ಒಟಿಟಿಗೆ ಬಂದ ನಂತರ ಥಿಯೇಟರ್​ನಲ್ಲಿ ರೀ-ರಿಲೀಸ್ ಆಗುತ್ತಿದೆ ‘ಆರ್​ಆರ್​ಆರ್​’ ಸಿನಿಮಾ

ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅಲ್ಲಿನ ಸಿನಿಪ್ರಿಯರು ‘ಆರ್​ಆರ್​ಆರ್’ ಚಿತ್ರವನ್ನು ಮೆಚ್ಚಿಕೊಂಡರು. ಹೀಗಾಗಿ ಅಮೆರಿಕದ ಭಾಗದಲ್ಲಿ ಸಿನಿಮಾ ಅಬ್ಬರಿಸಿದೆ.

ಒಟಿಟಿಗೆ ಬಂದ ನಂತರ ಥಿಯೇಟರ್​ನಲ್ಲಿ ರೀ-ರಿಲೀಸ್ ಆಗುತ್ತಿದೆ ‘ಆರ್​ಆರ್​ಆರ್​’ ಸಿನಿಮಾ
ಎನ್​ಟಿಆರ್​-ರಾಮ್​ ಚರಣ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 15, 2022 | 1:30 PM

ರಾಜಮೌಳಿ (Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಿದೆ. ಈ ಚಿತ್ರವನ್ನು ನೋಡಿದ ಫ್ಯಾನ್ಸ್ ಸಖತ್​ ಖುಷಿಪಟ್ಟರು. ರಾಜಮೌಳಿ ಅವರ ನಿರ್ದೇಶನ ಕಂಡು ಹುಬ್ಬೇರಿಸಿದರು. ಈ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದೆ. ಭಾರತದ ಮಾರುಕಟ್ಟೆ ಮಾತ್ರವಲ್ಲದೆ ವಿದೇಶದಲ್ಲೂ ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಈಗ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆದ ನಂತರ ಚಿತ್ರಮಂದಿರದಲ್ಲಿ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

‘ಆರ್​ಆರ್​ಆರ್’ ಸಿನಿಮಾ ಅಮೆರಿಕದಲ್ಲಿ ದೊಡ್ಡ ಯಶಸ್ಸು ಕಂಡಿದೆ. ಭಾರತೀಯ ಸಿನಿಮಾಗಳ ಪೈಕಿ ಅಮೆರಿಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಖ್ಯಾತಿ ಜ್ಯೂ.ಎನ್​ಟಿಆರ್​ ಹಾಗೂ ರಾಮ್​ ಚರಣ್ ಕಾಂಬಿನೇಷನ್​​ನಲ್ಲಿ ಮೂಡಿ ಬಂದ ಈ ಸಿನಿಮಾಗೆ ಸಿಕ್ಕಿದೆ. ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅಲ್ಲಿನ ಸಿನಿಪ್ರಿಯರು ‘ಆರ್​ಆರ್​ಆರ್’ ಚಿತ್ರವನ್ನು ಮೆಚ್ಚಿಕೊಂಡರು. ಹೀಗಾಗಿ ಅಮೆರಿಕದ ಭಾಗದಲ್ಲಿ ಸಿನಿಮಾ ಅಬ್ಬರಿಸಿದೆ.

