Jacqueline Fernandez: ಸೆನ್ಸೇಶನ್ ಸೃಷ್ಟಿಸಿದ ‘ರಾ ರಾ ರಕ್ಕಮ್ಮ’; ಕನ್ನಡದಲ್ಲೇ ಧನ್ಯವಾದ ಹೇಳಿದ ಜಾಕ್ವೆಲಿನ್​

Jacqueline Fernandez: ಸೆನ್ಸೇಶನ್ ಸೃಷ್ಟಿಸಿದ ‘ರಾ ರಾ ರಕ್ಕಮ್ಮ’; ಕನ್ನಡದಲ್ಲೇ ಧನ್ಯವಾದ ಹೇಳಿದ ಜಾಕ್ವೆಲಿನ್​

TV9 Web
| Updated By: shivaprasad.hs

Updated on: May 31, 2022 | 6:30 PM

Kichcha Sudeep | Vikrant Rona Movie: ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’ ಹಾಡು ಎಲ್ಲೆಡೆ ಸೆನ್ಸೇಶನ್ ಸೃಷ್ಟಿಸಿದೆ. ಜನರ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್. ವಿಡಿಯೋ ಸಂದೇಶದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಮನಗೆದ್ದಿದ್ದಾರೆ ನಟಿ.

ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ (Vikrant Rona) ಈಗ ಎಲ್ಲೆಡೆ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ಚಿತ್ರದ ‘ರಾ ರಾ ರಕ್ಕಮ್ಮ’ (Ra Ra Rakkamma) ಹಾಡು ರಿಲೀಸ್ ಆಗಿತ್ತು. ಅದೀಗ ವೈರಲ್ ಆಗಿರುವುದಲ್ಲದೇ ಸಖತ್ ಟ್ರೆಂಡ್ ಆಗಿದೆ. ಹಲವು ತಾರೆಯರು ಆ ಹಾಡಿಗೆ ಸ್ಟೆಪ್​ ಹಾಕುತ್ತಿದ್ದಾರೆ. ಹಾಡಿಗೆ ಬರುತ್ತಿರುವ ಪ್ರತಿಕ್ರಿಯೆಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಖುಷಿಯಾಗಿದ್ದಾರೆ. ವಿಡಿಯೋ ಸಂದೇಶದ ಮೂಲಕ ಅಭಿಮಾನಿಗಳಿಗೆ ನಟಿ ಧನ್ಯವಾದ ಹೇಳಿದ್ದಾರೆ. ನಟಿ ಕನ್ನಡದಲ್ಲೇ ಮಾತನಾಡಿರುವುದು ವಿಶೇಷ. ‘‘ರಾ ರಾ ರಕ್ಕಮ್ಮ ದೊಡ್ಡ ಹಿಟ್ ಆಗಿದೆ. ಇನ್ನು ಎಲ್ಲೆಡೆ ಒಂದೇ ಹೆಸರು ವಿಕ್ರಾಂತ್ ರೋಣ’’ ಎಂದು ಹೇಳಿದ್ದಾರೆ ಜಾಕ್ವೆಲಿನ್. ಜತೆಗೆ ‘ರಾ ರಾ ರಕ್ಕಮ್ಮ’ಗೆ ತೋರಿಸಿರುವ ಪ್ರೀತಿಗೆ ಕನ್ನಡಿಗರಿಗೆ ಧನ್ಯವಾದ ಹೇಳಿದ್ದಾರೆ ನಟಿ. ‘‘ಎಲ್ಲರನ್ನೂ ಬೆಂಗಳೂರಿನಲ್ಲಿ ಭೇಟಿಯಾಗುವುದಕ್ಕೆ ಕಾಯುತ್ತಿದ್ದೇನೆ. ಅಲ್ಲಿಯವರೆಗೆ ರಾ ರಾ ರಕ್ಕಮ್ಮ ಹಾಡನ್ನು ಎಲ್ಲಾ ಭಾಷೆಗಳಲ್ಲಿ ಕೇಳಿ ಎಂಜಾಯ್ ಮಾಡಿ’’ ಎಂದು ನುಡಿದಿದ್ದಾರೆ ಜಾಕ್ವೆಲಿನ್. ಕನ್ನಡದಲ್ಲೇ ಮಾತನಾಡಿರುವ ನಟಿಯ ಪ್ರಯತ್ನಕ್ಕೆ ಫ್ಯಾನ್ಸ್​ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