AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ.. ರಶ್ಮಿಕಾ ಚಿತ್ರಕ್ಕೆ ಈ ಪರಿ ಬೇಡಿಕೆ; ಬಹುಕೋಟಿ ಡೀಲ್​ಗಾಗಿ ಇಬ್ಬರ ನಡುವೆ ಬಿಗ್​ ಪೈಪೋಟಿ

ಬಹುಕೋಟಿ ರೂಪಾಯಿ ಬಿಸ್ನೆಸ್​ ದಕ್ಕಿಸಿಕೊಳ್ಳಲು ಎರಡು ಸಂಸ್ಥೆಗಳು ಜಿದ್ದಿಗೆ ಬಿದ್ದಿವೆ. ಶೀಘ್ರದಲ್ಲೇ ಈ ಡೀಲ್​ ಕುದುರಲಿದ್ದು, ಆ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಘೋಷಣೆ ಆಗಲಿದೆ.

ಅಬ್ಬಬ್ಬಾ.. ರಶ್ಮಿಕಾ ಚಿತ್ರಕ್ಕೆ ಈ ಪರಿ ಬೇಡಿಕೆ; ಬಹುಕೋಟಿ ಡೀಲ್​ಗಾಗಿ ಇಬ್ಬರ ನಡುವೆ ಬಿಗ್​ ಪೈಪೋಟಿ
ರಶ್ಮಿಕಾ
TV9 Web
| Edited By: |

Updated on:May 17, 2022 | 10:03 AM

Share

ದಿನದಿಂದ ದಿನಕ್ಕೆ ಚಿತ್ರರಂಗದ ವಹಿವಾಟು ದೊಡ್ಡದಾಗುತ್ತಿದೆ. ಒಟಿಟಿ ಪ್ಲಾಟ್​ಫಾರ್ಮ್​ (OTT Platform) ಪ್ರಭಾವ ಹೆಚ್ಚಿದ ಬಳಿಕ ಸಿನಿಮಾಗಳ ಬಿಸ್ನೆಸ್​ ಸೂತ್ರವೇ ಬದಲಾಯಿತು. ಚಿತ್ರಮಂದಿರದಲ್ಲಿ ಬರುವ ಆದಾಯದ ಜೊತೆಗೆ ಒಟಿಟಿಯಿಂದಲೂ ಭರ್ಜರಿ ಕಮಾಯಿ ಮಾಡಬಹುದು ಎಂಬ ಭರವಸೆ ಮೂಡಿದೆ. ಬಹುತೇಕ ಎಲ್ಲ ಸಿನಿಮಾಗಳ ನಿರ್ಮಾಪಕರು ಒಟಿಟಿ ಮಾರುಕಟ್ಟೆಯಲ್ಲಿ ಸಿಗುವ ಲಾಭವನ್ನು ಗಮನದಲ್ಲಿ ಇಟ್ಟುಕೊಂಡೇ ಸಿನಿಮಾ ಮಾಡುತ್ತಿದ್ದಾರೆ. ಅಮೇಜಾನ್​ ಪ್ರೈಮ್​ ವಿಡಿಯೋ, ನೆಟ್​ಫ್ಲಿಕ್ಸ್​, ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​, ಜೀ5, ಸೋನಿ ಲಿವ್​, ವೂಟ್​, ಎಂಎಕ್ಸ್​ ಪ್ಲೇಯರ್​, ಆಲ್ಟ್​ ಬಾಲಾಜಿ.. ಸೇರಿದಂತೆ ಹತ್ತು ಹಲವು ಒಟಿಟಿ ಸಂಸ್ಥೆಗಳು ಸಕ್ರಿಯವಾಗಿವೆ. ಈ ಎಲ್ಲ ಸಂಸ್ಥೆಗಳ ನಡುವೆ ಪೈಪೋಟಿ ಜೋರಾಗಿದೆ. ಬಹುನಿರೀಕ್ಷಿತ ಸಿನಿಮಾಗಳ ಪ್ರಸಾರ ಹಕ್ಕುಗಳನ್ನು ಖರೀದಿಸಲು ಟಫ್​ ಸ್ಪರ್ಧೆ ಏರ್ಪಟ್ಟಿದೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಒಟಿಟಿ ಹಕ್ಕುಗಳನ್ನು ಕೊಂಡುಕೊಳ್ಳಲು ಅಮೇಜಾನ್​ ಪ್ರೈಂ ವಿಡಿಯೋ ಮತ್ತು ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಸಂಸ್ಥೆಗಳು ಭಾರಿ ಪೈಪೋಟಿ ನಡೆಸುತ್ತಿವೆ ಎಂಬ ಸುದ್ದಿ ಕೇಳಿಬಂದಿದೆ.

