AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಾಘಾತ ಮತ್ತು ಹೃದಯ ಸ್ತಂಭನ ಒಂದೇ ಅಲ್ಲ; ಇವುಗಳ ನಡುವೆ ಇರುವ ವ್ಯತ್ಯಾಸ ತಿಳಿಯಿರಿ

ಹೃದಯಾಘಾತವು ಹೃದಯ ಸ್ತಂಭನದಂತೆಯೇ ಇರುತ್ತದೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಹೃದಯಾಘಾತ ಮತ್ತು ಹೃದಯ ಸ್ತಂಭನದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು, ಈ ಎರಡೂ ಪ್ರಕ್ರಿಯೆಗಳಲ್ಲಿ ಏನಾಗುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಅವಶ್ಯಕ.

ಹೃದಯಾಘಾತ ಮತ್ತು ಹೃದಯ ಸ್ತಂಭನ ಒಂದೇ ಅಲ್ಲ; ಇವುಗಳ ನಡುವೆ ಇರುವ ವ್ಯತ್ಯಾಸ ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on:Oct 29, 2021 | 4:07 PM

Share

ಇತ್ತೀಚಿನ ವರ್ಷಗಳಲ್ಲಿ ಯುವಕರು ಕೂಡ ಹೃದಯಾಘಾತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 4 ಸಾವುಗಳಲ್ಲಿ ಒಂದು ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾಗುವ ಸಾವಾಗಿದೆ. ಶೇ 80ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದೆ. ಅದರಲ್ಲೂ ಹೆಚ್ಚಿನವರು 40 ಮತ್ತು 55 ರ ವಯಸ್ಸಿನವರಾಗಿದ್ದಾರೆ. ಹೃದಯಾಘಾತದಿಂದ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹೃದಯಾಘಾತ ಮತ್ತು ಹೃದಯ ಸ್ತಂಭನದ ಬಗ್ಗೆ ಈಗಲೂ ಗೊಂದಲ ಇದೆ. ಹೀಗಾಗಿ ಇವುಗಳ ನಡುವಿನ ವ್ಯತ್ಯಾಸ ತಿಳಿಯುವುದು ಸೂಕ್ತ.

ಹೃದಯಾಘಾತವು ಹೃದಯ ಸ್ತಂಭನದಂತೆಯೇ ಇರುತ್ತದೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಹೃದಯಾಘಾತ ಮತ್ತು ಹೃದಯ ಸ್ತಂಭನದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು, ಈ ಎರಡೂ ಪ್ರಕ್ರಿಯೆಗಳಲ್ಲಿ ಏನಾಗುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಅವಶ್ಯಕ.

ಹೃದಯಾಘಾತ ಎಂದರೇನು? ಹೃದಯವು ನಮ್ಮ ದೇಹದ ನರಗಳಿಗೆ ರಕ್ತವನ್ನು ಕಳುಹಿಸುವ ಕೆಲಸ ಮಾಡುತ್ತದೆ. ಪರಿಧಮನಿ ಅಪಧಮನಿಗಳಲ್ಲಿ ಅಡಚಣೆ ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಇದು ಹೆಚ್ಚಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ. ಅಂತಹ ಅಡಚಣೆಯನ್ನು ತ್ವರಿತವಾಗಿ ಪರಿಹರಿಸದಿದ್ದರೆ, ಹೃದಯ ಸ್ನಾಯುವಿನ ಭಾಗಗಳು ಸಾಯಲು ಪ್ರಾರಂಭವಾಗುತ್ತದೆ. ಅಂದರೆ ಹೃದಯಕ್ಕೆ ರಕ್ತ ಸಂಚಲನೆ ಆಗದೆ ಬ್ಲಾಕ್ ಆದಾಗ ಹೃದಯಾಘಾತವಾಗುತ್ತದೆ. ಹೃದಯದ ನಾಲ್ಕು ರಕ್ತನಾಳಗಳಲ್ಲಿ ಬ್ಲಾಕ್ ಆದಲ್ಲಿ ಈ ಸಮಸ್ಯೆ ಎದುರಾಗುತ್ತದೆ.

