AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

Kichcha Sudeep Reel | Jacqueline Fernandez: ಜಾಕ್ವೆಲಿನ್ ಫರ್ನಾಂಡಿಸ್​ಗೆ ವಿಡಿಯೋ ಕರೆ ಮಾಡಿರುವ ಕಿಚ್ಚ ಸುದೀಪ್ ನಟಿಯನ್ನು ಕನ್ನಡದಲ್ಲಿ ಮಾತನಾಡಿಸಿದ್ದಾರೆ. ನಂತರ ಜಾಕ್ವೆಲಿನ್ ಕೋರಿಕೆಯಂತೆ ಸುದೀಪ್ ಮೊತ್ತಮೊದಲ ಬಾರಿಗೆ ರೀಲ್ಸ್ ಮಾಡಿದ್ದಾರೆ. ‘ರಾ ರಾ ರಕ್ಕಮ್ಮ’ ಹಾಡಿಗೆ ಕಿಚ್ಚ ಹೆಜ್ಜೆಹಾಕಿರುವುದು ಸದ್ಯ ವೈರಲ್ ಆಗಿದೆ.

Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್
ಜಾಕ್ವೆಲಿನ್ ಫರ್ನಾಂಡಿಸ್ (ಎಡ), ‘ವಿಕ್ರಾಂತ್ ರೋಣ’ ಪೋಸ್ಟರ್, ಕಿಚ್ಚ ಸುದೀಪ್ (ಬಲ)
TV9 Web
| Updated By: shivaprasad.hs|

Updated on:May 27, 2022 | 3:06 PM

Share

ಸದ್ಯ ಕನ್ನಡ ಚಿತ್ರಗಳು ದೇಶಾದ್ಯಂತ ಗಮನ ಸೆಳೆಯುತ್ತಿವೆ. ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ (Vikrant Rona Movie) ಕೂಡ ಇದೇ ಹಾದಿಯಲ್ಲಿದೆ. ಈಗಾಗಲೇ ಬಹುಭಾಷೆಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಕಿಚ್ಚ ‘ವಿಕ್ರಾಂತ್ ರೋಣ’ ಮೂಲಕ ದೊಡ್ಡ ಸಾಹಸಕ್ಕೆ ಮುಂದಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟಿಸಿದ್ದು, ಇತ್ತೀಚೆಗೆ ತೆರೆಕಂಡಿದ್ದ ‘ರಾ ರಾ ರಕ್ಕಮ್ಮ’ (Ra Ra Rakkamma) ಹಾಡು ಹಿಟ್ ಆಗಿದೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ‘ಗಡಂಗ್ ರಕ್ಕಮ್ಮ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಡಿನೊಂದಿಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಡು ಯಶಸ್ಸು ಕಂಡಿದ್ದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಜಾಕ್ವೆಲಿನ್​ ತಮ್ಮ ಹೊಸ ಗೆಟಪ್​ಗೆ ಬರುತ್ತಿರುವ ಪ್ರತಿಕ್ರಿಯೆಗಳಿಗೆ ಖುಷಿ ವ್ಯಕ್ತಪಡಿಸಿದ್ದರು. ಇದೀಗ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಅದರಲ್ಲಿ ನಟಿಗೆ ಕನ್ನಡದಲ್ಲಿ ಮಾತನಾಡುವ ಚಾಲೆಂಜ್ ಮಾಡಿದ್ದಾರೆ. ಅದರಲ್ಲಿ ಯಶಸ್ವಿಯಾದ ಜಾಕ್ವೆಲಿನ್ ಪ್ರತಿಸವಾಲಿನಂತೆ ಮೊತ್ತಮೊದಲ ಬಾರಿಗೆ ರೀಲ್ಸ್ ಮಾಡಿದ್ದಾರೆ ಸುದೀಪ್.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಕಿಚ್ಚ ಸುದೀಪ್, ಜಾಕ್ವೆಲಿನ್​ಗೆ ವಿಡಿಯೋ ಕರೆ ಮಾಡಿದ್ದಾರೆ. ಅದರಲ್ಲಿ ಮೊದಲಿಗೆ ಹಾಡಿಗೆ ಬರುತ್ತಿರುವ ಪ್ರತಿಕ್ರಿಯೆಗೆ ಈರ್ವರೂ ಸಂತಸ ಹಂಚಿಕೊಂಡಿದ್ದಾರೆ. ನಂತರ ಜಾಕ್ವೆಲಿನ್​ ಸುದೀಪ್​ಗೆ ಹಾಡಿನ ರೀಲ್ಸ್ ಮಾಡುವಂತೆ ಕೋರಿಕೊಂಡಿದ್ದಾರೆ. ಆಗ ಸುದೀಪ್ ಒಂದು ಷರತ್ತಿನ ಮೇಲೆ ವಿಡಿಯೋ ಮಾಡುವುದಾಗಿ ತಿಳಿಸಿ, ನಟಿಗೆ ಕನ್ನಡದ ಸಾಲನ್ನು ಪುನರುಚ್ಛಾರ ಮಾಡುವಂತೆ ಹೇಳಿದ್ದಾರೆ.

