ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಆಥಿಯಾ ಶೆಟ್ಟಿ; ಇಲ್ಲಿವೆ ಚಿತ್ರಗಳು
ಆಥಿಯಾ ಅವರು ನಟ ಸುನೀಲ್ ಶೆಟ್ಟಿ ಮಗಳು. ಆಥಿಯಾ ಬಳಿ ಹಲವು ದುಬಾರಿ ಕಾರುಗಳಿವೆ. ಈ ಮೊದಲು ಅವರು ಬೆಂಜ್ ಎಸ್ ಕ್ಲಾಸ್ ಮತ್ತು ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಸುತ್ತಾಡುತ್ತಿರುವುದು ಫೋಟೋಗಳು ವೈರಲ್ ಆಗಿತ್ತು.
Updated on: Feb 15, 2022 | 2:56 PM

ಸೆಲೆಬ್ರಿಟಿಗಳಿಗೆ ಕಾರಿನ ಕ್ರೇಜ್ ಹೆಚ್ಚಿರುತ್ತದೆ. ಹಲವು ಸೆಲೆಬ್ರಿಟಿಗಳ ಕೈಯಲ್ಲಿ ಬೆಲೆ ಬಾಳುವ ಹಲವು ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರುಗಳಿವೆ. ಒಂದೆರಡು ಸಿನಿಮಾ ಹಿಟ್ ಆದ ನಂತರದಲ್ಲಿ ಒಂದೊಳ್ಳೆಯ ಕಾರು ಖರೀದಿಸಲು ಅವರು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಈಗ ಆಥಿಯಾ ಶೆಟ್ಟಿ ಕೂಡ ದುಬಾರಿ ಬೆಲೆಯ ಕಾರು ಖರೀದಿ ಮಾಡಿದ್ದಾರೆ.

ಆಥಿಯಾ ಶೆಟ್ಟಿ Audi Q7 ಖರೀದಿ ಮಾಡಿದ್ದಾರೆ. ಎಸ್ಯುವಿ ಮಾದರಿಯ ಕಾರು ಇದಾಗಿದ್ದು, ಇದರ ಎಕ್ಸ್ ಶೋ ರೂಂ ಬೆಲೆ, 80 ಲಕ್ಷ ರೂಪಾಯಿ ಇದೆ. ಆನ್ ರೋಡ್ ಬೆಲೆ ಸುಮಾರು ಒಂದು ಕೋಟಿ ರೂಪಾಯಿ ಆಗಲಿದೆ.

ಆಥಿಯಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಕಾರಿನ ಕೀಅನ್ನು ಹಿಡಿದು ಕೊಂಡಿದ್ದಾರೆ. ಕಾರು ಖರೀದಿಸಿದ್ದಕ್ಕೆ ಅವರು ಸಖತ್ ಖುಷಿಯಲ್ಲಿದ್ದಾರೆ.

ಆಥಿಯಾ ಅವರು ನಟ ಸುನೀಲ್ ಶೆಟ್ಟಿ ಮಗಳು. ಆಥಿಯಾ ಬಳಿ ಹಲವು ದುಬಾರಿ ಕಾರುಗಳಿವೆ. ಈ ಮೊದಲು ಅವರು ಬೆಂಜ್ ಎಸ್ ಕ್ಲಾಸ್ ಮತ್ತು ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಸುತ್ತಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಆಥಿಯಾ ಬಳಿ ಬಿಎಂಡಬ್ಲ್ಯೂ ಎಕ್ಸ್5 ಕೂಡ ಇತ್ತು. ಆದರೆ, ಅದನ್ನು ಅವರು 2018ರಲ್ಲಿ ಮಾರಾಟ ಮಾಡಿದ್ದರು.

ಆಥಿಯಾ ಹಾಗೂ ಕ್ರಿಕೆಟರ್ ಕೆ.ಎಲ್. ರಾಹುಲ್ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ರಾಹುಲ್ ಅವರು ಆಥಿಯಾ ಜತೆ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದರು. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಆಥಿಯಾ ಅವರು 2015ರಲ್ಲಿ ಬಾಲಿವುಡ್ಗೆ ಕಾಲಿಟ್ಟರು. ‘ಹೀರೋ’ ಅವರ ಮೊದಲ ಸಿನಿಮಾ. ಇದಾದ ಬಳಿಕ ಕೆಲ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ನವಾಬ್ಜಾದೇ’ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಅವರು ಕಾಣಿಸಿಕೊಂಡಿದ್ದರು.




