AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mukesh Choudhary: ₹ 20 ಲಕ್ಷ ನೀಡಿ ಖರೀದಿಸಿದ ಬೌಲರ್ ಮೇಲೆ ನಂಬಿಕೆ ಇಟ್ಟ CSK; ₹ 15.25 ಕೋಟಿ ನೀಡಿ ಖರೀದಿಸಿದ MI ಸ್ಟಾರ್ ಆಟಗಾರ ಕ್ಲೀನ್ ಬೌಲ್ಡ್

IPL 2022 | CSK vs MI:: ಈ ಬಾರಿಯ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಕೇಶ್ ಚೌಧರಿಯವರನ್ನು ಮೂಲ ಬೆಲೆ 20 ಲಕ್ಷ ನೀಡಿ ಖರೀದಿಸಿತ್ತು. ಇದುವರೆಗಿನ ಪಂದ್ಯಗಳಲ್ಲಿ ಅಷ್ಟಾಗಿ ಮಿಂಚದಿದ್ದ ಮುಕೇಸ್ ಮೇಲೆ, ಸಿಎಸ್​ಕೆ ನಂಬಿಕೆ ಇಟ್ಟಿತ್ತು. ಅದನ್ನು ಹುಸಿಗೊಳಿಸದ ಎಡಗೈ ವೇಗಿ, ಮುಂಬೈ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಸ್ಪೆಲ್​ನಲ್ಲಿಯೇ 3 ವಿಕೆಟ್ ಪಡೆದು ಮಿಂಚಿದರು. ಈ ಬಾರಿಯ ಹರಾಜಿನಲ್ಲಿ 15.25 ಕೋಟಿ ರೂಗೆ ಹರಾಜಾಗಿದ್ದ ಇಶನ್ ಕಿಶನ್ ಮುಕೇಶ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

shivaprasad.hs
|

Updated on:Apr 22, 2022 | 9:37 AM

Share
ಐಪಿಎಲ್​ 2022 ಪಂದ್ಯಾವಳಿಯಲ್ಲಿ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಗುರುವಾರ ಮುಖಾಮುಖಿಯಾಗಿದ್ದವು. ಚೆನ್ನೈ ಜಯಭೇರಿ ಬಾರಿಸಿತು.

1 / 5
ಪ್ರಸಕ್ತ ಐಪಿಎಲ್​ನಲ್ಲಿ ಚೆನ್ನೈ ಹಾಗೂ ಮುಂಬೈ ಗೆಲುವಿಗಾಗಿ ಹಾತೊರೆಯುತ್ತಿವೆ. ಸತತ ಆರು ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ 7ನೇ ಪಂದ್ಯವನ್ನು ಗೆಲ್ಲಲೇ ಬೇಕಾಗಿತ್ತು. ಆದರೆ ಇದಕ್ಕೆ ತಣ್ಣೀರೆರಚಿದ್ದು ಮುಕೇಶ್ ಚೌಧರಿ!

2 / 5
ಚೆನ್ನೈನ ಎಡಗೈ ವೇಗದ ಬೌಲರ್ ಮುಖೇಶ್ ಚೌಧರಿಗೆ ಇದು ಚೊಚ್ಚಲ ಐಪಿಎಲ್ ಪಂದ್ಯಾವಳಿ. ಮುಂಬೈ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮೂಲಕ, ಚೆನ್ನೈ ತಂಡಕ್ಕೆ ಆರಂಭದಲ್ಲೇ ಮುನ್ನಡೆಯನ್ನು ತಂದುಕೊಟ್ಟವರು ಮುಕೇಶ್. ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತದಲ್ಲಿಯೇ ಮುಂಬೈ ನಾಯಕ ರೋಹಿತ್ ಶರ್ಮಾ ಅವರನ್ನು ಮುಖೇಶ್ ಔಟ್ ಮಾಡಿದರು. ರೋಹಿತ್‌ ಇನ್ನೂ ತಮ್ಮ ರನ್​ ಖಾತೆಯನ್ನು ತೆರೆದಿರಲಿಲ್ಲ! (ಫೋಟೋ: ಬಿಸಿಸಿಐ)

