Singer KK Death: ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ನಂತರ 53 ವರ್ಷದ ಗಾಯಕ ಕೆಕೆ ಕುಸಿದು ಬಿದ್ದು ಸಾವು
Krishnakumar Kunnath Death: ಕೆಕೆ ಅಂತಲೇ ಜನಪ್ರಿಯರಾಗಿದ್ದ ಬಾಲಿವುಡ್ನ ಹೆಸರಾಂತ ಗಾಯಕ ಕೃಷ್ಣಕುಮಾರ್ ಕುನ್ನತ್ ಮೇ 31ರಂದು ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುವಾಗಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (53 ವರ್ಷ ವಯಸ್ಸು) ಮೇ 31ನೇ ತಾರೀಕಿನಂದು, ಮಂಗಳವಾರ ಸಂಗೀತ ಕಾರ್ಯಕ್ರಮ ನೀಡಿದ ನಂತರ ಕೋಲ್ಕತ್ತಾದಲ್ಲಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮ ನೀಡಿ ಹೋಟೆಲ್ಗೆ ವಾಪಸಾದ ವೇಳೆ ಮೆಟ್ಟಿಲಲ್ಲಿ ಕುಸಿದುಬಿದ್ದ ಅವರು, ಮೃತಪಟ್ಟಿದ್ದಾರೆ. ಸಚಿವರಾದ ಅನುಪ್ ಬಿಸ್ವಾಸ್ ಮಾತನಾಡಿದ್ದು, ಗಾಯಕ ಅನುಪಮ್ ರಾಯ್ ನನಗೆ ಕರೆ ಮಾಡಿದ್ದರು. ಆಸ್ಪತ್ರೆಯಿಂದ ಕೆಟ್ಟ ಸುದ್ದಿ ಕೇಳುತ್ತಿದ್ದೇನೆ ಎಂದರು. ನಾನು ಆಸ್ಪತ್ರೆಯವರನ್ನೇ ಸಂಪರ್ಕಿಸಿದಾಗ, ಕರೆತರುವಾಗಲೇ ಕೆಕೆ ಮೃತಪಟ್ಟಿದ್ದರು ಎಂದು ತಿಳಿಸಿದ್ದರು ಎಂದಿದ್ದಾರೆ.
Saddened by the untimely demise of noted singer Krishnakumar Kunnath popularly known as KK. His songs reflected a wide range of emotions as struck a chord with people of all age groups. We will always remember him through his songs. Condolences to his family and fans. Om Shanti.
— Narendra Modi (@narendramodi) May 31, 2022
ಎನ್ಡಿಟಿವಿ ವರದಿ ಪ್ರಕಾರ, ಇಂದು (ಮೇ 31ಕ್ಕೆ) ಕೋಲ್ಕತ್ತಾದಲ್ಲಿ ಸಂಗೀತ ಕಛೇರಿಯ ನಂತರ ಗಾಯಕ ಕೆಕೆ ನಿಧನರಾದರು. ಅವರ ಅಧಿಕೃತ ಇನ್ಸ್ಟಾಗ್ರಾಮ್ ಪುಟವು ಸುಮಾರು 10 ಗಂಟೆಗಳ ಹಿಂದೆ ಕೋಲ್ಕತ್ತಾದ ಸಭಾಂಗಣದಲ್ಲಿ ನಡೆದ ಸಂಗೀತ ಕಛೇರಿಯ ದೃಶ್ಯಗಳನ್ನು ಹೊಂದಿದೆ. ಕೋಲ್ಕತ್ತಾದ ನಜ್ರುಲ್ ಮಂಚಾ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮದ ನಂತರ 53 ವರ್ಷದ ಗಾಯಕ ಅವರು ತಂಗಿದ್ದ ಹೋಟೆಲ್‌ನ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಗಾಯಕ ಮೃತಪಟ್ಟಿರುವುದಾಗಿ ಸಿಎಂಆರ್‌ಐ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Extremely sad and shocked to know of the sad demise of KK. What a loss! Om Shanti ??
