R Madhavan Birthday: ಮಾಧವನ್​ ಜನ್ಮದಿನ; ಬಹುಭಾಷಾ ನಟನ ಈ 5 ಅತ್ಯುತ್ತಮ ಸಿನಿಮಾಗಳನ್ನು ಮಿಸ್​ ಮಾಡಲೇಬೇಡಿ

R Madhavan Best Movies: ಇಂದು (ಜೂ.01) ಬಹುಭಾಷಾ ನಟ ಮಾಧವನ್​ ಜನ್ಮದಿನ. ಅವರು ಅಭಿನಯಿಸಿರುವ 5 ಅತ್ಯುತ್ತಮ ಸಿನಿಮಾಗಳ ಪಟ್ಟಿ ಇಲ್ಲಿದೆ.

R Madhavan Birthday: ಮಾಧವನ್​ ಜನ್ಮದಿನ; ಬಹುಭಾಷಾ ನಟನ ಈ 5 ಅತ್ಯುತ್ತಮ ಸಿನಿಮಾಗಳನ್ನು ಮಿಸ್​ ಮಾಡಲೇಬೇಡಿ
ಆರ್ ಮಾಧವನ್​
Follow us
TV9 Web
| Updated By: shivaprasad.hs

Updated on: Jun 01, 2022 | 6:40 AM

ಬಹುಭಾಷಾ ನಟ ಆರ್.ಮಾಧವನ್ (R Madhavan) ತಮ್ಮ ನಟನೆಯಿಂದ ಎಲ್ಲಾ ಭಾಷೆಗಳಲ್ಲೂ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಹೆಚ್ಚಾಗಿ ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಮಾಧವನ್ ಸಕ್ರಿಯರಾಗಿದ್ದಾರೆ. ತಮಿಳಿನಷ್ಟೇ ಹಲವು ಹಿಂದಿ ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ ಕೀರ್ತಿ ಮಾಧವನ್​ರದ್ದು. ಹೀಗಾಗಿಯೇ ಮಾಧವನ್​ ಅವರನ್ನು ಪ್ಯಾನ್​ ಇಂಡಿಯಾ ನಟ ಎನ್ನಬಹುದು. 2001ರಲ್ಲಿ ತೆರೆ ಕಂಡ ‘ರೆಹ್ನಾ ಹೈ ತೆರೆ ದಿಲ್ ಮೈನ್’ ಚಿತ್ರದಲ್ಲಿನ ಲವರ್​ ಬಾಯ್​ ಪಾತ್ರ ಇರಬಹುದು ಅಥವಾ ‘3 ಈಡಿಯಟ್ಸ್​​’ (3 Idiots) ಚಿತ್ರದ ಪಾತ್ರವೇ ಇರಬಹುದು. ಅಥವಾ ‘ವಿಕ್ರಮ್​ ವೇದ’ದ ವಿಕ್ರಮ್​ ಪಾತ್ರವೇ ಇರಬಹುದು. ಮಾಧವನ್​ ಕ್ಲಾಸ್​ ಹಾಗೂ ಮಾಸ್​ ಎರಡರಲ್ಲೂ ಸೈ ಎನಿಸಿಕೊಂಡವರು. ಈಗ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆರ್.ಮಾಧವನ್​ ಕನ್ನಡ ಚಿತ್ರವೊಂದರಲ್ಲೂ ಬಣ್ಣಹಚ್ಚಿದ್ದಾರೆ. 1998ರಲ್ಲಿ ತೆರೆಗೆ ಬಂದ ‘ಶಾಂತಿ ಶಾಂತಿ ಶಾಂತಿ’ ಚಿತ್ರದಲ್ಲಿ ಅವರು ಅಭಿನಯಿಸಿದ್ದರು. ಮಾಧವನ್​ ನಟನೆಯ ಕೆಲವು ಗಮನಸೆಳೆಯುವ ಸಿನಿಮಾಗಳ ಪಟ್ಟಿ ಇಲ್ಲಿದೆ.

