RRR Twitter Review: ನಿದ್ದೆ ಬಿಟ್ಟು ‘ಆರ್ಆರ್ಆರ್’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?
RRR Movie Twitter Review: ‘ಆರ್ಆರ್ಆರ್’ ಸಿನಿಮಾ ತುಂಬ ಶ್ರೀಮಂತವಾಗಿ ಮೂಡಿಬಂದಿದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಅವರು ಇಡೀ ಸಿನಿಮಾವನ್ನು ಆವರಿಸಿದ್ದಾರೆ. ‘ಆರ್ಆರ್ಆರ್’ ಟ್ವಿಟರ್ ವಿಮರ್ಶೆ ಇಲ್ಲಿದೆ.
ರಾಜಮೌಳಿ (SS Rajamouli) ನಿರ್ದೇಶನ ಮಾಡಿರುವ ‘ಆರ್ಆರ್ಆರ್’ ಸಿನಿಮಾ ಸೃಷ್ಟಿ ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ವಿದೇಶದಲ್ಲೂ ‘ಆರ್ಆರ್ಆರ್’ ತೆರೆಕಂಡು ಅಬ್ಬರಿಸುತ್ತಿದೆ. ಮಾ.24ರ ರಾತ್ರಿ ಹಾಗೂ ಮಾ.25ರ ಬೆಳ್ಳಂಬೆಳಗ್ಗೆಯೇ ಈ ಚಿತ್ರವನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ನಿದ್ರೆ ಬಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಯಾವುದು ಚೆನ್ನಾಗಿದೆ? ಯಾವುದು ಚೆನ್ನಾಗಿಲ್ಲ ಎಂಬುದನ್ನೆಲ್ಲ ಟ್ವಿಟರ್ ವಿಮರ್ಶೆ (RRR Twitter Review) ಮೂಲಕ ಜನರು ತಿಳಿಸುತ್ತಿದ್ದಾರೆ. ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಜ್ಯೂ. ಎನ್ಟಿಆರ್ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಾಂತ್ರಿಕವಾಗಿ ‘ಆರ್ಆರ್ಆರ್’ ಸಿನಿಮಾ (RRR Movie) ತುಂಬ ಶ್ರೀಮಂತವಾಗಿ ಮೂಡಿಬಂದಿದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಅವರು ಇಡೀ ಸಿನಿಮಾವನ್ನು ಆವರಿಸಿದ್ದಾರೆ. ನಿರ್ದೇಶನದಲ್ಲಿ ರಾಜಮೌಳಿ ಅವರು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಎಲ್ಲ ಕಡೆಗಳಲ್ಲಿ ‘ಆರ್ಆರ್ಆರ್’ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುವ ಸೂಚನೆ ಸಿಕ್ಕಿದೆ.
‘ಈ ಸಿನಿಮಾವನ್ನು ಹೊಗಳಲು ಪದಗಳೇ ಸಾಲುತ್ತಿಲ್ಲ. ಸಿನಿಮಾದಲ್ಲಿ ಭಾವುಕತೆ ತುಂಬಿದೆ. ಯಾವುದೇ ಸಿನಿಮಾ ನೋಡುವಾಗ ನನಗೆ ಇಷ್ಟು ಒಳ್ಳೆಯ ಅನುಭವ ಆಗಿರಲಿಲ್ಲ. ತುಂಬ ಹೇಳಬೇಕು ಎನಿಸುತ್ತಿದೆ. ಆದರೆ ಪದಗಳೇ ಬರುತ್ತಿಲ್ಲ’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಈ ರೀತಿ ಅನೇಕರು ಈ ಚಿತ್ರವನ್ನು ಹೊಗಳುತ್ತಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗೋದು ಗ್ಯಾರಂಟಿ ಎಂದು ಜನರು ಭವಿಷ್ಯ ನುಡಿಯುತ್ತಿದ್ದಾರೆ.
