AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್​ಗೆ ರೆಡಿ; ಕನ್ನಡದಲ್ಲಿ ಮಾತ್ರ ಆಗಲ್ಲ ಬಿಡುಗಡೆ

‘ಸೀತಾ ರಾಮಂ’ ಸಿನಿಮಾ ಬಗ್ಗೆ ಕುತೂಹಲ ಮೂಡಲು ಕಾರಣ ರಶ್ಮಿಕಾ ಮಂದಣ್ಣ ಅವರ ಗೆಟಪ್. ರಶ್ಮಿಕಾ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದರಲ್ಲಿ ರಶ್ಮಿಕಾ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು.

ರಶ್ಮಿಕಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್​ಗೆ ರೆಡಿ; ಕನ್ನಡದಲ್ಲಿ ಮಾತ್ರ ಆಗಲ್ಲ ಬಿಡುಗಡೆ
ರಶ್ಮಿಕಾ
TV9 Web
| Edited By: |

Updated on:May 25, 2022 | 5:01 PM

Share

ನಟಿ ರಶ್ಮಿಕಾ ಮಂದಣ್ಣ ಅವರು (Rashmika Mandanna) ಸದ್ಯ ಸಖತ್ ಬ್ಯುಸಿ ಆಗಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಅವರು ತೊಡಗಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಕೆಲ ಸಿನಿಮಾಗಳ ಕೆಲಸಗಳು ವಿಳಂಬ ಆದವು. ಈಗ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸೀತಾ ರಾಮಂ’ ಸಿನಿಮಾ (Sita Ramam Movie) ರಿಲೀಸ್​​ಗೆ ರೆಡಿ ಇದೆ. ಆಗಸ್ಟ್​ 5ರಂದು ಈ ಚಿತ್ರ ತೆರೆಗೆ ಬರುತ್ತಿರುವ ಬಗ್ಗೆ ಸಿನಿಮಾ ತಂಡ ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ಮೃಣಲಾ ಠಾಕೂರ್ ಮೊದಲಾದವರು ನಟಿಸಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

‘ಸೀತಾ ರಾಮಂ’ ಸಿನಿಮಾ ಬಗ್ಗೆ ಕುತೂಹಲ ಮೂಡಲು ಕಾರಣ ರಶ್ಮಿಕಾ ಮಂದಣ್ಣ ಅವರ ಗೆಟಪ್. ರಶ್ಮಿಕಾ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದರಲ್ಲಿ ರಶ್ಮಿಕಾ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು. ಸದ್ಯ, ಹಿಜಾಬ್ ವಿಚಾರ ಕರ್ನಾಕಟದಲ್ಲಿ ಚರ್ಚೆಯಲ್ಲಿದೆ. ಹೀಗಿರುವಾಗಲೇ ಅವರು ಈ ರೀತಿಯ ವೇಷದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅವರು ಈ ರೀತಿ ಕಾಣಿಸಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ಆಗಸ್ಟ್​ 5ರಂದು ಉತ್ತರ ಸಿಗಲಿದೆ.

ಇದನ್ನೂ ಓದಿ
Image
ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
Image
ಅಬ್ಬಬ್ಬಾ.. ರಶ್ಮಿಕಾ ಚಿತ್ರಕ್ಕೆ ಈ ಪರಿ ಬೇಡಿಕೆ; ಬಹುಕೋಟಿ ಡೀಲ್​ಗಾಗಿ ಇಬ್ಬರ ನಡುವೆ ಬಿಗ್​ ಪೈಪೋಟಿ
Image
ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?
Image
ವಿಜಯ್​ಗೆ ಜೋಡಿ ಆಗಿದ್ದಕ್ಕೆ ರಶ್ಮಿಕಾಗೆ ಎಷ್ಟು ಖುಷಿ ಅಂತ ಮಾತಲ್ಲಿ ಹೇಳೋಕಾಗಲ್ಲ; ಫೋಟೋ ನೋಡಿ ತಿಳಿಯಬೇಕಷ್ಟೇ

ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್​ ಲೈಕ್ಸ್​

‘ಸೀತಾ ರಾಮಂ’ ಸಿನಿಮಾ ಬಗ್ಗೆ ಕನ್ನಡಿಗರಿಗೆ ಬೇಸರವಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಆದರೆ, ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿಲ್ಲ. ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡಬೇಕು ಎನ್ನುವ ಒತ್ತಾಯ ಜೋರಾಗಿದೆ.

‘ಸೀತಾ ರಾಮಮಂ’ ಸಿನಿಮಾ ರಿಲೀಸ್ ಬಗ್ಗೆ ಟ್ರೇಡ್​ ಅನಲಿಸ್ಟ್ ತರಣ್ ಆದರ್ಶ್​ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ಗೆ ಅನೇಕ ಕನ್ನಡಿಗರು ಕಮೆಂಟ್ ಮಾಡಿದ್ದಾರೆ. ‘ಈ ಸಿನಿಮಾ ಕನ್ನಡದಲ್ಲಿ ಏಕಿಲ್ಲ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹನು ರಾಘವಪುಡಿ ಅವರು ನಿರ್ದೇಶನ ಮಾಡಿದ್ದು, ಅವರೇ ಇದಕ್ಕೆ ಸ್ಪಷ್ಟನೆ ನೀಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:57 pm, Wed, 25 May 22

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