AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುನಿರೀಕ್ಷಿತ ಆರ್​ಆರ್​ಆರ್​ ಚಿತ್ರ ರಿಲೀಸ್​; ಪಟಾಕಿ ಹೊಡೆದು, ಕೇಕೆ ಹಾಕಿ ಅಭಿಮಾನಿಗಳ ಹರ್ಷೋದ್ಘಾರ

ಪಾವಗಡ ಪಟ್ಟಣದ ಮಾರುತಿ‌ ಚಿತ್ರಮಂದಿರದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬೆಳಗಿನಜಾವ 3 ಗಂಟೆಗೆ 3ಆರ್ ಫ್ಯಾನ್ ಶೋ‌ ರಿಲೀಸ್ ಮಾಡಲಾಗಿದೆ. ಯಾವುದೇ ಅಹಿಕತರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ವರ ವಹಿಸಲಾಗಿದೆ.

ಬಹುನಿರೀಕ್ಷಿತ ಆರ್​ಆರ್​ಆರ್​ ಚಿತ್ರ ರಿಲೀಸ್​; ಪಟಾಕಿ ಹೊಡೆದು, ಕೇಕೆ ಹಾಕಿ ಅಭಿಮಾನಿಗಳ ಹರ್ಷೋದ್ಘಾರ
ಆರ್​ಆರ್​ಆರ್​ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 25, 2022 | 7:58 AM

ಬೆಂಗಳೂರು: ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾ (RRR Movie) ರಾಜ್ಯಾದ್ಯಂತ 450 ಥಿಯೇಟರ್​ಗಳಲ್ಲಿ ರಿಲೀಸ್ ಆಗಿದೆ. 170ಕ್ಕೂ ಹಚ್ಚು ಸಿಂಗಲ್ ಸ್ಕ್ರೀನ್‌ ಮತ್ತು 450 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಆರ್​ಆರ್​ಆರ್​ ಆರ್ಭಟ ಶುರುವಾಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ಟಿಕೆಟ್ ಕೂಡ ಸೋಲ್ಡ್​ಔಟಾಗಿ, ನಾಳಿನ ಟಿಕೆಟ್​ಗೂ ಬೇಡಿಕೆ ಹೆಚ್ಚಾಗಿದೆ. ರಾಮ್‌ಚರಣ್, ಜೂ.ಎನ್‌ಟಿಆರ್ ಮತ್ತು ಆಲಿಯಾ ಭಟ್ ಅಭಿನಯದ, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದೇ ವೇಳೆ ಜೂ.ಎನ್‌ಟಿಆರ್, ಚರಣ್ ಅಭಿಮಾನಿಗಳ ಮಧ್ಯೆ ಫೈಟ್ ಶುರುವಾಗಿದ್ದು, ತಮ್ಮ ಹೀರೋನೆ ಹೆಚ್ಚೆಂಬ ವಿಚಾರಕ್ಕೆ ಬೆಂಗಳೂರಿನ ಅಂಜನ್ ಚಿತ್ರಮಂದಿರದಲ್ಲಿ ಗಲಾಟೆ ನಡೆದಿದೆ. ಅಭಿಮಾನಿಗಳ ಕಿತ್ತಾಟದಿಂದ ಇತರೆ ಪ್ರೇಕ್ಷಕರಿಗೆ ಕಿರಿಕಿರಿಯಾಗಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಫ್ಯಾನ್ಸ್ ವಾರ್ ಹೋಗಿದೆ. ಹುಬ್ಬಳ್ಳಿಯಲ್ಲೂ ಆರ್​ಆರ್​ಆರ್​ ಹವಾ ಜೋರಾಗಲಿದ್ದು, ಇಂದು ಒಂದೇ ದಿನ ಬರೋಬ್ಬರಿ 30 ಶೋ ಆರೆಂಜ್ ಮಾಡಲಾಗಿದೆ. ಎರಡೂ ಥೆಯೆಟರ್ ಹಾಗೂ ಎರಡೂ ಮಲ್ಟಿಪ್ಲೆಕ್ಸ್ ನಲ್ಲಿ 3ಆರ್ ಪ್ರದರ್ಶನ ಕಾಣಲಿದೆ. ಸುಧಾ ಹಾಗೂ ಶೃಂಗಾರ ಥೇಯಟರ್​ನಲ್ಲಿ ಪ್ರದರ್ಶನ ಕಾಣಲಿದ್ದು, ಇತ್ತ ಪಿವಿಆರ್ ಹಾಗೂ ಅರ್ಬನ್ ಒಯಾಸಿಸ್ ಮಾಲ್​ನಲ್ಲಿ ತಲಾ ೧೦ ಶೋಗಳು ಕಾಣಲಿವೆ. ಬೆಳಿಗ್ಗೆ 9ಕ್ಕೆ ಮೊದಲ ಶೋ ಆಯೋಜನೆಯಾಗಿದ್ದು, ಈಗಾಗಲೇ ಮೊದಲ ಶೋ ಟಿಕೆಟ್ ಶೋಲ್ಡ್ ಔಟ್ ಆಗಿವೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ 3ಆರ್ ಅಬ್ಬರ ಜೋರಾಗಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೊದಲ ಶೋ ನೋಡಿ‌ ಬಂದು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. 3ಆರ್ ಚಿತ್ರ ರಿಲೀಸ್ ಹಿನ್ನೆಲೆ, ದಾವಣಗೆರೆಯಲ್ಲಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಶೋಕಾ ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿ, ಅಭಿಮಾನಿಗಳ ಶಿಳ್ಳೆ ಕೇಕೆ ಹಾಕಿದ್ದಾರೆ. ನೆಚ್ಚಿನ ನಾಯಕ ನಟರ ಪರ ಘೋಷಣೆ ಹಾಕಿ ಸಂಭ್ರಮಿಸಿದ್ದಾರೆ. ಊರ್ವಶಿ ಥಿಯೇಟರ್​ನಲ್ಲಿ ಬೆಳಿಗ್ಗೆ 6 ಗಂಟೆ ಶೋ ಹೌಸ್ ಫುಲ್ ಆಗಿದ್ದು, ಸಿನಿಮಾ ನೋಡಲು ಯುವತಿಯರು, ಚಿಕ್ಕ ಮಕ್ಕಳೊಂದಿಗೆ ಪೋಷಕರು ಆಗಮಿಸುತ್ತಿದ್ದಾರೆ. ಇನ್ನೂ ಕೋಲಾರದಲ್ಲಿ ಜೂ.ಎನ್.ಟಿ.ಆರ್. ಹಾಗೂ ರಾಮ್ ಚರಣ್ ಪ್ಲೆಕ್ಸ್ ಗಳಿಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ. ಬೆಳಿಗ್ಗೆ ಆರು ಗಂಟೆಗೆ ಮೊದಲ ಶೋ, ಆರಂಭವಾಗಿದ್ದು, ಆನ್ ಲೈನ್ ಬುಕ್ಕಿಂಗ್​ನಲ್ಲಿ ಇಂದಿನ ನಾಲ್ಕು ಶೋ ಬುಕ್ಕಿಂಗ್ ಆಗಿವೆ. ಪಾವಗಡ ಪಟ್ಟಣದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಪಾವಗಡ ಪಟ್ಟಣದ ಮಾರುತಿ‌ ಚಿತ್ರಮಂದಿರದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬೆಳಗಿನಜಾವ 3 ಗಂಟೆಗೆ 3ಆರ್ ಫ್ಯಾನ್ ಶೋ‌ ರಿಲೀಸ್ ಮಾಡಲಾಗಿದೆ. ಯಾವುದೇ ಅಹಿಕತರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ವರ ವಹಿಸಲಾಗಿದೆ.