ಸುಕುಮಾರ್​ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್​ ಜೋಡಿಯಾಗಿ ನಟಿಸಿದರು. ಡಾಲಿ ಧನಂಜಯ, ರಾವ್​ ರಮೇಶ್​, ಫಹಾದ್​ ಫಾಸಿಲ್​ ಮುಂತಾದ ಘಟಾನುಘಟಿ ಕಲಾವಿದರು ಅದರಲ್ಲಿ ಅಭಿನಯಿಸಿದರು. ಪರಿಣಾಮವಾಗಿ ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಆಯಿತು. ಬಳಿಕ ಆ ಚಿತ್ರ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಒಟಿಟಿ ಜಗತ್ತಿಗೆ ಕಾಲಿಟ್ಟು ಅಲ್ಲಿಯೂ ಜನರನ್ನು ರಂಜಿಸಿತು. ಈಗ ‘ಪುಷ್ಪ 2’ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿವೆ. ಈ ಚಿತ್ರದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆ. ಅಷ್ಟರಲ್ಲಾಗಲೇ ಎರಡು ಒಟಿಟಿ ಸಂಸ್ಥೆಗಳು ಇದರ ಪ್ರಸಾರ ಹಕ್ಕುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದಿವೆ ಎನ್ನಲಾಗುತ್ತಿದೆ. ಈ ಕುರಿತು ‘ಇಂಡಿಯಾ ಟುಡೇ’ ವರದಿ ಮಾಡಿದೆ.

‘ಪುಷ್ಪ 2’ ಚಿತ್ರ ಮೊದಲು ಥಿಯೇಟರ್​ನಲ್ಲಿ ಬಿಡುಗಡೆ ಆಗುತ್ತದೆ. ನಂತರ ಒಟಿಟಿಗೆ ಕಾಲಿಡುತ್ತದೆ. ಹಾಗಿದ್ದರೂ ಕೂಡ ಒಟಿಟಿ ಪ್ರಸಾರ ಹಕ್ಕುಗಳ ಬೆಲೆ ಬಹುಕೋಟಿ ರೂಪಾಯಿಗೆ ಮಾರಾಟ ಆಗಲಿದೆ. ಬೆಲೆ ಎಷ್ಟೇ ದುಬಾರಿ ಆದರೂ ಕೂಡ ಅದರಿಂದ ಲಾಭ ಆಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ‘ಅಮೇಜಾನ್​ ಪ್ರೈಂ ವಿಡಿಯೋ’ ಮತ್ತು ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಸಂಸ್ಥೆಗಳು ‘ಪುಷ್ಪ 2’ ಚಿತ್ರದ ಒಟಿಟಿ ಹಕ್ಕನ್ನು ತಮ್ಮದಾಗಿಸಿಕೊಳ್ಳಲು ಜಿದ್ದಿಗೆ ಬಿದ್ದಿವೆ.

ಇದನ್ನೂ ಓದಿ
Image
ಬಾಲಿವುಡ್​ ಸಿನಿಮಾಗಳಿಗೆ ಕುಸಿದ ಬೇಡಿಕೆ; ‘ಪೃಥ್ವಿರಾಜ್​’ ಚಿತ್ರ ನೇರವಾಗಿ ಒಟಿಟಿಗೆ?
Image
ಒಟಿಟಿಗೆ ಬಂದ ನಂತರ ಥಿಯೇಟರ್​ನಲ್ಲಿ ರೀ-ರಿಲೀಸ್ ಆಗುತ್ತಿದೆ ‘ಆರ್​ಆರ್​ಆರ್​’ ಸಿನಿಮಾ
Image
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
Image
ಜ್ಯೂ. ಎನ್​ಟಿಆರ್​ ಬರ್ತ್​ಡೇ ದಿನವೇ ‘ಆರ್​ಆರ್​ಆರ್’ ಚಿತ್ರದ ಒಟಿಟಿ ಪ್ರೀಮಿಯರ್​; ಇಲ್ಲಿದೆ ಹೊಸ ಟ್ರೇಲರ್​

ಅಂತಿಮವಾಗಿ ‘ಪುಷ್ಪ 2’ ಸಿನಿಮಾದ ಒಟಿಟಿ ರೈಟ್ಸ್​ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶೀಘ್ರದಲ್ಲೇ ಈ ಡೀಲ್​ ಖುದುರಲಿದ್ದು, ಈ ಬಗ್ಗೆ ನಿರ್ಮಾಪಕರಿಂದ ಅಧಿಕೃತ ಘೋಷಣೆ ಆಗಲಿದೆ. ಅದ್ದೂರಿ ಬಜೆಟ್​ನಲ್ಲಿ ‘ಪುಷ್ಪ 2’ ಚಿತ್ರ ಮೂಡಿಬರುತ್ತಿದೆ. ಅದರಲ್ಲೂ ‘ಕೆಜಿಎಫ್​ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಬಳಿಕ ಅದನ್ನು ಮೀರಿಸುವ ರೀತಿಯಲ್ಲಿ ‘ಪುಷ್ಪ 2’ ಮಾಡಬೇಕು ಎಂಬ ಹಠದೊಂದಿಗೆ ಇಡೀ ಟೀಮ್​ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್​’ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:58 am, Tue, 17 May 22

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