Words r not enough to describe the this Film #RRR. Filled with emotions.I have never had a such a good experience watching any movie I have lot lot more to say but right now I’m out words #RRRMoive #RRRreview @tarak9999 @AlwaysRamCharan @ssrajamouli pic.twitter.com/1pRJQEpyi0 pic.twitter.com/SENH3JSQC4
— Uday (@Uday62488740) March 25, 2022
ಕೆಲವರು ‘ಆರ್ಆರ್ಆರ್’ ಸಿನಿಮಾಗೆ 5ಕ್ಕೆ 5 ಅಂಕ ನೀಡುತ್ತಿದ್ದಾರೆ. ಅಷ್ಟರಮಟ್ಟಿಗೆ ಜನರಿಗೆ ಈ ಚಿತ್ರ ಇಷ್ಟ ಆಗಿದೆ. ಮತ್ತೆ ಮತ್ತೆ ನೋಡಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ದೃಶ್ಯಕಾವ್ಯ ಎಂದು ಜನರು ಬಣ್ಣಿಸುತ್ತಿದ್ದಾರೆ. ಈ ಪರಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಕರ್ನಾಟಕದಲ್ಲಿಯೂ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಆರಂಭಗೊಂಡು ಜನರನ್ನು ರಂಜಿಸಿದೆ.
#RRR ??? 5/5
— Varshith Reddy ? ? (@varshith1989) March 25, 2022
‘ಜ್ಯೂ. ಎನ್ಟಿಆರ್ ಮಾಡಿರುವ ಕೊಮರಮ್ ಭೀಮ್ ಪಾತ್ರದ ಮುಗ್ಧತೆ ನಮ್ಮನ್ನು ಅಳುವಂತೆ ಮಾಡುತ್ತದೆ. ಅದೇ ರೀತಿ ಅವರ ಸಿಟ್ಟಿನ ಅವತಾರ ಬೆಂಕಿಯಂತಿದೆ. ತಾರಕ್ ಅವರು ಈ ಪಾತ್ರವನ್ನು ಜೀವಿಸಿದ್ದಾರೆ. ಹಾಗೆಯೇ ರಾಮ್ ಚರಣ್ ಅವರ ಅಭಿನಯ ಕೂಡ ತುಂಬ ಚೆನ್ನಾಗಿದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
Bheem’s Innocence makes us ? n his aggressive side was?. ‘Tarak’ just lived in the character @tarak9999 ?
‘Ram’ had too many emotions in him and ‘Charan’ was exceptional in delivering those emotions, IMO this is his best acting till date@AlwaysRamCharan ?#RRR #RRRMovie https://t.co/g1odvvlqHE
— КФVłÐ ЯΛJ ⚡ (@KovidRaj5) March 25, 2022
‘ಎಲ್ಲ ಕಡೆಗಳಿಂದಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದರ ಪೂರ್ತಿ ಕ್ರೆಡಿಟ್ ರಾಜಮೌಳಿ ಅವರಿಗೆ ಸಲ್ಲಬೇಕು. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಅವರು ಅತ್ಯುತ್ತಮ ಅಭಿನಯ ನೀಡಿದ್ದಾರೆ. ಶೇ.100ರಷ್ಟು ಶ್ರಮ ಹಾಕಿದ್ದಾರೆ. ಈ ಚಿತ್ರವು ಇಂಡಸ್ಟ್ರೀ ಹಿಟ್ ಆಗಲಿದೆ’ ಎಂದು ಜನರು ಟ್ವಿಟರ್ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
#RRRMoive what a visual piece of art! @AlwayzRamCharan the star performer ? @tarak9999 nailed it and @ssrajamouli what a show ? pic.twitter.com/YHVJW5mhPu
— Shalini (@CasulaShalini) March 25, 2022
ವಿಶ್ವಾದ್ಯಂತ 8 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಟಿಕೆಟ್ ಬೆಲೆ ಮುಗಿಲು ಮುಟ್ಟಿದ್ದರೂ ಕೂಡ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಫಸ್ಟ್ ಡೇ ಫಸ್ಟ್ ಶೋ ಆರಂಭ ಆಗುವುದಕ್ಕೂ ಮುನ್ನವೇ ಫ್ಯಾನ್ಸ್ ಶೋ ರಾರಾಜಿಸಿವೆ. ಚಿತ್ರಮಂದಿರಗಳಲ್ಲಿ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ:
ಕರುನಾಡಿನಲ್ಲಿ ಮಧ್ಯರಾತ್ರಿಯಿಂದಲೇ ಅಬ್ಬರಿಸಿದ ‘RRR’; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಪೂರ್ತಿ ವಿವರ..
RRR Review: ಆರ್ಆರ್ಆರ್ ವಿಮರ್ಶೆ; ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್