ಬಾಲಿವುಡ್ನಲ್ಲಿ ಸದ್ಯ ರಜೆಯ ದಿನಗಳನ್ನು ಕಳೆಯಲು ದೂರದೂರಿಗೆ ಕುಟುಂಬ ಸಮೇತ ಪ್ರವಾಸ ಹೋಗುವುದು ಟ್ರೆಂಡ್ ಆಗಿದೆ. ಇವುಗಳಲ್ಲಿ ಮಾಲ್ಡೀವ್ಸ್ ಹಾಗೂ ದುಬೈ ಪ್ರಮುಖವಾದವುಗಳು. ಯುರೋಪ್ಗೂ ಹಲವು ಜನ ತೆರಳುತ್ತಾರೆ. ಕಳೆದ ಕೆಲವು ತಿಂಗಳಿನಿಂದ ಬಾಲಿವುಡ್ ತಾರೆಯರು ಮಾಲ್ಡೀವ್ಸ್ಗೆ ತೆರಳಿ ವಿಶ್ರಾಂತಿ ಪಡೆದಿದ್ದರು. ತಾರಾ ಜೋಡಿಗಳಲ್ಲಿ ಒಂದಾದ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಜೋಡಿಯೂ ಮಾಲ್ಡೀವ್ಸ್ಗೆ ತೆರಳಿತ್ತು. ಅದೂ ಒಂದಲ್ಲ, ಎರಡು ಬಾರಿ. ಇದೀಗ ಈ ಜೋಡಿ ಮತ್ತೊಮ್ಮೆ ವಿಮಾನ ಹತ್ತಿದೆ. ಮೂರು ತಿಂಗಳ ಅವಧಿಯಲ್ಲಿ ಕರೀನಾ ಕುಟುಂಬದ ಮೂರನೇ ಟ್ರಿಪ್ ಇದಾಗಿದ್ದು, ಪುತ್ರರಾದ ಜೇಹ್ ಹಾಗೂ ತೈಮೂರ್ ಜೊತೆಗೆ ಈ ತಾರಾ ಜೋಡಿ ಪ್ರವಾಸ ತೆರಳಿದೆ ಎಂದು ಮೂಲಗಳು ತಿಳಿಸಿವೆ.
ಹಳದಿ ಬಣ್ಣದ ದಿರಿಸಿನಲ್ಲಿ ಮಿಂಚುತ್ತಿದ್ದ ಕರೀನಾಗೆ ಸೈಫ್ ನೀಲಿ ಬಣ್ಣದ ಅಂಗಿಯನ್ನು ತೊಟ್ಟು ಸಾಥ್ ನೀಡಿದ್ದರು. ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿರುವಂತೆ ಕರೀನಾ ಧರಿಸಿದ್ದ ಶರ್ಟ್ ಬೆಲೆ ಬರೋಬ್ಬರಿ ₹ 46 ಸಾವಿರ. ಪುತ್ರ ತೈಮೂರ್ ಮುಖದಲ್ಲಿ ಕೂಡ ಪ್ರವಾಸಹೋಗುವ ಖುಷಿಯಿತ್ತು. ಸೆಪ್ಟೆಂಬರ್ನಲ್ಲಿ ಕರೀನಾ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ನಲ್ಲಿ ಸಂಭ್ರಮದಿಂದ ಆಚರಿಸಲಾಗಿತ್ತು. ಅದಕ್ಕೂ ಮುನ್ನ ಆಗಸ್ಟ್ನಲ್ಲಿ ಸೈಫ್ ಅಲಿ ಖಾನ್ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ನಲ್ಲಿ ಆಚರಿಸಲಾಗಿತ್ತು.
View this post on Instagram
ಚಿತ್ರಗಳ ವಿಚಾರಕ್ಕೆ ಬರುವುದಾದರೆ ಕರೀನಾ ಬತ್ತಳಿಕೆಯಲ್ಲಿ ‘ಲಾಲ್ ಸಿಂಗ್ ಛಡ್ಡಾ’ ಚಿತ್ರವಿದೆ. ಈ ಚಿತ್ರದಲ್ಲಿ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ಹಾಲಿವುಡ್ನ ಯಶಸ್ವಿ ಚಿತ್ರಗಳಲ್ಲೊಂದಾದ ‘ಫಾರೆಸ್ಟ್ ಗಂಪ್’ನ ಅಧಿಕೃತ ರಿಮೇಕ್ ಆಗಿದೆ. ಕರೀನಾ ಜೇಹ್ಗೆ ಜನ್ಮ ನೀಡುವ ಮೊದಲೇ ಚಿತ್ರದ ಕೆಲವು ಭಾಗಗಳಲ್ಲಿ ನಟಿಸಿದ್ದರು. ಆದರೆ ನಂತರ ಅವರು ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇನ್ನು ಅವರ ಭಾಗದ ಚಿತ್ರೀಕರಣ ಮರುಪ್ರಾರಂಭ ಆಗಬೇಕಿದೆ. 2022ರ ವ್ಯಾಲೆಂಟೈನ್ಸ್ ಡೇ ದಿನ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಇದರ ಹೊರತಾಗಿ ಕರೀನಾ ಬೇರಾವ ಚಿತ್ರವನ್ನೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
ಸೈಫ್ ಅಲಿ ಖಾನ್ ಬತ್ತಳಿಕೆಯಲ್ಲಿ ಹಲವು ಸೀರೀಸ್ಗಳು, ಸಿನಿಮಾಗಳು ಇವೆ. ಸದ್ಯ ಅವರು ‘ಬಂಟಿ ಔರ್ ಬಬ್ಲಿ 2’ ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ನವೆಂಬರ್ 19ರಂದು ಚಿತ್ರವು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ:
‘ಕರೀನಾಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಸಲಹೆ ನೀಡುವುದಿಲ್ಲ’; ಅದೇ ದಾಂಪತ್ಯದ ಯಶಸ್ಸಿನ ಗುಟ್ಟು ಎಂದ ಸೈಫ್!
ವ್ಯಾಯಾಮ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ದೈಹಿಕ ಶಿಕ್ಷಣ ನಿರ್ದೇಶಕನನ್ನು ಬಂಧಿಸಿದ ಪೊಲೀಸರು