Updated on: Apr 21, 2022 | 9:41 PM
2015ರಲ್ಲಿ ತೆರೆಗೆ ಬಂದ ಶಿವರಾಜ್ಕುಮಾರ್ ನಟನೆಯ ‘ವಜ್ರಕಾಯ’ ಸಿನಿಮಾ ಮೂಲಕ ಗುರುತಿಸಿಕೊಂಡವರು ನಭಾ ನಟೇಶ್. ನಂತರ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆದರು ಅವರು.
ನಭಾ ನಟೇಶ್ 2018ರ ಈಚೆಗೆ ಟಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ಅವರಿಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದೆ. ‘ಡಿಸ್ಕೋ ರಾಜ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ನಭಾ ನಟೇಶ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸಾಕಷ್ಟು ಹಾಟ್ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆಯುತ್ತಾರೆ ಅವರು. ಈಗ ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ.
ನಭಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಗಳು ಪಡ್ಡೆಗಳ ನಿದ್ದೆಗೆಡಿಸಿವೆ.
ನಭಾ ನಟೇಶ್ ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. 2022ರಲ್ಲಿ ಅವರ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ.