ಬಾಲಿವುಡ್​ ಸಿನಿಮಾಗಳಿಗೆ ಕುಸಿದ ಬೇಡಿಕೆ; ‘ಪೃಥ್ವಿರಾಜ್​’ ಚಿತ್ರ ನೇರವಾಗಿ ಒಟಿಟಿಗೆ?

ವೀಕೆಂಡ್​ನಲ್ಲೂ ‘ಜಯೇಶ್​ಭಾಯ್​ ಜೋರ್ದಾರ್’ ಸಿನಿಮಾಗೆ ಪ್ರೇಕ್ಷಕರು ಬರುತ್ತಿಲ್ಲ. ಹೀಗಾಗಿ, ಪ್ರದರ್ಶಕರು ಈ ಸಿನಿಮಾ ಬದಲು ‘ಕೆಜಿಎಫ್ 2’ ಹಾಗೂ ‘ಡಾಕ್ಟರ್​ ಸ್ಟ್ರೇಂಜ್​’ ಸೀಕ್ವೆಲ್ ಪ್ರದರ್ಶನ ಮಾಡುತ್ತಿದ್ದಾರೆ. ಇದು ಯಶ್ ರಾಜ್ ಫಿಲ್ಮ್ಸ್ ಕೋಪಕ್ಕೆ ಕಾರಣವಾಗಿದೆ.

ಬಾಲಿವುಡ್​ ಸಿನಿಮಾಗಳಿಗೆ ಕುಸಿದ ಬೇಡಿಕೆ; ‘ಪೃಥ್ವಿರಾಜ್​’ ಚಿತ್ರ ನೇರವಾಗಿ ಒಟಿಟಿಗೆ?
ಅಕ್ಷಯ್ ಕುಮಾರ್
Follow us
TV9 Web
| Updated By: shivaprasad.hs

Updated on:May 17, 2022 | 7:16 AM

ಬಾಲಿವುಡ್​ನಲ್ಲಿ (Bollywood Movies) ತಯಾರಾದ ಸಿನಿಮಾಗಳಿಗೆ ಅಲ್ಲಿಯೇ ಬೇಡಿಕೆ ಇಲ್ಲ ಎಂಬಂತಾಗಿದೆ. ಇತ್ತೀಚೆಗೆ ತೆರೆಗೆ ಬಂದ ಬಾಲಿವುಡ್​ನ ಬಹುತೇಕ ಸಿನಿಮಾಗಳು ಮಕಾಡೆ ಮಲಗುತ್ತಿವೆ. ಇದು ಬಾಲಿವುಡ್ ಮಂದಿಯ ಆತಂಕ ಹೆಚ್ಚಿಸಿದೆ. ‘ರನ್​ವೇ 34’ ಹಾಗೂ ‘ಹೀರೋಪಂತಿ 2’ ಚಿತ್ರಗಳು ಈಗಾಗಲೇ ಸೋಲು ಕಂಡಿವೆ. ಕಳೆದ ವಾರ ರಿಲೀಸ್ ಆದ ‘ಜಯೇಶ್​ಭಾಯ್​ ಜೋರ್ದಾರ್’ ಸಿನಿಮಾವನ್ನು (Jayeshbhai Jordaar) ಜನರು ಒಪ್ಪಿಕೊಳ್ಳಲೇ ಇಲ್ಲ. ಈ ಸಿನಿಮಾ ಮೊದಲ ವಾರಾಂತ್ಯಕ್ಕೆ ಗಳಿಸಿದ್ದು ಸುಮಾರು 12 ಕೋಟಿ ರೂಪಾಯಿ ಪಾತ್ರ. ಇದರಿಂದ ಬಾಲಿವುಡ್ ನಿರ್ಮಾಪಕರು ಅಕ್ಷರಶಃ ಚಿಂತೆಗೆ ಒಳಗಾಗಿದ್ದಾರೆ. ಮುಂಬರುವ ಚಿತ್ರಗಳನ್ನು ನೇರವಾಗಿ ಒಟಿಟಿಗೆ ರಿಲೀಸ್ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

