ಈದ್ ಸಮಯದಲ್ಲೇ ‘ರನ್​ವೇ 34’ ರಿಲೀಸ್ ಆಗುತ್ತಿರುವುದು ತಿಳಿದು ತಕ್ಷಣ ಸಲ್ಮಾನ್​ಗೆ ಫೋನ್ ಮಾಡಿದ್ದ ಅಜಯ್ ದೇವಗನ್; ಏನು ಕಾರಣ?

ಈದ್ ಸಮಯದಲ್ಲೇ ‘ರನ್​ವೇ 34’ ರಿಲೀಸ್ ಆಗುತ್ತಿರುವುದು ತಿಳಿದು ತಕ್ಷಣ ಸಲ್ಮಾನ್​ಗೆ ಫೋನ್ ಮಾಡಿದ್ದ ಅಜಯ್ ದೇವಗನ್; ಏನು ಕಾರಣ?
ಅಜಯ್ ದೇವಗನ್, ಸಲ್ಮಾನ್ ಖಾನ್

Ajay Devgan | Salman Khan | Runway 34: ಸಲ್ಮಾನ್ ಖಾನ್ ನಟನೆಯ ‘ರಾಧೆ’, ‘ಯುವರ್ ಮೋಸ್ಟ್ ವಾಂಟೆಡ್ ಭಾಯಿ’, ‘ಭಾರತ್’, ‘ಸುಲ್ತಾನ್’, ‘ಟ್ಯೂಬ್​ಲೈಟ್’ ಮೊದಲಾದ ಚಿತ್ರಗಳು ಈದ್ ಸಮಯದಲ್ಲಿ ತೆರೆಕಂಡಿದ್ದವು. ಅಜಯ್ ದೇವಗನ್ ನಟಿಸಿ, ನಿರ್ದೇಶಿಸಿರುವ ‘ರನ್​ವೇ 34’ ಈದ್ ಸಮಯದಲ್ಲಿಯೇ ತೆರೆಕಾಣಲಿದೆ.

TV9kannada Web Team

| Edited By: shivaprasad.hs

Apr 26, 2022 | 2:21 PM

ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಆಕ್ಷನ್ ಕಟ್ ಹೇಳಿ ಅಭಿನಯಿಸಿರುವ ಚಿತ್ರ ‘ರನ್​ವೇ 34’ (Runway 34) ತೆರೆಗೆ ಬರಲು ಸಿದ್ಧವಾಗಿದೆ. ಇದೇ ಏಪ್ರಿಲ್ 29ರಂದು ಚಿತ್ರ ತೆರೆಕಾಣಲಿದೆ. ಈದ್ ಸಂದರ್ಭದಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದರ ಬಗ್ಗೆ ಪಿಂಕ್​ವಿಲ್ಲಾ ಜತೆ ಅಜಯ್ ದೇವಗನ್ ಮಾತನಾಡಿದ್ದು, ಕುತೂಹಲಕರ ವಿಚಾರ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈದ್ ಸಂದರ್ಭದಲ್ಲಿ ಸಾಮಾನ್ಯವಾಗಿ ಸಲ್ಮಾನ್ ಖಾನ್ ಸಿನಿಮಾಗಳು ತೆರೆಕಾಣುತ್ತವೆ. ಅವರ ಇತ್ತೀಚಿನ ಎಲ್ಲಾ ಚಿತ್ರಗಳೂ ರಿಲೀಸ್ ಆಗಿರುವುದು ಈದ್ ದಿನದಂದೇ. ಹೀಗಿರುವಾಗ ‘ರನ್​ವೇ 34’ ತೆರೆಕಾಣುವ ಸಮಯದಲ್ಲಿಯೇ ಈದ್ ಕೂಡ ಬರುತ್ತದೆ ಎಂದು ತಿಳಿದ ಅಜಯ್ ದೇವಗನ್ ತಕ್ಷಣ ಸಲ್ಮಾನ್​ ಕರೆ ಮಾಡಿದ್ದರಂತೆ. ಸಲ್ಮಾನ್ ಉತ್ತರ ಏನಾಗಿತ್ತು ಎನ್ನುವುದನ್ನು ನಟ ವಿವರಿಸಿದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ರಾಧೆ’, ‘ಯುವರ್ ಮೋಸ್ಟ್ ವಾಂಟೆಡ್ ಭಾಯಿ’, ‘ಭಾರತ್’, ‘ಸುಲ್ತಾನ್’, ‘ಟ್ಯೂಬ್​ಲೈಟ್’ ಮೊದಲಾದ ಚಿತ್ರಗಳು ಈದ್ ಸಮಯದಲ್ಲಿ ತೆರೆಕಂಡಿದ್ದವು. ಪಿಂಕ್​ವಿಲ್ಲಾ ಜತೆಗೆ ಮಾತನಾಡುತ್ತಾ, ಅಜಯ್ ಸಲ್ಮಾನ್​ಗೆ ಚಿತ್ರದ ರಿಲೀಸ್ ಬಗ್ಗೆ ತಿಳಿಸಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

‘‘ನನ್ನ ಉದ್ದೇಶ ಈದ್ ಸಮಯದಲ್ಲಿ ರಿಲೀಸ್ ಮಾಡುವುದಾಗಿರಲಿಲ್ಲ. ಆದರೆ ನಾವು ಯೋಜಿಸಿದ್ದ ದಿನಾಂಕ ಈದ್​ಗೆ ಸಮೀಪವಿತ್ತು. ಈದ್ ಚಿತ್ರದ ರಿಲೀಸ್ ವಾರವೇ ಬರಲಿದೆ ಎಂಬುದು ನಂತರ ತಿಳಿಯಿತು. ವಿಷಯ ತಿಳಿದ ತಕ್ಷಣ ಸಲ್ಮಾನ್​ಗೆ ಫೋನ್ ಮಾಡಿದೆ’’ ಎಂದಿದ್ದಾರೆ ಅಜಯ್ ದೇವಗನ್. ಈ ಬಾರಿಯ ಈದ್ ಸೋಮವಾರ ಅಥವಾ ಮಂಗಳವಾರ ಆಚರಿಸಲಾಗುತ್ತದೆ.

ಸಲ್ಮಾನ್​ಗೆ ಕರೆ ಮಾಡಿ, ‘‘ನಾನು ಈ ದಿನಾಂಕದಂದು ಸಿನಿಮಾ ರಿಲೀಸ್ ಘೋಷಿಸಿದ್ದೇನೆ. ಅದೇ ಸಮಯದಲ್ಲಿ ಈದ್ ಬರುತ್ತದೆ. ನಿಮಗೆ ಒಪ್ಪಿಗೆಯೇ?’’ ಎಂದು ಅಜಯ್ ಪ್ರಶ್ನಿಸಿದರಂತೆ. ಅದಕ್ಕೆ ಉತ್ತರಿಸಿದ ಸಲ್ಮಾನ್, ‘‘ಏನೂ ತಲೆಬಿಸಿ ಮಾಡಿಕೊಳ್ಳಬೇಡಿ. ನಾನು ಆ ವಾರ ಬರುವುದಿಲ್ಲ. ಮುಂದಿನ ವರ್ಷದ ಈದ್​ ಸಮಯದಲ್ಲಿ ಬರುತ್ತೇನೆ’’ ಎಂದರಂತೆ. ಇದರಿಂದ ಸಮಾಧಾನವಾಯಿತು ಎಂದಿದ್ದಾರೆ ಅಜಯ್ ದೇವಗನ್.

ಸಿನಿಮಾ ಹಬ್ಬಕ್ಕೆ ಕನೆಕ್ಟ್ ಆಗಿರುತ್ತದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಜನರು ಆಗಮಿಸುತ್ತಾರೆ ಎಂದಿದ್ದಾರೆ ಅಜಯ್ ದೇವಗನ್. ಸಲ್ಮಾನ್ ಕೇವಲ ಅಜಯ್​ಗೆ ಅಭಯವನ್ನಷ್ಟೇ ನೀಡಿಲ್ಲ. ಕಳೆದ ಕೆಲವು ಸಮಯದ ಹಿಂದೆ ‘ರನ್​ವೇ 34’ ಟೀಸರ್ ರಿಲೀಸ್ ಮಾಡಿ ಶುಭವನ್ನೂ ಕೋರಿದ್ದರು. ಜತೆಗೆ ಅಭಿಮಾನಿಗಳಲ್ಲೂ ಅಜಯ್​ಗೆ ತಿಳಿಸಿದ್ದ ವಿಚಾರವನ್ನೇ ಸಲ್ಮಾನ್ ತಿಳಿಸಿದ್ದಾರೆ. ‘‘ನನ್ನ ಯಾವ ಚಿತ್ರಗಳೂ ಈ ಈದ್​ಗೆ ರಿಲೀಸ್ ಆಗುತ್ತಿಲ್ಲ. ಬದಲಾಗಿ ಸಹೋದರ ಅಜಯ್ ದೇವಗನ್ ಚಿತ್ರದೊಂದಿಗೆ ಈದ್ ಆಚರಿಸೋಣ’’ ಎಂದು ಸಲ್ಮಾನ್ ಬರೆದಿದ್ದರು.

ಸಲ್ಮಾನ್ ಹಂಚಿಕೊಂಡಿದ್ದ ಪೋಸ್ಟ್:

ಅಜಯ್ ದೇವಗನ್ ಇತ್ತೀಚೆಗೆ ಡಿಸ್ನೆ+ ಹಾಟ್​ಸ್ಟಾರ್​ನಲ್ಲಿ ತೆರೆಕಂಡ ‘ರುದ್ರ’ ಸೀರೀಸ್​ನಲ್ಲಿ ಕಾಣಿಸಿಕೊಂಡಿದ್ದರು. ‘ಆರ್​ಆರ್​ಆರ್​’ ಚಿತ್ರದಲ್ಲೂ ನಟ ಅಭಿನಯಿಸಿದ್ದರು. ತಮಿಳಿನ ‘ಕೈಥಿ’ ಚಿತ್ರದ ರಿಮೇಕ್ ‘ಭೋಲಾ’ದಲ್ಲಿ ನಟ ಬಣ್ಣಹಚ್ಚುತ್ತಿದ್ದಾರೆ.

ಇದನ್ನೂ ಓದಿ: Keerthy Suresh: ‘ಗ್ಲಾಮರಸ್ ಪಾತ್ರಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ?’; ಕೀರ್ತಿ ಸುರೇಶ್ ಉತ್ತರ ಹೀಗಿತ್ತು

ಆಸ್ಪತ್ರೆಯಲ್ಲೂ ಭುವಿ ಕೊಲ್ಲಲು ನಡೆಯಿತು ಪ್ರಯತ್ನ; ಹರ್ಷನ ಸಂತಸಕ್ಕೆ ಬ್ರೇಕ್?

Follow us on

Related Stories

Most Read Stories

Click on your DTH Provider to Add TV9 Kannada