3 / 5
ಮುಕೇಶ್ ಮಾರಕ ದಾಳಿ ಅಲ್ಲಿಗೆ ನಿಲ್ಲಲಿಲ್ಲ. ಅದೇ ಓವರ್‌ನ ಐದನೇ ಎಸೆತದಲ್ಲಿ ಮುಂಬೈನ ಎರಡನೇ ಆರಂಭಿಕ ಆಟಗಾರ, ಐಪಿಎಲ್​ 2022ರಲ್ಲಿ ಅತಿ ಹೆಚ್ಚು ಮೊತ್ತಕ್ಕೆ (15.25 ಕೋಟಿ ರೂ) ಹರಾಜಾಗಿದ್ದ ಇಶಾನ್ ಕಿಶನ್ ಅವರನ್ನು ಅತ್ಯುತ್ತಮ ಔಟ್ ಸ್ವಿಂಗ್‌ ಎಸೆತದ ಮೂಲಕ ಬೌಲ್ಡ್ ಮಾಡಿದರು. ಬಾಲ್ ಅನ್ನು ಫ್ಲಿಕ್ ಮಾಡಲು ಪ್ರಯತ್ನಿಸಿದ ಇಶಾನ್ ತಪ್ಪಾದ ಲೈನ್​ನಲ್ಲಿ ಆಡಿದ್ದಲ್ಲದೇ, ಆಯ ತಪ್ಪಿ ಪಿಚ್ ಮೇಲೆ ಬಿದ್ದರು. ಮುಕೇಶ್ ಎಸೆತಕ್ಕೆ ವಿಕೆಟ್​ಗಳು ಹಾರಿದ್ದವು. (ಫೋಟೋ: ಬಿಸಿಸಿಐ)

4 / 5
ಈ ಋತುವಿನಲ್ಲಿ ಚೆನ್ನೈ ತಂಡ ಮುಕೇಶ್ ಅವರ ಮೂಲ ಬೆಲೆ 20 ಲಕ್ಷ ರೂ ಗೆ ಅವರನ್ನು ಖರೀದಿಸಿತ್ತು. ಆದರೆ ಇದುವರೆಗೆ ಮುಕೇಶ್ ಅವರ ಪ್ರದರ್ಶನ ಅದ್ಭುತವಾಗಿಯೇನೂ ಇರಲಿಲ್ಲ. ಆದರೆ ಚೆನ್ನೈ ಅವರ ಮೇಲೆ ನಂಬಿಕೆ ಇಟ್ಟಿತ್ತು. ಅದನ್ನು ಮುಕೇಶ್ ಉಳಿಸಿಕೊಂಡಿದ್ದಲ್ಲದೇ, ಮೊದಲ ಓವರ್​ನಲ್ಲಿಯೇ ಅಪಾಯಕಾರಿ ಆಟಗಾರರನ್ನು ಪೆವಿಲಿಯನ್​ಗೆ ಅಟ್ಟಿದರು. ಮುಂಬೈ ವಿರುದ್ಧ ಅವರು ತಮ್ಮ ಮೊದಲ 12 ಎಸೆತಗಳಲ್ಲಿಯೇ 3 ವಿಕೆಟ್ ಪಡೆದರು. ರೋಹಿತ್ ಮತ್ತು ಇಶಾನ್ ನಂತರ, ಮುಖೇಶ್ ಅವರು ತಮ್ಮ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ ಅವರ ವಿಕೆಟ್ ಪಡೆದರು. ಮುಂದಿನ ಓವರ್‌ನಲ್ಲಿ ಅವರು ನಾಲ್ಕನೇ ವಿಕೆಟ್ ಪಡೆಯುತ್ತಿದ್ದರು, ಆದರೆ ಡ್ವೇನ್ ಬ್ರಾವೋ ಅವರು ತಿಲಕ್ ವರ್ಮಾ ಅವರ ಕ್ಯಾಚ್ ಅನ್ನು ಡ್ರಾಪ್ ಮಾಡಿದ್ದರು. (ಫೋಟೋ: ಬಿಸಿಸಿಐ)

5 / 5

Published On - 9:35 am, Fri, 22 April 22

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?