‘3 ಈಡಿಯಟ್ಸ್​’:

ಫರ್ಹಾನ್ ಖುರೇಶಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾಧವನ್​, ಫೋಟೋಗ್ರಾಫರ್ ಆಗುವ ಬಯಕೆಯನ್ನು ಹೊತ್ತ ಇಂಜಿನಿಯರ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ
Image
Salman Khan: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್​ ಭದ್ರತೆ ಹೆಚ್ಚಳ
Image
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​
Image
Stranger Things 4: ‘ಸ್ಟ್ರೇಂಜರ್​ ಥಿಂಗ್ಸ್​ 4’ನಲ್ಲಿ ಗಾಂಧಿ ಹೆಸರು ಉಲ್ಲೇಖ; ಮುಂದಿನ ಸೀಸನ್​ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ
Image
3 Idiots: ‘3 ಈಡಿಯಟ್ಸ್​’ ಚಿತ್ರೀಕರಣಗೊಂಡ ಬೆಂಗಳೂರಿನ ಐಐಎಂ ಕ್ಯಾಂಪಸ್​ ಈಗ ಹೇಗಿದೆ? ಇಲ್ಲಿದೆ ನೋಡಿ

ಇದನ್ನೂ ಓದಿ: 3 Idiots: ‘3 ಈಡಿಯಟ್ಸ್​’ ಚಿತ್ರೀಕರಣಗೊಂಡ ಬೆಂಗಳೂರಿನ ಐಐಎಂ ಕ್ಯಾಂಪಸ್​ ಈಗ ಹೇಗಿದೆ? ಇಲ್ಲಿದೆ ನೋಡಿ

‘ರೆಹ್ನಾ ಹೈ ತೆರೆ ದಿಲ್ ಮೈನ್’:

2001ರಲ್ಲಿ ಗತೆರೆ ಕಂಡ ‘ರೆಹ್ನಾ ಹೈ ತೆರೆ ದಿಲ್ ಮೈನ್’ ಚಿತ್ರವು ಬಾಕ್ಸಾಫೀಸ್​ನಲ್ಲಿ ಹೆಸರು ಮಾಡಲು ಸೋತಿದ್ದು ನಿಜ. ಆದರೆ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇದು ಮಾಧವನ್​ರನ್ನು ಚಿತ್ರರಂಗಕ್ಕೆ ಪರಿಚಯಿಸಿತು. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಹಾಗೂ ದಿಯಾ ಮಿರ್ಜಾ ಕೂಡ ಕಾಣಿಸಿಕೊಂಡಿದ್ದರು.

‘ತನು ವೆಡ್ಸ್​ ಮನು ರಿಟರ್ನ್ಸ್​​’:

ರೊಮ್ಯಾಂಟಿಕ್ ಕಾಮಿಡಿ ಮಾದರಿಯ ‘ತನು ವೆಡ್ಸ್​ ಮನು ರಿಟರ್ನ್ಸ್​’ ಚಿತ್ರದಲ್ಲಿ ಕಂಗನಾ ರಣಾವತ್ ಹಾಗೂ ಮಾಧವನ್ ಬಣ್ಣಹಚ್ಚಿದ್ದರು. ಆನಂದ್ ಎಲ್​ ರೈ ಚಿತ್ರವನ್ನು ನಿರ್ದೇಶಿಸಿದ್ದರು. 2015ರಲ್ಲಿ ಚಿತ್ರ ತೆರೆಗೆ ಬಂದಿತ್ತು.

‘ಬ್ರೀಥ್’:

ಈ ವೆಬ್​ ಸೀರೀಸ್ ಮೂಲಕ ಓಟಿಟಿಗೆ ಮಾಧವನ್ ಪದಾರ್ಪಣೆ ಮಾಡಿದರು. ಸಾಮಾನ್ಯ ಮನುಷ್ಯನ ಅಸಾಮಾನ್ಯ ಸನ್ನಿವೇಶಗಳ ಬಗ್ಗೆ ಇದರ ಕತೆ ಇದೆ.

‘ರಾಕೆಟ್ರಿ: ದಿ ನಂಬಿ ಎಫೆಕ್ಟ್​​’:

ಇದು ಮಾಧವನ್ ನಟನೆಯ ಮುಂದಿನ ಚಿತ್ರ. ಈ ಚಿತ್ರಕ್ಕೆ ಸ್ವತಃ ಮಾಧವನ್​ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ನಿರೀಕ್ಷೆಗಳು ಮೂಡಿವೆ. ಕಾನ್ ಚಿತ್ರೋತ್ಸವದಲ್ಲಿ ‘ರಾಕೆಟ್​: ದಿ ನಂಬಿ ಎಫೆಕ್ಟ್​’ ಪ್ರದರ್ಶನ ಕಂಡಿದೆ. 2022ರ ಜುಲೈ 1ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