ಅಮೆರಿಕದಲ್ಲಿ ಸಿನಿಮಾ 50 ದಿನ ಕಳೆದ ಹೊರತಾಗಿಯೂ ‘ಆರ್​ಆರ್​ಆರ್’ ಚಿತ್ರವನ್ನು ಕೆಲವರಿಗೆ ನೋಡಲು ಸಾಧ್ಯವಾಗಿರಲಿಲ್ಲ. ‘ಕೆಜಿಎಫ್ 2’ ಬಂದ ಕಾರಣ ‘ಆರ್​ಆರ್​ಆರ್’ ಸಿನಿಮಾಗೆ ಎಲ್ಲ ಕಡೆಗಳಲ್ಲೂ ಶೋ ಸಿಕ್ಕಿರಲಿಲ್ಲ. ಅಂಥವರಿಗೆ ಈಗ ಸಿನಿಮಾ ತಂಡ ಸಿಹಿಸುದ್ದಿ ನೀಡಿದೆ. ಅಮೆರಿಕದಲ್ಲಿ ಜ್ಯೂನ್​ 1ರಂದು ರಾತ್ರಿ ಈ ಸಿನಿಮಾ ಸ್ಕ್ರೀನಿಂಗ್ ಆಗಲಿದೆ. 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ
Image
RRR OTT Release: ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ? ಆ ದಿನಾಂಕಕ್ಕಾಗಿ ಕಾದಿರುವ ಫ್ಯಾನ್ಸ್​
Image
RRR 2: ಆರ್​ಆರ್​ಆರ್​ ಸೀಕ್ವೆಲ್​ ಮಾಡಲು ಉತ್ಸಾಹ ತೋರಿದ ರಾಜಮೌಳಿ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​
Image
‘RRR’ ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್
Image
RRR Twitter Review: ನಿದ್ದೆ ಬಿಟ್ಟು ‘ಆರ್​ಆರ್​ಆರ್​’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?

‘ಆರ್​ಆರ್​ಆರ್’​ ಅಧಿಕೃತ ಟ್ವಿಟರ್ ಖಾತೆ ಮೂಲಕ ಈ ಬಗ್ಗೆ ಘೋಷಣೆ ಮಾಡಲಾಗಿದೆ. ‘ಅಮೆರಿಕದ ಜನತೆ ತೋರಿದ ಪ್ರೀತಿಗೆ ಧನ್ಯವಾದ. ಜೂನ್​ 1ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ’ ಎಂದು ಟ್ವಿಟರ್​ನಲ್ಲಿ ಬರೆಯಲಾಗಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಬಹುತೇಕ ಟಿಕೆಟ್​ಗಳು ಸೋಲ್ಡ್​ ಆಗಿವೆ.

ಮೇ 20ಕ್ಕೆ ಒಟಿಟಿಯಲ್ಲಿ ‘ಆರ್​ಆರ್​ಆರ್’:

ಈ ಚಿತ್ರ ಒಟಿಟಿ ಪ್ಲಾಟ್​ಫಾರ್ಮ್​ಗೆ ಕಾಲಿಡುತ್ತಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಈಗ ಮನೆಮನೆಗಳಲ್ಲೂ ಮನರಂಜನೆ ನೀಡಲು ಈ ಸಿನಿಮಾ ಬರುತ್ತಿದೆ. ‘ಆರ್​ಆರ್​ಆರ್​’ ಚಿತ್ರ ಯಾವಾಗ ಒಟಿಟಿಗೆ ಬರಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದರು. ಆ ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಮೇ 20ರಂದು ಈ ಚಿತ್ರ ಜೀ5 ಮೂಲಕ ಪ್ರಸಾರ ಆಗಲಿದೆ. ಮೂಲ ತೆಲುಗಿನ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಿಗೆ ಡಬ್​ ಆಗಿದೆ. ಈ ಎಲ್ಲ ವರ್ಷನ್​ಗಳು ಕೂಡ ಮೇ 20ರಿಂದ ವೀಕ್ಷಣೆಗೆ ಲಭ್ಯವಾಗಲಿವೆ. ವಿಶೇಷ ಎಂದರೆ ಮೇ 20ರಂದು ಜ್ಯೂ. ಎನ್​ಟಿಆರ್​ ಬರ್ತ್​ಡೇ. ಆ ದಿನವೇ ‘ಆರ್​ಆರ್​ಆರ್’ ಸಿನಿಮಾದ ವರ್ಲ್ಡ್​ ಪ್ರೀಮಿಯರ್​ ಆಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