ಹೃದಯ ಸ್ತಂಭನ ಎಂದರೇನು? ಹೃದಯ ಸ್ತಂಭನವು ಹೃದಯಾಘಾತಕ್ಕಿಂತ ಭಿನ್ನವಾಗಿರುತ್ತದೆ. ಹೃದಯ ಸ್ತಂಭನದಲ್ಲಿ ರಕ್ತ ಪೂರೈಕೆ ನಿಲ್ಲುತ್ತದೆ. ಇದರಿಂದ ಹೃದಯವು ಬಡಿಯುವುದನ್ನು ನಿಲ್ಲಿಸುತ್ತದೆ. ಅಂದರೆ ಹೃದಯ ಸ್ತಂಭನವಾದಲ್ಲಿ ರಕ್ತ ಪರಿಚಲನೆ ನಿಲ್ಲುತ್ತದೆ. ಇದರಿಂದ ಮೆದುಳಿಗೆ ಕೂಡ ರಕ್ತ ಪೂರೈಕೆ ಆಗುವುದೇ ನಿಂತು ಹೋಗುತ್ತದೆ. ಇಂತಹ ಸನ್ನಿವೇಶದಲ್ಲಿ ಬ್ರೇನ್​ ಡೆಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಹೃದಯಾಘಾತ ಮತ್ತು ಹೃದಯ ಸ್ತಂಭನದ ಲಕ್ಷಣಗಳು

ಶಾರೀರಿಕ ಕಾರ್ಯವಿಧಾನವು ವಿಭಿನ್ನವಾಗಿರುವುದರ ಜೊತೆಗೆ, ಹೃದಯಾಘಾತ ಮತ್ತು ಹೃದಯ ಸ್ತಂಭನದ ಲಕ್ಷಣಗಳು ಸಹ ಬದಲಾಗಿರುತ್ತದೆ.

ಹೃದಯಾಘಾತದ ಲಕ್ಷಣಗಳು

ಎದೆ ನೋವು  ಇದು ಸಾಮಾನ್ಯವಾಗಿ ಎದೆಯ ಮಧ್ಯದಲ್ಲಿ ಬಿಗಿತದ ಭಾವನೆಯಾಗಿದ್ದು, ಇದು ಹಲವಾರು ನಿಮಿಷಗಳವರೆಗೆ ಇರುತ್ತದೆ. ವಿಶ್ರಾಂತಿ ತೆಗೆದುಕೊಂಡ ನಂತರ ಕಡಿಮೆಯಾಗುವುದಿಲ್ಲ. ಹೃದಯಾಘಾತದ ಸಾಮಾನ್ಯ ಲಕ್ಷಣ ಎದೆ ನೋವಾಗಿದ್ದರೂ, ಹೃದಯಾಘಾತದಿಂದ ಬಳಲುತ್ತಿರುವ ಎಲ್ಲಾ ರೋಗಿಗಳು ಎದೆ ನೋವು ಅನುಭವಿಸುವುದಿಲ್ಲ. ಎದೆ ನೋವು ಇತರ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇದೆ. ತೋಳು, ದವಡೆ, ಕುತ್ತಿಗೆ, ಬೆನ್ನು ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಉಸಿರಾಟದ ತೊಂದರೆ, ಕೆಮ್ಮುವುದು, ಉಬ್ಬಸ, ಆತಂಕ, ತಲೆತಿರುಗುವಿಕೆ, ಬೆವರುವುದು ಕೂಡ ಇನ್ನಿತರ ಲಕ್ಷಣಗಳು.

ಹೃದಯ ಸ್ತಂಭನದ ಲಕ್ಷಣಗಳು

ನಾಡಿ ಬಡಿತ ನಿಲ್ಲುತ್ತದೆ ಹೃದಯ ಸ್ತಂಭನದ ಸಮಯದಲ್ಲಿ ಹೃದಯದ ಬಡಿತ ನಿಲ್ಲುವುದರಿಂದ ನಾಡಿಮಿಡಿತದ ಕೊರತೆ ಉಂಟಾಗುತ್ತದೆ. ಇದರ ಪರಿಣಾಮವಾಗಿ, ದೇಹದ ಅಂಗಗಳು ರಕ್ತದಿಂದ ವಂಚಿತವಾಗುತ್ತವೆ. ಇದು ಸಾವಿಗೆ ಕಾರಣವಾಗಬಹುದು. ಇನ್ನು ಎದೆ ನೋವು, ಉಸಿರಾಟದ ತೊಂದರೆ, ತಲೆತಿರುಗುವಿಕೆ, ವಾಕರಿಕೆ ಉಂಟಾಗುತ್ತದೆ.

ಇದನ್ನೂ ಓದಿ: Puneeth Rajkumar: ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನ; ಕರ್ನಾಟಕದ ಪಾಲಿಗೆ ಕರಾಳ ಶುಕ್ರವಾರ

ಹೃದಯಾಘಾತವಾದಾಗ ನಿಮ್ಮ ಬಳಿ ಇರತ್ತೆ ಗೋಲ್ಡನ್ ಟೈಮ್; ವೈದ್ಯರು ನೀಡುವ ಸಲಹೆ ಏನು ?

Published On - 3:50 pm, Fri, 29 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