ಫ್ರೆಂಡ್ಸ್ ಮದುವೆಗೆ ಹಾಜರಿ ಹಾಕಿದ ರಶ್ಮಿಕಾ ಮಂದಣ್ಣ; ಕೊಡಗಿನ ಕುವರಿ ಬರೆದ್ರು ವಿಶೇಷ ಸಾಲು

ರಶ್ಮಿಕಾ ಬೆಂಗಳೂರಿಗೆ ಬಂದು ಫ್ರೆಂಡ್ಸ್​​ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡು ವಿಶೇಷ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಫ್ರೆಂಡ್ಸ್ ಮದುವೆಗೆ ಹಾಜರಿ ಹಾಕಿದ ರಶ್ಮಿಕಾ ಮಂದಣ್ಣ; ಕೊಡಗಿನ ಕುವರಿ ಬರೆದ್ರು ವಿಶೇಷ ಸಾಲು
ಫ್ರೆಂಡ್ಸ್ ಮದುವೆಗೆ ಹಾಜರಿ ಹಾಕಿದ ರಶ್ಮಿಕಾ ಮಂದಣ್ಣ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 26, 2022 | 2:55 PM

ನಟಿ ರಶ್ಮಿಕಾ ಮಂದಣ್ಣ ಅವರು (Rashmika Mandanna) ಬಾಲಿವುಡ್​ನಲ್ಲಿ, ಟಾಲಿವುಡ್​ನಲ್ಲಿ, ಕಾಲಿವುಡ್​​ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಸಂಭಾವನೆ ಏರಿಸಿಕೊಂಡಿದ್ದಕ್ಕೋ ಏನೋ ಸ್ಯಾಂಡಲ್​ವುಡ್​ನ ಯಾವೊಬ್ಬ ನಿರ್ಮಾಪಕರು ಅವರ ಜತೆ ಕೈ ಜೋಡಿಸುತ್ತಿಲ್ಲ. ಈ ಮಧ್ಯೆ ರಶ್ಮಿಕಾ ಅನೇಕ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಳ್ಳುವುದು ಎಂದರೆ ಕೊಂಚ ಕಷ್ಟವೇ. ಆದಾಗ್ಯೂ, ರಶ್ಮಿಕಾ ತಮ್ಮ ಗೆಳೆಯರಿಗಾಗಿ, ಕುಟುಂಬಕ್ಕಾಗಿ ಸಮಯ ಹೊಂದಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಗೆಳೆತಿಯ ಮದುವೆಗೆ ತೆರಳಿ ಶುಭ ಹಾರೈಸಿ ಬಂದಿದ್ದರು. ಈಗ ಅವರು ಮತ್ತೊಂದು ಮದುವೆ ಅಟೆಂಡ್ ಮಾಡಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹುಟ್ಟೂರಾದ ಕೊಡಗಿಗೆ ತೆರಳಿದ್ದರು. ಈ ವೇಳೆ ಅವರು ಗೆಳತಿಯ ಮದುವೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಶ್ಮಿಕಾ ಅವರು ಕೊಡಗಿನ ಶೈಲಿಯಲ್ಲಿ ಸೀರೆ ಉಟ್ಟಿದ್ದು ಗಮನ ಸೆಳೆದಿತ್ತು. ಈಗ ರಶ್ಮಿಕಾ ಬೆಂಗಳೂರಿಗೆ ಬಂದು ಫ್ರೆಂಡ್ಸ್​​ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡು ವಿಶೇಷ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್​ ಲೈಕ್ಸ್​

ಇದನ್ನೂ ಓದಿ
Image
ರಶ್ಮಿಕಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್​ಗೆ ರೆಡಿ; ಕನ್ನಡದಲ್ಲಿ ಮಾತ್ರ ಆಗಲ್ಲ ಬಿಡುಗಡೆ
Image
ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
Image
ಅಬ್ಬಬ್ಬಾ.. ರಶ್ಮಿಕಾ ಚಿತ್ರಕ್ಕೆ ಈ ಪರಿ ಬೇಡಿಕೆ; ಬಹುಕೋಟಿ ಡೀಲ್​ಗಾಗಿ ಇಬ್ಬರ ನಡುವೆ ಬಿಗ್​ ಪೈಪೋಟಿ
Image
ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?

‘ನೀವು ಭೇಟಿಯಾದ ದಿನದಿಂದ, ನೀವು ಸ್ನೇಹಿತರಾಗುವ ದಿನದವರೆಗೆ. ನೀವು ಡೇಟಿಂಗ್ ಮಾಡಲು ಪ್ರಾರಂಭಿಸಿದ ದಿನದಿಂದ, ನೀವು ಮದುವೆಯಾಗುವುದಾಗಿ ಹೇಳಿದ ದಿನದವರೆಗೆ ನಾನು ನಿಮ್ಮ ಜತೆಗೆ ಇದ್ದೆ. ಸುಂದರ ಪ್ರಯಾಣಕ್ಕೆ ಸಾಕ್ಷಿಯಾಗಿದೆದ್ದೇನೆ. ನಾನು ನಿಮ್ಮಿಬ್ಬರನ್ನು ಪ್ರೀತಿಸುತ್ತೇನೆ. ನೀವು ನನ್ನ ಜೀವನದಲ್ಲಿರುವುದು ನಿಜಕ್ಕೂ ಖುಷಿಯ ವಿಚಾರ’ ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ರಶ್ಮಿಕಾ ಅವರ ಸೀರೆಯನ್ನು ಹೊಗಳಿದ್ದಾರೆ. ಇನ್ನೂ ಕೆಲವರು ನವ ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಈ ಫೋಟೋಗೆ ಲಕ್ಷಾಂತರ ಲೈಕ್ಸ್ ಬಂದಿದೆ.

ಇದನ್ನೂ ಓದಿ: ರಶ್ಮಿಕಾ, ವಿಜಯ್ ದೇವರಕೊಂಡ, ಸಲ್ಮಾನ್..; ಕರಣ್ ಜೋಹರ್​​ ಬರ್ತ್​ಡೇ ಪಾರ್ಟಿಯಲ್ಲಿ ಭಾಗವಹಿಸಿದ ತಾರೆಯರು ಯಾರೆಲ್ಲಾ?

ಈ ಮದುವೆ ನಡೆದಿದ್ದು ಮೇ 25ರಂದು. ಮಧ್ಯಾಹ್ನ ಮದುವೆಗೆ ಹಾಜರಿ ಹಾಕಿ ಸಂಜೆ ಕರಣ್​ ಜೋಹರ್ ಬರ್ತ್​ಡೇ ಪಾರ್ಟಿಗೆ ರಶ್ಮಿಕಾ ತೆರಳಿದ್ದರು. ಈ ಫೋಟೋಗಳೂ ವೈರಲ್ ಆಗಿವೆ. ಈ ಪಾರ್ಟಿಯಲ್ಲಿ ರಶ್ಮಿಕಾ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಕರಣ್ ಅವರ 50ನೇ ವರ್ಷದ ಬರ್ತ್​ಡೇ. ಹೀಗಾಗಿ, ತುಂಬಾನೇ ವಿಶೇಷವಾಗಿ ಆಚರಿಸಲಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