‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಆರ್​ಸಿಬಿ ಆಟಗಾರರು ಏನಂದ್ರು? ಇಲ್ಲಿದೆ ವಿಡಿಯೋ

ಕೊವಿಡ್ ಕಡಿಮೆ ಆಗಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿದೆ. ಹೀಗಾಗಿ, ಐಪಿಎಲ್ ಆಟಗಾರರು ಬಯೋಬಬಲ್​ನಲ್ಲಿದ್ದಾರೆ. ಈ ಸಮಯದಲ್ಲಿ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಆಟಗಾರರಿಗೆ ರಿಲ್ಯಾಕ್ಸ್ ಫೀಲ್ ಆಗಿದೆ.

‘ಕೆಜಿಎಫ್: ಚಾಪ್ಟರ್​ 2’ ವೀಕ್ಷಿಸಿದ ಆರ್​ಸಿಬಿ ಆಟಗಾರರು ಏನಂದ್ರು? ಇಲ್ಲಿದೆ ವಿಡಿಯೋ
ಆರ್​​ಸಿಬಿ-ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 21, 2022 | 2:11 PM

‘ಕೆಜಿಎಫ್: ಚಾಪ್ಟರ್​ 2’ (KGF Chapter 2) ಜತೆ ಐಪಿಎಲ್ ತಂಡ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (Royal Challengers Bangalore) ಕೈಜೋಡಿಸಿದೆ. ಇತ್ತೀಚೆಗೆ ಆರ್​ಸಿಬಿ ಹಾಗೂ ಎಲ್​​ಎಸ್​ಜಿ ನಡುವಿನ ಪಂದ್ಯವನ್ನು ‘ಕೆಜಿಎಫ್ 2’ನಲ್ಲಿ ನಟಿಸಿದ ಸಂಜಯ್ ದತ್, ರವೀನಾ ಟಂಡನ್, ನಿರ್ಮಾಪಕ ವಿಜಯ್ ಕಿರಗಂದೂರು ವೀಕ್ಷಿಸಿದ್ದರು. ಸಂಜಯ್ ದತ್​ ಜೆರ್ಸಿ ಮೇಲೆ ಅಧೀರ ಎಂದು ಬರೆದುಕೊಂಡಿರುವುದು ಸಾಕಷ್ಟು ಗಮನ ಸೆಳೆದಿತ್ತು. ಸಿನಿಮಾ ಮಂದಿ ಹೇಗೆ ಕ್ರಿಕೆಟ್ ವೀಕ್ಷಿಸಿದ್ದಾರೋ ಅದೇ ರೀತಿ, ಆರ್​ಸಿಬಿ ಆಟಗಾರರು ‘ಕೆಜಿಎಫ್: 2’ ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ನೋಡಿ ಎಲ್ಲರೂ ಸಖತ್ ಥ್ರಿಲ್ ಆಗಿದ್ದಾರೆ. ಈ ವಿಡಿಯೋವನ್ನು ಆರ್​ಸಿಬಿ ತಂಡ ಯೂಟ್ಯೂಬ್ ಚಾನೆಲ್​​ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ.

ಕೊವಿಡ್ ಕಡಿಮೆ ಆಗಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿದೆ. ಹೀಗಾಗಿ, ಐಪಿಎಲ್ ಆಟಗಾರರು ಬಯೋಬಬಲ್​ನಲ್ಲಿದ್ದಾರೆ. ಅಂದರೆ, ಈ ಆಟಗಾರರು ಹೊರಗಿನವರ ಜತೆ ಸಂಪರ್ಕಕ್ಕೆ ಬರುವಂತಿಲ್ಲ. ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಸಿನಿಮಾ ನೋಡಿದರೆ ಮನಸ್ಸು ಹಗುರಾಗುತ್ತದೆ. ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಆಟಗಾರರಿಗೂ ರಿಲ್ಯಾಕ್ಸ್ ಫೀಲ್ ಆಗಿದೆ.

ಸಿನಿಮಾ ವೀಕ್ಷಿಸುವುದಕ್ಕೂ ಮೊದಲು, ಹರ್ಷಲ್ ಪಟೇಲ್​, ಮೊಹ್ಮದ್ ಸಿರಾಜ್ ಮೊದಲಾದವರು ಚಿತ್ರದ ಬಗ್ಗೆ ನಿರೀಕ್ಷೆ ಇದೆ ಎಂದು ಹೇಳಿದ್ದರು. ಸಿನಿಮಾ ವೀಕ್ಷಿಸಿದ ನಂತರ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರಶಾಂತ್ ನೀಲ್ ಅವರ ಕೆಲಸ ನಿಜಕ್ಕೂ ಮೆಚ್ಚಿಕೊಳ್ಳುವಂತದ್ದು. ಯಶ್ ಅವರ ಗಡ್ಡ ತುಂಬಾನೇ ಇಷ್ಟವಾಯಿತು’ ಎಂದು ಸಿರಾಜ್ ಹೇಳಿದ್ದಾರೆ. ಮ್ಯಾಕ್ಸ್​ವೆಲ್​, ಹರ್ಷಲ್ ಪಟೇಲ್ ಮೊದಲಾದವರು ಸಿನಿಮಾ ವೀಕ್ಷಿಸಿದ್ದಾರೆ. ‘ಪಾರ್ಟ್​ 3’ ಬರುವ ಬಗ್ಗೆಯೂ ಎರಡನೇ ಚಾಪ್ಟರ್​ ಕೊನೆಯಲ್ಲಿ ಸೂಚನೆ ಸಿಕ್ಕಿದೆ. ಈ ಬಗ್ಗೆಯೂ ಆಟಗಾರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಕ್ರೀಡೆ ಮತ್ತು ಚಲನಚಿತ್ರ ಮನರಂಜನೆಯ ಪರಿಪೂರ್ಣ ಸಮ್ಮಿಲನ ಆಗಿದೆ. ಈ ಸಹಯೋಗವು ಭರಪೂರ ಮನರಂಜನೆ, ಗ್ಲಾಮರ್, ಚಲನಚಿತ್ರಗಳು, ಕ್ರೀಡೆಗಳ ಅದ್ಭುತ ಸಂಗಮವನ್ನು ಉಂಟುಮಾಡಲಿದೆ. ಕ್ರಿಕೆಟ್ ಮತ್ತು ಚಲನಚಿತ್ರಗಳಲ್ಲಿ ಅತ್ಯುತ್ಸಾಹ ಹೊಂದಿರುವ ದೇಶದಲ್ಲಿ, ಬೆಂಗಳೂರಿನ ಎರಡು ಅತ್ಯಂತ ಪ್ರೀತಿಯ ಕ್ಷೇತ್ರಗಳ ಹಿಂದೆಂದೂ ನೋಡಿರದ ಸಂಯೋಜನೆಯನ್ನು ಈ ಸಹಭಾಗಿತ್ವವು ರೂಪಿಸುತ್ತದೆ’ ಎಂದು ‘ಹೊಂಬಾಳೆ ಫಿಲ್ಮ್ಸ್​’ ಈ ಮೊದಲು ತಿಳಿಸಿತ್ತು.

ಇದನ್ನೂ ಓದಿ: ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್

KGF Chapter 2: ಬಾಕ್ಸಾಫೀಸ್ ಆಯ್ತು.. ಈಗ ಐಎಂಡಿಬಿ ರೇಟಿಂಗ್​ನಲ್ಲೂ ‘ಕೆಜಿಎಫ್ ಚಾಪ್ಟರ್ 2’ ದಾಖಲೆ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್