‘ಕಾಜೊಲ್ ಬಹಳ ಜೋರು, ವಿಪರೀತ ಮಾತನಾಡುತ್ತಾರೆ; ಮತ್ತೊಮ್ಮೆ ಭೇಟಿಯಾಗುವುದು ಬೇಡ’ ಎಂದು ಯೋಚಿಸಿದ್ದ ಅಜಯ್ ದೇವಗನ್

Kajol | Ajay Devgan: ಬಾಲಿವುಡ್​ನ ಖ್ಯಾತ ತಾರಾ ಜೋಡಿಗಳಲ್ಲಿ ಒಂದಾದ ಅಜಯ್ ದೇವಗನ್ ಹಾಗೂ ಕಾಜೊಲ್ ಸದಾ ಸುದ್ದಿಯಲ್ಲಿರುತ್ತಾರೆ. ಅಜಯ್ ಕಾಜೊಲ್ ಅವರನ್ನು ಭೇಟಿಯಾದ ಸಂದರ್ಭ ಅವರಿಗನ್ನಿಸಿದ್ದೇನು? ಮುಂದೆ ಓದಿ.

‘ಕಾಜೊಲ್ ಬಹಳ ಜೋರು, ವಿಪರೀತ ಮಾತನಾಡುತ್ತಾರೆ; ಮತ್ತೊಮ್ಮೆ ಭೇಟಿಯಾಗುವುದು ಬೇಡ’ ಎಂದು ಯೋಚಿಸಿದ್ದ ಅಜಯ್ ದೇವಗನ್
ಕಾಜೊಲ್, ಅಜಯ್ ದೇವಗನ್
Follow us
TV9 Web
| Updated By: shivaprasad.hs

Updated on: Oct 26, 2021 | 1:34 PM

ಬಾಲಿವುಡ್​ನ ಖ್ಯಾತ ತಾರಾ ಜೋಡಿಗಳಲ್ಲಿ ಅಜಯ್ ದೇವಗನ್ ಹಾಗೂ ಕಾಜೊಲ್ ಜೋಡಿ ಕೂಡ ಒಂದು. ಅವರು ದಾಂಪತ್ಯಕ್ಕೆ ಕಾಲಿಟ್ಟು, 22 ವರ್ಷಗಳ ಸಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ, ಸಂದರ್ಶನಗಳಲ್ಲಿ ಸೇರಿದಂತೆ ಅನೇಕ ಕಡೆ ಈ ದಂಪತಿ ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಒಮ್ಮೆ ಅಜಯ್ ದೇವಗನ್ ಮಾತನಾಡುತ್ತಾ ಬಹಳ ಅಚ್ಚರಿಯ ಸಂಗತಿಯೊಂದನ್ನು ತೆರೆದಿಟ್ಟಿದ್ದರು. ಅವರಿಗೆ ಮೊದಲ ಬಾರಿಗೆ ಕಾಜೊಲ್ ಅವರನ್ನು ಭೇಟಿಯಾದ ನಂತರ ಎರಡನೇ ಬಾರಿ ಭೇಟಿಯಾಗಬೇಕು ಎಂದು ಅನ್ನಿಸಲರಲೇ ಇಲ್ಲವಂತೆ. ಇದಲ್ಲದೇ ಕಾಜೊಲ್ ವಿಪರೀತ ಮಾತನಾಡುತ್ತಾರೆ; ಅದೂ ಗಟ್ಟಿಯಾಗಿ. ಅಲ್ಲದೇ ಅವರು ಬಹಳ ಜೋರು ಎಂದು ಅಜಯ್ ಭಾವಿಸಿದ್ದರಂತೆ. ಆದ್ದರಿಂದಲೇ ಮತ್ತೊಮ್ಮೆ ಭೇಟಿಯಾಗಬೇಕು ಎಂಬ ತುಡಿತ ಇರಲಿಲ್ಲ. ಆದರೆ ವಿಧಿಯ ಕೈವಾಡ ಬೇರೆ ಇತ್ತು ಎಂದು ಅಜಯ್ ತಮಾಷೆ ಮಾಡಿದ್ದಾರೆ.