ಇದನ್ನೂ ಓದಿ
Image
KGF Chapter 2: 6 ವಾರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಗಳಿಸಿದ್ದೆಷ್ಟು? ಇದು ಬೆರಗಾಗಿಸೋ ನಂಬರ್!
Image
ವಿಷ್ಣುವರ್ಧನ್ ಸ್ಮಾರಕದ ಕೆಲಸ ಪೂರ್ಣಗೊಳ್ಳೋದು ಯಾವಾಗ? ಮಾಹಿತಿ ನೀಡಿದ ಅನಿರುದ್ಧ್​
Image
ಮೂವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ; ಆಸ್ಕರ್ ವಿಜೇತ ನಟನಿಗೆ ಹೆಚ್ಚಾಯ್ತು ಸಂಕಷ್ಟ
Image
Vikrant Rona: ‘ಊರಲ್ಲೆಲ್ಲಾ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು..’; ಭರ್ಜರಿಯಾಗಿ ‘ವಿಕ್ರಾಂತ್ ರೋಣ’ ಡೈಲಾಗ್ ಹೊಡೆದ ಜಾಕ್ವೆಲಿನ್​

‘ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದೀನಿ’ ಎಂದು ಹೇಳುವಂತೆ ಜಾಕ್ವೆಲಿನ್​ಗೆ ತಿಳಿಸಿದ್ದಾರೆ ಸುದೀಪ್. ಉದ್ದನೆಯ ಸಾಲನ್ನು ಪುನರುಚ್ಛಾರ ಮಾಡುವುದು ತುಸು ಕಷ್ಟ, ಆದರೂ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಜಾಕ್ವೆಲಿನ್. ಅಚ್ಚರಿಯೆಂದರೆ ನಟಿ ಸಾಲುಗಳನ್ನು ಯಶಸ್ವಿಯಾಗಿ ನುಡಿದಿದ್ದಾರೆ. ಕೊನೆಗೆ ಸುದೀಪ್ ರೀಲ್ಸ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ.

ಜಾಕ್ವೆಲಿನ್- ಕಿಚ್ಚ ಸಂಭಾಷಣೆಯ ವಿಡಿಯೋ ಇಲ್ಲಿದೆ:

ಜಾಕ್ವೆಲಿನ್​ ಜತೆ ಮಾತನಾಡುತ್ತಾ ತಿಳಿಸಿದಂತೆ ಸುದೀಪ್ ಮೊದಲ ರೀಲ್ಸ್ ಮಾಡಿದ್ದು, ಅದರಲ್ಲಿ ‘ರಾ ರಾ ರಕ್ಕಮ್ಮ’ ಹಾಡಿನ ಹಿಟ್ ಟ್ಯೂನ್​ಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಸುದೀಪ್ ‘ರಾ ರಾ ರಕ್ಕಮ್ಮ’ ಹಾಡಿಗೆ ರೀಲ್ಸ್ ಮಾಡಿರುವ ವಿಡಿಯೋ ಇಲ್ಲಿದೆ:

ಜುಲೈ 28ರಂದು ‘ವಿಕ್ರಾಂತ್ ರೋಣ’ ವಿಶ್ವಾದ್ಯಂತ ತೆರೆಕಾಣುತ್ತಿದೆ. ಹಲವು ಭಾಷೆಗಳಲ್ಲಿ ಚಿತ್ರವನ್ನು ತೆರೆಕಾಣಿಸಲು ಚಿತ್ರತಂಡ ನಿರ್ಧರಿಸಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಜಾಕ್ ಮಂಜು ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Fri, 27 May 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