‘ಜಯೇಶ್​ಭಾಯ್​ ಜೋರ್ದಾರ್’ ಚಿತ್ರವನ್ನು ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣ ಮಾಡಿದೆ. ಇದೇ ಪ್ರೊಡಕ್ಷನ್​ ಹೌಸ್​ನಲ್ಲಿ ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್​’ ಸಿನಿಮಾ ಮೂಡಿಬರುತ್ತಿದೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್​ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ‘ಜಯೇಶ್​ಭಾಯ್​ ಜೋರ್ದಾರ್’ ಚಿತ್ರದಿಂದ ಯಶ್ ರಾಜ್​ ಫಿಲ್ಮ್ಸ್​ ನಷ್ಟ ಅನುಭವಿಸುತ್ತಿವೆ. ಹೀಗಾಗಿ, ‘ಪೃಥ್ವಿರಾಜ್​’ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
ಮಂಡ್ಯದಲ್ಲಿ ಸನ್ನಿ ಬರ್ತ್​ಡೇ ಬಲುಜೋರು; ರಕ್ತದಾನ ಮಾಡಿ, ಕೇಕ್​ ಕತ್ತರಿಸಿ, ಬಿರಿಯಾನಿ ಹಂಚಿದ ಫ್ಯಾನ್ಸ್​
Image
ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ
Image
‘ಪೃಥ್ವಿರಾಜ್’ ಟ್ರೇಲರ್​ನಲ್ಲಿ ಮಿಂಚಿದ ಅಕ್ಷಯ್​ ಕುಮಾರ್; ಈ ಸಿನಿಮಾದಿಂದ ಚೇತರಿಸಿಕೊಳ್ಳಲಿದೆಯೇ ಬಾಲಿವುಡ್​?
Image
‘ನೀವು ಮಗಳನ್ನು ದತ್ತು ಪಡೆದಿದ್ದು ಪಬ್ಲಿಸಿಟಿ ಗಿಮಿಕ್​’; ಅಭಿಮಾನಿ ಮಾತಿಗೆ ಸನ್ನಿ ಲಿಯೋನ್​ ಉತ್ತರ ಏನು?

ವೀಕೆಂಡ್​ನಲ್ಲೂ ‘ಜಯೇಶ್​ಭಾಯ್​ ಜೋರ್ದಾರ್’ ಸಿನಿಮಾಗೆ ಪ್ರೇಕ್ಷಕರು ಬರುತ್ತಿಲ್ಲ. ಹೀಗಾಗಿ, ಪ್ರದರ್ಶಕರು ಈ ಸಿನಿಮಾ ಬದಲು ‘ಕೆಜಿಎಫ್ 2’ ಹಾಗೂ ‘ಡಾಕ್ಟರ್​ ಸ್ಟ್ರೇಂಜ್​’ ಸೀಕ್ವೆಲ್ ಪ್ರದರ್ಶನ ಮಾಡುತ್ತಿದ್ದಾರೆ. ಇದು ಯಶ್ ರಾಜ್ ಫಿಲ್ಮ್ಸ್ ಕೋಪಕ್ಕೆ ಕಾರಣವಾಗಿದೆ. ಗುರುವಾರದವರೆಗೆ ನಿಗದಿತ ಶೋ ಪ್ರದರ್ಶನ ಮಾಡಲು ಪ್ರದರ್ಶಕರ ಬಳಿ ಯಶ್ ರಾಜ್ ಫಿಲ್ಮ್ಸ್​ ಕೋರಿದೆ. ಒಂದೊಮ್ಮೆ ಹಾಗೆ ಆಗದೆ ಇದ್ದರೆ ‘ಪೃಥ್ವಿರಾಜ್​’ ಹಾಗೂ ರಣಬೀರ್ ಕಪೂರ್ ನಟನೆಯ ‘ಶಂಷೇರಾ’ ಚಿತ್ರಗಳನ್ನು ನೇರವಾಗಿ ಒಟಿಟಿಗೆ ರಿಲೀಸ್ ಮಾಡಲು ನಿರ್ಮಾಣ ಸಂಸ್ಥೆ ನಿರ್ಧರಿಸಿದೆ ಎಂದು ವರದಿ ಆಗಿದೆ.

ದೊಡ್ಡದೊಡ್ಡ ಚಿತ್ರಗಳು ಒಟಿಟಿಯಲ್ಲಿ ನೇರವಾಗಿ ರಿಲೀಸ್ ಆದರೆ ನಿರ್ಮಾಪಕರಿಗೆ ಹೆಚ್ಚು ಹಣ ಸಿಗುತ್ತದೆ. ಸದ್ಯದ ಟ್ರೆಂಡ್ ನೋಡಿದರೆ ಬಾಲಿವುಡ್​ ಚಿತ್ರಗಳು ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡುವುದು ಅನುಮಾನವೇ. ಹೀಗಾಗಿ, ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಿ ದುಡ್ಡು ಮಾಡಿಕೊಳ್ಳುವ ಆಲೋಚನೆ ಚಿತ್ರತಂಡದ್ದು ಎನ್ನಲಾಗುತ್ತಿದೆ. ಈ ಬಗ್ಗೆ ಯಶ್ ರಾಜ್​ ಫಿಲ್ಮ್ಸ್​ ಅಂತಿಮವಾಗಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Tue, 17 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