‘ಹಲ್ಚಲ್’ ಚಿತ್ರದಲ್ಲಿ ಈ ಜೋಡಿ ಮೊದಲ ಬಾರಿಗೆ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ಚಿತ್ರೀಕರಣಕ್ಕೂ ಮೊದಲು ಅಜಯ್ ಹಾಗೂ ಕಾಜೊಲ್ ಭೇಟಿಯಾಗಿದ್ದರಂತೆ. ಆದರೆ ಭೇಟಿಯಾಗುವುದಕ್ಕೆ ತನಗೆ ಅಂತಹ ಉತ್ಸಾಹವೇನೂ ಇರಲಿಲ್ಲ ಎಂದು ಅಜಯ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ‘‘ಅಲ್ಲದೇ ಒಮ್ಮೆ ಭೇಟಿಯಾದ ನಂತರವೂ ಮತ್ತೊಮ್ಮೆ ಭೇಟಿಯಾಗುವ ಆಶಯವೂ ಇರಲಿಲ್ಲ. ಕಾರಣ ಕಾಜೊಲ್, ಬಹಳ ಜೋರಾದ, ವಿಪರೀತ ಜೋರಾಗಿ ಮಾತನಾಡುವ ಹುಡುಗಿ ಎಂದು ನನಗನ್ನಿಸಿದ್ದಳು. ಆದರೆ ಏನಾಗಬೇಕೋ ಅದು ಆಗೇ ಆಗುತ್ತದೆ’’ ಎಂದು ಅಜಯ್ ನಕ್ಕಿದ್ದಾರೆ.

ಅಜಯ್ ದೇವಗನ್ ಮತ್ತೊಂದು ಸಂದರ್ಶನದಲ್ಲಿ ಪತ್ನಿ ಕಾಜೊಲ್ ವ್ಯಕ್ತಿತ್ವ ಅವರ ಮನೆಯಲ್ಲಿ ತಂದ ಬದಲಾವಣೆಯ ಕುರಿತು ತಿಳಿಸಿದ್ದರು. ಕಾಜೊಲ್ ಅವರು ಮನೆಗೆ ಬಂದಾಗ ಅಜಯ್ ಕುಟುಂಬದವರಿಗೆ ಬಹಳ ಸಂತಸವಾಗಿತ್ತಂತೆ. ಕಾರಣ, ಕೊನೆಗೂ ಕುಟುಂಬಕ್ಕೆ ಮಾತನಾಡುವವರೊಬ್ಬರು ಬಂದಿದ್ದಾರೆ ಎಂದು! ವಾಸ್ತವವಾಗಿ ಅಜಯ್ ದೇವಗನ್ ಮನೆಯಲ್ಲಿ ಎಲ್ಲರೂ ಮೌನವಾಗಿರುವುದೇ ಹೆಚ್ಚಂತೆ. ಅಗತ್ಯವಿದ್ದರಷ್ಟೇ ಮಾತು. ಆದರೆ ಕಾಜೊಲ್ ಬಂದ ಮೇಲೆ ವಾತಾವರಣ ಬದಲಾಯಿತಂತೆ. ಸಂಸಾರದ ಯಶಸ್ಸಿಗೂ ಇದೇ ಕಾರಣ ಎನ್ನುವ ಅಜಯ್, ‘ಇಬ್ಬರಲ್ಲಿ ಒಬ್ಬರಾದರೂ ಮಾತನಾಡಲೇಬೇಕು. ಇಬ್ಬರೂ ಸುಮ್ಮನಿದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಕಾಜೊಲ್ ಮಾತನಾಡುತ್ತಾರೆ; ನಾನು ಸುಮ್ಮನಿರುತ್ತೇನೆ’ ಎಂದಿದ್ದಾರೆ.

