‘RRR’ ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್

Ram Charan: ನಟ ರಾಮ್ ಚರಣ್ ತಮ್ಮ ಸಿನಿಮಾ ದಾಖಲೆಗಳನ್ನು ಬರೆದು ಯಶಸ್ಸು ಕಾಣುತ್ತಿರುವ ಹಿನ್ನೆಲೆ ಇಡೀ ಚಿತ್ರತಂಡಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ. ತೆರೆ ಮರೆಯಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ ಚಿತ್ರತಂಡದ ಸದಸ್ಯರಿಗೆ ಚಿನ್ನದ ನಾಣ್ಯ ನೀಡಿ ತಮ್ಮ ಖುಷಿಯನ್ನು ಹೆಚ್ಚಿಸಿಕೊಂಡಿದ್ದಾರೆ.

'RRR' ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್
'RRR' ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 04, 2022 | 9:45 PM

ಯಾವುದೇ ಒಂದು ಸಿನಿಮಾ ಜನರ ಮೆಚ್ಚುಗೆ ಪಡೆಯಬೇಕಂದ್ರೆ, ಹಿಟ್ ಆಗಬೇಕಂದ್ರೆ ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಪರಿಶ್ರಮ ಕೂಡ ಅತಿ ಮುಖ್ಯವಾಗಿರುತ್ತೆ. ಸಿನಿಮಾ ಸೂಪರ್ ಹಿಟ್ ಆಯ್ತು ಅಂದ್ರೆ ಸಾಕು ನಟ-ನಟಿಯರ ಜೀವನವೇ ಬದಲಾಗಿ ಬಿಡುತ್ತೆ. ಸಿನಿಮಾಗಳ ಆಫರ್​ಗಳು ಹೆಚ್ಚಾಗುತ್ತವೆ. ಅವರ ಸಂಭಾವನೆ ಹೆಚ್ಚಾಗುತ್ತೆ. ಆದ್ರೆ ಅಂತಹ ಸೂಪರ್ ಹಿಟ್ ಸಿನಿಮಾ ಮಾಡಲು ನಟ, ನಟಿ, ನಿರ್ಮಾಪಕ ಹೊರತು ಪಡಿಸಿ ಸಿನಿಮಾ ಚನ್ನಾಗಿ ಮೂಡಿ ಬರಲು ಅದರ ಹಿಂದೆ ಕೆಲಸ ಮಾಡಿದವರ ಪರಿಶ್ರಮಕ್ಕೆ ತನ್ನ ಫಲ ಸಿಗೋದು ತುಂಬಾನೇ ಕಷ್ಟ. ಪರದೆ ಹಿಂದೆ ಕೆಲಸ ಮಾಡಿ ಸಿನಿಮಾ ಯಶಸ್ಸಿಗೆ ಕಾರಣರಾಗುವವರನ್ನೂ ಯಾರು ಗುರುತಿಸುವುದಿಲ್ಲ. ಆದ್ರೆ ತೆಲುಗು ನಟ ರಾಮ್ ಚರಣ್(Ram Charan) ತನ್ನ ಸಿನಿಮಾ ಯಶಸ್ಸು ಕಂಡ ಹಿನ್ನೆಲೆ ಚಿತ್ರ ತಂಡಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ.

ತೆರೆಕಂಡ ಎರಡನೇ ವಾರದಲ್ಲಿ ರಾಜಮೌಳಿ ನಿರ್ದೇಶನದ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘RRR’ ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. 1000 ಕೋಟಿ ಕ್ಲಬ್ಗೆ ಸಮೀಪದಲ್ಲಿದೆ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಮಿಂಚಿರುವ ನಟ ಜೂ ಎನ್‌ಟಿಆರ್ ಮತ್ತು ರಾಮ್ ಚರಣ್ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿದ್ದಾರೆ. ಸದ್ಯ ನಟ ರಾಮ್ ಚರಣ್ ತಮ್ಮ ಸಿನಿಮಾ ದಾಖಲೆಗಳನ್ನು ಬರೆದು ಯಶಸ್ಸು ಕಾಣುತ್ತಿರುವ ಹಿನ್ನೆಲೆ ಇಡೀ ಚಿತ್ರತಂಡಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ. ತೆರೆ ಮರೆಯಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ ಚಿತ್ರತಂಡದ ಸದಸ್ಯರಿಗೆ ಚಿನ್ನದ ನಾಣ್ಯ ನೀಡಿ ತಮ್ಮ ಖುಷಿಯನ್ನು ಹೆಚ್ಚಿಸಿಕೊಂಡಿದ್ದಾರೆ.