— Akshay Kumar (@akshaykumar) May 31, 2022
1990ರ ದಶಕದ ಉತ್ತರಾರ್ಧದಲ್ಲಿ, ಹದಿಹರೆಯದವರಲ್ಲಿ ದೊಡ್ಡ ಹಿಟ್ ಆಗಿ ಹೊರಹೊಮ್ಮಿದ ‘ಪಾಲ್’ ಮತ್ತು ‘ಯಾರೋನ್’ ನಂತಹ ಹಾಡುಗಳಿಗೆ ಕೆಕೆ ಹೆಸರುವಾಸಿಯಾಗಿದ್ದಾರೆ. ಶಾಲೆ ಮತ್ತು ಕಾಲೇಜುಗಳ ವಿದಾಯ ಮತ್ತು ಹದಿಹರೆಯದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಗಾಗ ಕೇಳಲಾಗುತ್ತದೆ. 1999ರಲ್ಲಿ ಅವರ ಮೊದಲ ಆಲ್ಬಂ ಪಾಲ್ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. 2000ರ ದಶಕದ ಆರಂಭದಿಂದ ಅವರು ಹಿನ್ನೆಲೆ ಗಾಯನದ ವೃತ್ತಿಜೀವನದಲ್ಲಿ ಮಿಂಚಿದರು. ಮತ್ತು ಬಾಲಿವುಡ್ ಚಲನಚಿತ್ರಗಳಿಗಾಗಿ ವ್ಯಾಪಕ ಶ್ರೇಣಿಯ ಜನಪ್ರಿಯ ಹಾಡುಗಳನ್ನು ಹಾಡಿದರು.
ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ನಟರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. “ಕೆಕೆ ಅವರ ದುಃಖದ ನಿಧನದ ಬಗ್ಗೆ ತಿಳಿದು ತುಂಬಾ ದುಃಖ ಮತ್ತು ಆಘಾತವಾಗಿದೆ. ಎಂಥ ನಷ್ಟ! ಓಂ ಶಾಂತಿ” ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
#WATCH | Singer KK died hours after a concert in Kolkata on May 31st. The auditorium shares visuals of the event held some hours ago. KK was known for songs like 'Pal' and 'Yaaron'. He was brought dead to the CMRI, the hospital told.
Video source: Najrul Manch FB page pic.twitter.com/YiG64Cs9nP
— ANI (@ANI) May 31, 2022
ಕೆಕೆ ಅವರು ಜನಿಸಿದ್ದು ಆಗಸ್ಟ್ 23, 1968ರಂದು, ದೆಹಲಿಯಲ್ಲಿ. ಅವರ ಪೋಷಕರು ಹಿಂದೂ ಮಲಯಾಳಿ ಕುಟುಂಬದವರು. ಮೂಲಗಳ ಪ್ರಕಾರ, ಕೋಲ್ಕತ್ತಾದ ದ ಗ್ರ್ಯಾಂಡ್ ಹೋಟೆಲ್ನಲ್ಲಿ ಹೃದಯ ಸ್ತಂಭನದಿಂದ ಕೆಕೆ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಜ್ಯೋತಿಕೃಷ್ಣ, ಮಕ್ಕಳಾದ ಕುನ್ನತ್ ನಕುಲ್, ಕುನ್ನತ್ ತಾಮರ ಇದ್ದಾರೆ.
His last concert..last song ? tbh my Spotify playlist is full of KK songs..heartbreaking news #RIPKK pic.twitter.com/TUSSRcJkos
— gungun♡ (@thoughtfulkid_) May 31, 2022
ಕನ್ನಡದಲ್ಲಿ ಪರಿಚಯ, ಮನಸಾರೆ, ಸಂಚಾರಿ, ಮಳೆ ಬರಲಿ ಮಂಜು ಇರಲಿ, ಲವ್, ಬಹುಪರಾಕ್, ಯೋಗಿ, ಮದನ, ನೀನ್ಯಾರೆ, ಕ್ಷಣಕ್ಷಣ, ರೌಡಿ ಅಳಿಯ ಸೇರಿದಂತೆ ಅನೇಕ ಸಿನಿಮಾಗಳಿಗಾಗಿ ಕೆಕೆ ಹಾಡಿದ್ದಾರೆ.
ಮನರಂಜನೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೃದಯಾಘಾತ ಮತ್ತು ಹೃದಯ ಸ್ತಂಭನ ಒಂದೇ ಅಲ್ಲ; ಇವುಗಳ ನಡುವೆ ಇರುವ ವ್ಯತ್ಯಾಸ ತಿಳಿಯಿರಿ
Published On - 12:00 am, Wed, 1 June 22