ಕಾಜೊಲ್ ಮತ್ತು ನೀವು(ಅಜಯ್) ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿಯೇ ಎಂಬ ಪ್ರಶ್ನೆಗೆ ನಗುತ್ತಲೇ ಹೌದು ಎನ್ನುತ್ತಾರೆ ಅಜಯ್ ದೇವಗನ್. “ನಾನು ಕಾಜೊಲ್ ಅವರನ್ನು ಬದಲಾಗಬೇಕೆಂದು ಬಯಸಿಲ್ಲ. ಅವರಿದ್ದಂತೆಯೇ ಸ್ವೀಕರಿಸಿದ್ದೇನೆ. ಕಾಜೊಲ್ ಅವರೆಡೆಗೆ ನಾನು ಹೇಗೆ ಆಕರ್ಷಿತನಾದೆ ತಿಳಿದಿಲ್ಲ. ವಾಸ್ತವವಾಗಿ ನಮ್ಮಿಬ್ಬರಿಗೂ ತಿಳಿದಿಲ್ಲ. ನಾವೀರ್ವರೂ ಮಾತನಾಡಲು ಪ್ರಾರಂಭಿಸಿದೆವು. ಸ್ನೇಹಿತರಾದೆವು. ನಂತರ ಮದುವೆಯಾಗೋಣ ಎಂದು ತೀರ್ಮಾನಿಸಿದೆವು. ನಾವು ಪ್ರಪೋಸ್ ಎಲ್ಲಾ ಮಾಡಿಯೇ‌ ಇಲ್ಲ, ಸ್ವಾಭಾವಿಕವಾಗಿ ನಮ್ಮ ಸಂಬಂಧ ಗಟ್ಟಿಗೊಂಡಿತು” ಎಂದಿದ್ದಾರೆ ಅಜಯ್ ದೇವಗನ್.

View this post on Instagram

A post shared by Ajay Devgn (@ajaydevgn)

1999ರಲ್ಲಿ‌ನದುವೆಯಾದ ಈ ಬಾಲಿವುಡ್ ತಾರಾ ಜೋಡಿಗೆ ಈಗ ನ್ಯಾಸ(ಪುತ್ರಿ) ಮತ್ತು ಯುಗ್(ಪುತ್ರ) ಎಂಬ ಈರ್ವರು ಮಕ್ಕಳಿದ್ದಾರೆ. ಈ ಜೋಡಿ 1995ರಲ್ಲಿ ತೆರೆಗೆ ಬಂದ ‘ಹಲ್ಚಲ್’ (Hulchul) ಚಿತ್ರದ ಚಿತ್ರೀಕರಣದಲ್ಲಿ‌ ಮೊದಲ ಬಾರಿಗೆ ಭೇಟಿಯಾಗಿ, ಒಟ್ಟಿಗೇ ಅಭಿನಯಿಸಿದ್ದರು. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾಜೊಲ್, ಈ ವರ್ಷ ನೆಟ್ಫ್ಲಿಕ್ಸ್ ನಲ್ಲಿ ತೆರೆಕಂಡ ‘ತ್ರಿಭಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:

ಜಮೀರ್​ ಪುತ್ರ ಝೈದ್​ ಖಾನ್​ ಹೊಸ ದಾಖಲೆ; ಭಾರಿ ಮೊತ್ತಕ್ಕೆ ಲಹರಿ, ಟಿ-ಸಿರೀಸ್​ ಪಾಲಾಯ್ತು ‘ಬನಾರಸ್​’ ಆಡಿಯೋ

Raveena Tandon Birthday: ರವೀನಾ ಟಂಡನ್​ ಜನ್ಮದಿನ; ‘ಕೆಜಿಎಫ್​ 2’, ‘ಉಪೇಂದ್ರ’ ಚಿತ್ರದ ನಟಿಗೆ ದೊಡ್ಡ ಪಾರ್ಟಿ ಅಂದ್ರೆ ಹಿಡಿಸಲ್ಲ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