ಚಿತ್ರ ತಂಡಕ್ಕೆ ಚಿನ್ನದ ನಾಣ್ಯ ನೀಡಿದ ರಾಮ್ ಚರಣ್ ರಾಮ್ ಚರಣ್ ಮೊದಲಿಗೆ ಸದಸ್ಯರನ್ನು ಹೈದರಾಬಾದ್ನ ಮನೆಗೆ ಊಟಕ್ಕೆ ಆಹ್ವಾನಿಸಿ, ಅವರಿಗೆ ಆತಿಥ್ಯ ನೀಡಿ ಸಿಹಿ ಮತ್ತು ಚಿನ್ನದ ನಾಣ್ಯಗಳನ್ನು ನೀಡಿದ್ದಾರೆ. ಸುಮಾರು 50 ರಿಂದ 60 ಸಾವಿರ ಬೆಲೆ ಬಾಳುವ 11.6 ಗ್ರಾಂನ ಚಿನ್ನದ ನಾಣ್ಯ ನೀಡಿದ್ದಾರೆ. ಒಟ್ಟು 18 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

‘RRR’ ಸಿನಿಮಾ ರಾಮ್ ಚರಣ್ ವೃತ್ತಿ ಜೀವನದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಹಿಟ್ ಸಿನಿಮಾ ಎನಿಸಿಕೊಂಡಿದೆ. ಅಲ್ಲದೆ ರಾಮ್ ಚರಣ್ರ ನಟನೆಗೆ ಹಿಂದೆಂದಿಗಿಂತಲೂ ಹೆಚ್ಚು ಪ್ರಶಂಸೆ ಕೇಳಿ ಬಂದಿದೆ. ಹೀಗಾಗಿ ಈ ಸಿನಿಮಾ ಹಿಟ್ ಆಗಲು ಸಹಕರಿಸಿದ ಇಡೀ ಚಿತ್ರ ತಂಡಕ್ಕೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಸದ್ಯ ರಾಮ್ ಚರಣ್ ನೀಡಿರುವ ಚಿನ್ನದ ನಾಣ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

View this post on Instagram

A post shared by Fifafooz (@fifafoozofficial)

ಚಿನ್ನದ ನಾಣ್ಯದ ಒಂದು ಕಡೆ ರಾಮ್ ಚರಣ್ ಎಂದು ಬರೆದಿದ್ದು ಮತ್ತೊಂದೆಡೆ ‘RRR’ ಎಂದು ಬರೆಯಲಾಗಿದೆ. ಈ ಒಂದು ಚಿನ್ನದ ನಾಣ್ಯ 11.6 ಗ್ರಾಂ ಇದೆ ಎನ್ನಲಾಗುತ್ತಿದೆ. ಈ ಚಿನ್ನದ ನಾಣ್ಯ ಸಿನಿಮಾಕ್ಕೆ ಕೆಲಸ ಮಾಡಿದ ಕೆಳ ಹಂತದ ಸಿಬ್ಬಂದಿಗೆ ಮಾತ್ರವೇ ನೀಡಲಾಗುತ್ತಿದೆ. ಅಸಿಸ್ಟೆಂಟ್ ನಿರ್ದೇಶಕರಿಗೆ, ಲೈಟ್ ಬಾಯ್, ಸ್ಪಾಟ್ ಬಾಯ್, ಸೆಕ್ಯುರಿಟಿಗಳು, ಸೆಟ್ ಸ್ವಚ್ಛ ಮಾಡುವವರು ಸೇರಿದಂತೆ ಸಿನಿಮಾಗೆ ಕೆಲಸ ಮಾಡಿದ 35 ಜನರಿಗೆ ಈ ಚಿನ್ನದ ನಾಣ್ಯ ನೀಡಲಾಗಿದೆ.

ಇದನ್ನೂ ಓದಿ: ನವರಾತ್ರಿ ವೇಳೆ ದಕ್ಷಿಣ ದೆಹಲಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆಯುಕ್ತರಿಗೆ ಪತ್ರ ಬರೆದ ಮೇಯರ್

RRR Box Office Collection: ಬಾಕ್ಸಾಫೀಸ್​ನಲ್ಲಿ ‘ಆರ್​ಆರ್​ಆರ್​’ ದಾಖಲೆಯ ಓಟ; ₹ 1,000 ಕೋಟಿ ಕ್ಲಬ್​ಗೆ ಇನ್ನೆಷ್ಟು ದೂರ?

Published On - 9:26 pm, Mon, 4 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