ಚಳಿಗಾಲದಲ್ಲಿ ಆಥಿಯಾ-ರಾಹುಲ್ ಮದುವೆ? ಈ ಬಗ್ಗೆ ಆಪ್ತರು ಹೇಳೋದೇನು?

ಚಳಿಗಾಲದಲ್ಲಿ ಆಥಿಯಾ-ರಾಹುಲ್ ಮದುವೆ? ಈ ಬಗ್ಗೆ ಆಪ್ತರು ಹೇಳೋದೇನು?
ಆಥಿಯಾ-ರಾಹುಲ್

ಡಿಸೆಂಬರ್ ವೇಳೆಗೆ ಆಥಿಯಾ ಹಾಗೂ ರಾಹುಲ್ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಕರ್ನಾಟಕದವರು. ಸುನೀಲ್ ಶೆಟ್ಟಿ ಮೂಲ ಮಂಗಳೂರು. ಈ ಕಾರಣಕ್ಕೆ ದಕ್ಷಿಣ ಭಾರತದ ಶೈಲಿಯಲ್ಲೇ ಮದುವೆ ನಡೆಯಲಿದೆ ಎನ್ನಲಾಗಿದೆ.

TV9kannada Web Team

| Edited By: Rajesh Duggumane

Apr 21, 2022 | 8:34 PM

ಬಾಲಿವುಡ್​ ನಟಿ ಆಥಿಯಾ ಶೆಟ್ಟಿ (Athiya Shetty) ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್​.ರಾಹುಲ್​ (KL Rahul) ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದು ಕೆಲವು ವರ್ಷಗಳು ಕಳೆದಿವೆ. ಇಬ್ಬರೂ ಸಾಕಷ್ಟು ಬಾರಿ ಸುತ್ತಾಟ ನಡೆಸಿದ್ದಾರೆ. ಈ ವಿಚಾರದಲ್ಲಿ ಅವರು ಮುಚ್ಚುಮರೆ ಮಾಡುತ್ತಿಲ್ಲ. ಐಪಿಎಲ್​ನಲ್ಲಿ ಲಖನೌ ತಂಡವನ್ನು ರಾಹುಲ್ ಮುನ್ನಡೆಸುತ್ತಿದ್ದಾರೆ. ಈ ಪಂದ್ಯ ನೋಡೋಕೆ ಆಥಿಯಾ ಹಾಗೂ ಅವರ ತಂದೆ ಸುನೀಲ್ ಶೆಟ್ಟಿ ಆಗಾಗ ಆಗಮಿಸುತ್ತಾರೆ. ಈಗ ಇವರ ಮದುವೆ ಬಗ್ಗೆ ಸುದ್ದಿಯೊಂದು ಹರಿದಾಡಿದೆ. ಡಿಸೆಂಬರ್ ವೇಳೆಗೆ ಈ ಜೋಡಿ ಮದುವೆ ಆಗಲಿದೆ ಎಂದು ವರದಿ ಆಗಿದೆ. ಆದರೆ, ಆಥಿಯಾ ಆಪ್ತರು ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಆಥಿಯಾ ಹಾಗೂ ರಾಹುಲ್​ 2019ರಲ್ಲಿ ಪರಸ್ಪರ ಭೇಟಿ ಆದರು. ಮ್ಯೂಚುವಲ್ ಫ್ರೆಂಡ್ಸ್ ಮೂಲಕ ಇವರು ಪರಿಚಯಗೊಂಡರು ಎನ್ನಲಾಗಿದೆ. ನಂತರ ಇವರ ನಡುವೆ ಗೆಳೆತನ ಮೂಡಿತ್ತು. ಬಳಿಕ ಈ ಗೆಳೆತನ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಸುತ್ತಾಡೋಕೆ ಆರಂಭಿಸಿದರು. ಇವರ ಪ್ರೀತಿಗೆ ಆಥಿಯಾ ತಂದೆ ಬೆಂಬಲವೂ ಇದೆ. ಸುನೀಲ್ ಶೆಟ್ಟಿ ಕೂಡ ಅನೇಕ ಬಾರಿ ಈ ಜೋಡಿಯನ್ನು ಬೆಂಬಲಿಸಿ ಮಾತನಾಡಿದ್ದಿದೆ. ಈಗ ಆಥಿಯಾ ಹಾಗೂ ರಾಹುಲ್ ಮದುವೆ ಸುದ್ದಿ ಹರಿದಾಡುತ್ತಿದೆ.

