಿದ್ದರೂ ಶ್ರೀಧರ್ ಅವರ ಜತೆ ಬಗೆಹರಿಸಿಕೊಳ್ಳಬೇಕು, ಚಿತ್ರಕ್ಕೆ ತೊಂದರೆ ನೀಡಬಾರದು ಎನ್ನುವುದು ನನ್ನ ಕೋರಿಕೆ. ಫಿಲ್ಮ್ ಚೇಂಬರ್ ಕರೆ ಮಾಡಿ, ದೂರು ಬಂದಿದೆ, ಮಾತನಾಡಲು ಬನ್ನಿ ಎಂದಿದ್ದರು. ಆದರೆ ನಾನು ತಾಯಿಯವರಿಗೆ ಟ್ರೀಟ್ಮೆಂಟ್ ಕೊಡಿಸುವ ಉದ್ದೇಶದಿಂದ ಬೇರೆ ಕಡೆ ಬಂದಿದ್ದೇನೆ. ಬಂದ ನಂತರ ಕುಳಿತು ಮಾತನಾಡುತ್ತೇನೆ. ಅದರ ನಂತರ ಕಾನೂನಾತ್ಮಾಕವಾಗಿಯೇ ಹೋರಾಡಬೇಕು ಎಂದರೆ ಹೋರಾಡಬೇಕಾಗುತ್ತದೆ. ಕಾರಣ, ನಮ್ಮ ಶ್ರಮವೂ ಚಿತ್ರದಲ್ಲಿದೆ’’ ಎಂದಿದ್ದಾರೆ ಧನಂಜಯ್.

ಧನಂಜಯ್ ಮಾತುಗಳು ಇಲ್ಲಿವೆ:

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:37 pm, Wed, 4 May 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್