AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Keerthy Suresh: ‘ಗ್ಲಾಮರಸ್ ಪಾತ್ರಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ?’; ಕೀರ್ತಿ ಸುರೇಶ್ ಉತ್ತರ ಹೀಗಿತ್ತು

Keerthy Suresh Photos: ಕೀರ್ತಿ ಸುರೇಶ್ ಪ್ರತಿಭಾವಂತ ನಟಿ. ಗ್ಲಾಮರಸ್ ರೋಲ್​ಗಳನ್ನು ಏಕೆ ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಬಹಿರಂಗಪಡಿಸಿರುವ ನಟಿ, ‘‘ವೃತ್ತಿ ಜೀವನದ ಆರಂಭದಿಂದಲೂ ಪಾತ್ರ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡುತ್ತೇನೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಕ್ಕೆ ನನಗೆ ನಾನೇ ಮಿತಿ ಹಾಕಿಕೊಳ್ಳುತ್ತೇನೆ. ಇದನ್ನು ಅಭಿಮಾನಿಗಳು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ’’ ಎಂದಿದ್ದಾರೆ.

shivaprasad.hs
|

Updated on:Apr 26, 2022 | 10:23 AM

Share
ಕೀರ್ತಿ ಸುರೇಶ್ ಪ್ರತಿಭಾವಂತ ನಟಿ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ನಟಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ, ಪಾತ್ರಕ್ಕೆ ತೂಕವಿರುವ ಚಿತ್ರಗಳನ್ನು ಮಾತ್ರ ಅವರು ಆಯ್ದುಕೊಳ್ಳುತ್ತಾರೆ.

1 / 7
‘ಶೈಲಜಾ’ ಚಿತ್ರದಲ್ಲಿ ಬಣ್ಣಹಚ್ಚಿದ ನಂತರ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಟರಿಗೆ ನಾಯಕಿಯಾಗಿ ಕಾಣಿಸಿಕೊಂಡವರು.

2 / 7
ಟಾಲಿವುಡ್ ಜತೆಗೆ ತಮಿಳು ಚಿತ್ರರಂಗದಲ್ಲೂ ಕೀರ್ತಿಗೆ ಬೇಡಿಕೆ ಇದೆ. ಮಹಿಳಾ ಪ್ರಧಾನ ಪಾತ್ರಗಳ ಮೂಲಕ ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ ನಟಿ.

3 / 7
ಆದರೆ ಕೀರ್ತಿ ಸುರೇಶ್ ಒಂದು ವಿಚಾರದಲ್ಲಿ ಉಳಿತ ನಟಿಯರಿಗಿಂತ ಭಿನ್ನ. ಹಲವು ನಟಿಯರು ಗ್ಲಾಮರಸ್ ಪಾತ್ರಗಳಿಗೆ ಆದ್ಯತೆ ನೀಡಿದರೆ ಕೀರ್ತಿ ಮಾತ್ರ ಪಾತ್ರಕ್ಕೆ ಮಹತ್ವವಿರುವ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

4 / 7
ಗ್ಲಾಮರಸ್ ಪಾತ್ರಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ ಎಂದು ನಟಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.

5 / 7
ಸಂದರ್ಶನವೊಂದರಲ್ಲಿ ಕೀರ್ತಿ ಮಾತನಾಡುತ್ತಾ, ‘‘ವೃತ್ತಿ ಜೀವನದ ಆರಂಭದಿಂದಲೂ ಪಾತ್ರ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡುತ್ತೇನೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಕ್ಕೆ ನನಗೆ ನಾನೇ ಮಿತಿ ಹಾಕಿಕೊಳ್ಳುತ್ತೇನೆ’’ ಎಂದಿದ್ದಾರೆ.

6 / 7
ಜತೆಗೆ ‘‘ಗ್ಲಾಮರಸ್ ಪಾತ್ರಗಳಿಂದ ದೂರ ಉಳಿಯುವ ನನ್ನ ಆಲೋಚನಾ ಕ್ರಮ ಹಾಗೂ ನಟನೆಯನ್ನು ಮೆಚ್ಚಿ ಅಭಿಮಾನಿಗಳು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ’’ ಎಂದಿದ್ದಾರೆ ಕೀರ್ತಿ ಸುರೇಶ್.

7 / 7

Published On - 10:20 am, Tue, 26 April 22