AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಹೃದಯವೇ ನನ್ನ ಟೆರಿಟರಿ’; ಒಂದು ಸಣ್ಣ ಕಥೆ ಹೇಳಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಯಶ್

ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್​ ಕಂಡು ಇಡೀ ಚಿತ್ರತಂಡ ಖುಷಿಯಾಗಿದೆ. ಈ ಚಿತ್ರದ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ ಅಭಿಮಾನಿಗಳಿಗೆ ನಿರಂತರವಾಗಿ ಧನ್ಯವಾದ ತಿಳಿಸುತ್ತಲೇ ಇದೆ. ಈಗ ಯಶ್ ಅವರು ಥ್ಯಾಂಕ್ಸ್ ಹೇಳಿದ್ದಾರೆ.

‘ನಿಮ್ಮ ಹೃದಯವೇ ನನ್ನ ಟೆರಿಟರಿ’; ಒಂದು ಸಣ್ಣ ಕಥೆ ಹೇಳಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಯಶ್
ಯಶ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Apr 21, 2022 | 5:42 PM

Share

ನಟ ಯಶ್ (Yash) ಚಿತ್ರರಂಗದಲ್ಲಿ ತುಂಬಾನೇ ಏಳುಬೀಳುಗಳನ್ನು ಕಂಡಿದ್ದಾರೆ. ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ಈಗ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಯಶ್ ನಟನೆಯ ‘ಕೆಜಿಎಫ್ 2’ (KGF Chapter 2) ಸಿನಿಮಾ ಮಾಡಿದ ಮೋಡಿ ಅಂಥದ್ದು. ಈ ಸಿನಿಮಾದಲ್ಲಿ ಯಶ್ ನಟನೆಯನ್ನು ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ತೆರೆಗೆ ಬಂದು ಒಂದು ವಾರ ಕಳೆದಿದೆ. ಆದಾಗ್ಯೂ ಬಾಲಿವುಡ್​ನಲ್ಲಿ ಸಿನಿಮಾದ ಅಬ್ಬರ ಕೊಂಚವೂ ಕಡಿಮೆ ಆಗಿಲ್ಲ. ಚಿತ್ರದ ಕಲೆಕ್ಷನ್ ತಗ್ಗುವ ಸೂಚನೆಯೇ ಸಿಗುತ್ತಿಲ್ಲ. ಬಾಲಿವುಡ್ (Bollywood) ಅಂಗಳದಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಯಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

‘ಕೆಜಿಎಫ್ 2’ ತೆರೆಗೆ ಬಂದ ನಂತರದಲ್ಲಿ ಯಶ್ ಅವರು ವೆಕೇಶನ್​ ಮೂಡ್​ಗೆ ತೆರಳಿದ್ದರು. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಆಯ್ರಾ, ಯಥರ್ವ್​ ಜತೆ ಬೀಚ್​ನಲ್ಲಿ ಸಮಯ ಕಳೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಹೀಗಾಗಿ, ಅವರಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಸಾಧ್ಯವಾಗಿರಲಿಲ್ಲ. ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್​ ಕಂಡು ಇಡೀ ಚಿತ್ರತಂಡ ಖುಷಿಯಾಗಿದೆ. ಈ ಚಿತ್ರದ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್​’ ಅಭಿಮಾನಿಗಳಿಗೆ ನಿರಂತರವಾಗಿ ಧನ್ಯವಾದ ತಿಳಿಸುತ್ತಲೇ ಇದೆ. ಈಗ ಯಶ್ ಅವರು ಥ್ಯಾಂಕ್ಸ್ ಹೇಳಿದ್ದಾರೆ. ಪುಟ್ಟ ಕಥೆಯ ಮೂಲಕ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಒಂದು ಊರು. ಅಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಗಿ ಪ್ರಾರ್ಥನೆ ಮಾಡೋಕೆ ಊರಿನ ಜನ ನಿರ್ಧರಿಸಿದರು. ಅಲ್ಲಿ ಬಂದ ಹುಡುಗ ಮಳೆ ಬಂದು ಬಿಟ್ಟರೆ ಎಂದು ಕೊಡೆ ಹಿಡಿದ ಬಂದಿದ್ದ. ಅನೇಕರು ಇದನ್ನು ಹುಚ್ಚುತನ ಎಂದರು, ಇನ್ನೂ ಕೆಲವರು ಓವರ್ ಕಾನ್ಫಿಡೆನ್ಸ್ ಎಂದರು. ಆದರೆ, ಅದೇನು ಗೊತ್ತಾ? ಅದು ನಂಬಿಕೆ’ ಎಂದು ಮಾತು ಆರಂಭಿಸಿದ್ದಾರೆ ಯಶ್.

‘ನಾನು ಆ ಹುಡುಗನಂತೆ. ಈ ದಿನ ಬರುತ್ತದೆ ಎಂದು ನಂಬಿಕೆ ಇಟ್ಟು ಕೂತಿದ್ದ ಬಾಲಕ ನಾನು. ಈಗ ಥ್ಯಾಂಕ್ಸ್ ಅನ್ನೋದು ಸಾಕಾಗುವುದಿಲ್ಲ. ಈ ರೀತಿಯ ಪ್ರೀತಿ ತೋರಿದ್ದಕ್ಕೆ ನನ್ನ ಹೃದಯದಾಳದಿಂದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಮಗೆ ಖುಷಿಯಾಗಿದೆ ಎಂಬುದನ್ನು ‘ಕೆಜಿಎಫ್​’ ತಂಡದ ಪರವಾಗಿ ನಾನು ಹೇಳುತ್ತಿದ್ದೇನೆ. ನಿಮ್ಮ ಹೃದಯವೇ ನನ್ನ ಟೆರಿಟರಿ’ ಎಂದಿದ್ದಾರೆ ಯಶ್.

ಇದನ್ನೂ ಓದಿ: ‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಆರ್​ಸಿಬಿ ಆಟಗಾರರು ಏನಂದ್ರು? ಇಲ್ಲಿದೆ ವಿಡಿಯೋ 

‘ಕೆಜಿಎಫ್​: ಚಾಪ್ಟರ್​ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್​ ಫ್ಯಾನ್ಸ್​ ತಕರಾರು​