ಡಿಸೆಂಬರ್ ವೇಳೆಗೆ ಆಥಿಯಾ ಹಾಗೂ ರಾಹುಲ್ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಕರ್ನಾಟಕದವರು. ಸುನೀಲ್ ಶೆಟ್ಟಿ ಮೂಲ ಮಂಗಳೂರು. ಈ ಕಾರಣಕ್ಕೆ ದಕ್ಷಿಣ ಭಾರತದ ಶೈಲಿಯಲ್ಲೇ ಮದುವೆ ನಡೆಯಲಿದೆ ಎನ್ನಲಾಗಿದೆ. ವಿವಾಹ ಕಾರ್ಯ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ.

ಆದರೆ ಕೆಲ ವರದಿಗಳು ಇದನ್ನು ಅಲ್ಲಗಳೆದಿದೆ. ‘ಇದು ಸತ್ಯವಲ್ಲ. ಈ ವರ್ಷ ಅವರ ಮದುವೆ ನಡೆಯುತ್ತಿಲ್ಲ. ಆಥಿಯಾ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ವರ್ಷದ ಮಧ್ಯಂತರದಲ್ಲಿ ಇದರ ಕೆಲಸಗಳು ಆರಂಭವಾಗಲಿದೆ. ಒಂದು ಒಟಿಟಿ ಸಿನಿಮಾ ಮತ್ತೊಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ರಾಹುಲ್ ವಿಶ್ವಕಪ್​ಗೆ ಸಿದ್ಧರಾಗುತ್ತಿದ್ದಾರೆ. ಅದಕ್ಕೂ ಮೊದಲು ಹಲವು ಪಂದ್ಯಗಳನ್ನು ಅವರು ಆಡಲಿದ್ದಾರೆ. ಅವರಿಗೆ ಮದುವೆ ಆಗೋಕೆ ಸಮಯವೇ ಇಲ್ಲ’ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಥಿಯಾ ಶೆಟ್ಟಿ ಇತ್ತೀಚೆಗೆ ದುಬಾರಿ ಬೆಲೆಯ ಕಾರು ಖರೀದಿ ಮಾಡಿದ್ದರು. ಆಥಿಯಾ ಶೆಟ್ಟಿ Audi Q7 ಖರೀದಿ ಮಾಡಿದ್ದಾರೆ. ಎಸ್​ಯುವಿ ಮಾದರಿಯ ಕಾರು ಇದಾಗಿದ್ದು, ಇದರ ಎಕ್ಸ್​ ಶೋ ರೂಂ ಬೆಲೆ, 80 ಲಕ್ಷ ರೂಪಾಯಿ ಇದೆ. ಆನ್​ ರೋಡ್​ ಬೆಲೆ ಸುಮಾರು ಒಂದು ಕೋಟಿ ರೂಪಾಯಿ ಆಗಲಿದೆ. ಆಥಿಯಾ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ರೆಡ್​ ಕಾರ್ಪೆಟ್​ನಲ್ಲಿ ಒಟ್ಟಾಗಿ ಹೆಜ್ಜೆಹಾಕಿದ ರಾಹುಲ್- ಆಥಿಯಾ; ಈ ಹಿಂದಿನ ಬಾಲಿವುಡ್- ಕ್ರಿಕೆಟ್ ತಾರಾ ಜೋಡಿಗಳ ಚಿತ್ರಗಳು ಇಲ್ಲಿವೆ

ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಆಥಿಯಾ ಶೆಟ್ಟಿ; ಇಲ್ಲಿವೆ ಚಿತ್ರಗಳು

Follow us on

Related Stories

Most Read Stories

Click on your DTH Provider to Add TV9 Kannada