ಚಿತ್ರದುರ್ಗದ 2 ಥೇಟರ್​ಗಳಲ್ಲಿ 3ಆರ್ ಚಿತ್ರ ರಿಲೀಸ್ ಆಗಿದ್ದು, ಇಂದಿನಿಂದ ದಿನಕ್ಕೆ ನಾಲ್ಕು ಶೋ ಪ್ರದರ್ಶನಗೊಳ್ಳಲಿವೆ. ಸದ್ಯ ಚಿತ್ರಮಂದಿರಗಳ ಕಡೆಗೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದ ಬಾಲಾಜಿ ಚಿತ್ರಮಂದಿರದಲ್ಲಿ ನ್ಯೂ.ಎನ್.ಟಿ.ಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳಿಂದ ಸಂಭ್ರಮಾಚರಣೆ ಶುರುವಾಗಿದೆ. ಸ್ಕ್ರೀನ್​ಗೆ ಕಲರ್ ಪೇಪರ್ಸ್ ಹಾಗೂ ಹೂ ಎಸೆದು ನೆಚ್ಚಿನ ನಟರ ಸೀನ್​ ವೆಲ್ ಕಮ್ ಮಾಡಿದರು. ಇನ್ನೂ ಚಿತ್ರ ನೋಡಲು ಅಂಗವಿಕಲರು ಆಗಮಿಸಿದ್ದಾರೆ. ಎರಡು ಕಾಲುಗಳು ಸ್ವಾಧೀನ ಇಲ್ಲದಿದ್ದರೂ ಸ್ಚೇಚರ್ ಹಿಡಿದುಕೊಂಡು ಎನ್. ಟಿ. ಆರ್​ ಕಟ್ಟಾ ಅಭಿಮಾನಿ ಕಾರ್ತಿಕ ಮೊದಲ ಶೋ‌ ವೀಕ್ಷಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸಿನಿಮಾ ಆರಂಭವಾಗಿದ್ದು, ಮದ್ಯರಾತ್ರಿಯೇ 3ಆರ್ ಸಿನಿಮಾ ಬಿಡುಗಡೆಗೊಂಡಿದೆ. ಹರಸಾಹಸ ಪಟ್ಟು ಟಿಕೆಟ್ ಪಡೆದ ಅಭಿಮಾನಿಗಳು, ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ‌ ಮಾಡಿದ್ದಾರೆ.

ಇದನ್ನೂ ಓದಿ:

RRR Review: ಆರ್​​ಆರ್​ಆರ್​ ವಿಮರ್ಶೆ; ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್​