KGF Chapter 2: 6 ವಾರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಗಳಿಸಿದ್ದೆಷ್ಟು? ಇದು ಬೆರಗಾಗಿಸೋ ನಂಬರ್!

KGF Chapter 2 BO Collections: ಈ ವಾರಾಂತ್ಯದಲ್ಲೂ ‘ಕೆಜಿಎಫ್ ಚಾಪ್ಟರ್ 2’ಗೆ ದೊಡ್ಡ ಮಟ್ಟದ ಪ್ರತಿಸ್ಪರ್ಧಿಯಿಲ್ಲ. ಹಿಂದಿಯ ‘ಭೂಲ್ ಭುಲಯ್ಯ 2’ ಮಾತ್ರ ಉತ್ತರ ಭಾರತದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಶನಿವಾರ, ಭಾನುವಾರ ಮತ್ತೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

KGF Chapter 2: 6 ವಾರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಗಳಿಸಿದ್ದೆಷ್ಟು? ಇದು ಬೆರಗಾಗಿಸೋ ನಂಬರ್!
ಯಶ್​
TV9kannada Web Team

| Edited By: shivaprasad.hs

May 27, 2022 | 1:03 PM

ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ತೆರೆ ಕಂಡು 6 ವಾರಗಳು ಪೂರ್ಣಗೊಂಡಿವೆ. ಅದಾಗ್ಯೂ ಚಿತ್ರದ ಕ್ರೆಜ್ ಇನ್ನೂ ಕಡಿಮೆಯಾಗಿಲ್ಲ. ಎಲ್ಲಾ ಭಾಷೆಗಳಲ್ಲಿ ಈಗಲೂ ಯಶ್ (Yash) ನಟನೆಯ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದೆ. ಜನರು ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಇದೀಗ ಚಿತ್ರದ 6 ವಾರಗಳ ಕಲೆಕ್ಷನ್ ಎಷ್ಟು ಎಂಬುದು ಬಹಿರಂಗವಾಗಿದೆ. ಬಾಕ್ಸಾಫೀಸ್ ವಿಶ್ಲೇಷಕ ಮನೊಬಲ ವಿಜಯಬಾಲನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಚಿತ್ರದ ಗಳಿಕೆಯ ವಿವರ ತೆರೆದಿಟ್ಟಿದ್ದಾರೆ. ಏಪ್ರಿಲ್ 14ರಂದು ತೆರೆಕಂಡಿದ್ದ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಚಿತ್ರ ಇದುವರೆಗೆ ವಿಶ್ವಾದ್ಯಂತ ಒಟ್ಟಾರೆ 1,230.37 ಕೋಟಿ ರೂಗಳನ್ನು ಗಳಿಸಿದೆ.

43ನೇ ದಿನ ಅಂದರೆ ಮೇ 25ರಂದು ಚಿತ್ರವು 1.23 ಕೋಟಿ ರೂಗಳನ್ನು ಗಳಿಸಿದೆ. ಮೊದಲ ಐದು ವಾರಗಳಲ್ಲಿ 1210.53 ಕೋಟಿ ರೂ ಕಲೆಕ್ಷನ್ ಮಾಡಿದ್ದ ಚಿತ್ರವು ಆರನೇ ವಾರದಲ್ಲಿಯೂ ಉತ್ತಮ ಪ್ರದರ್ಶನ ಕಂಡಿದೆ. 6ನೇ ವಾರದ ಮೊದಲ ದಿನ 3.10 ಕೋಟಿ ರೂ, 2ನೇ ದಿನ 3.48 ಕೋಟಿ ರೂ, ಮೂರನೇ ದಿನ 4.02 ಕೋಟಿ ರೂ, ನಾಲ್ಕನೇ ದಿನ 4.68 ಕೋಟಿ ರೂ, ಐದನೇ ದಿನ 1.87 ಕೋಟಿ ರೂ, 6ನೇ ದಿನ 1.46 ಕೋಟಿ ರೂ, 7ನೇ ದಿನ 1.23 ಕೋಟಿ ರೂ ಗಳಿಸಿದೆ. ಈ ಮೂಲಕ ಚಿತ್ರದ ಗಳಿಕೆ 1230.37 ಕೋಟಿ ರೂಗೆ ಏರಿದಂತಾಗಿದೆ.

ಈ ವಾರಾಂತ್ಯದಲ್ಲೂ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರತಿಸ್ಪರ್ಧಿಯಿಲ್ಲ. ಹಿಂದಿಯ ‘ಭೂಲ್ ಭುಲಯ್ಯ 2’ ಮಾತ್ರ ಉತ್ತರ ಭಾರತದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಶನಿವಾರ, ಭಾನುವಾರ ಮತ್ತೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

‘ಕೆಜಿಎಫ್ ಚಾಪ್ಟರ್ 2’ ಗಳಿಕೆಯ ವಿವರ:

ಇದನ್ನೂ ಓದಿ: Srinidhi Shetty: ಗ್ಲಾಮರಸ್ ಲುಕ್​ನಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ; ಫೋಟೋಗಳು ಇಲ್ಲಿವೆ

‘ಕೆಜಿಎಫ್ ಚಾಪ್ಟರ್ 2’ ಯಶಸ್ಸು ಅದರ ಮುಂದಿನ ಭಾಗಕ್ಕೆ ಮುನ್ನುಡಿ ಬರೆದಿದೆ. ‘ಕೆಜಿಎಫ್ ಚಾಪ್ಟರ್ 3’ ಹೇಗಿರಬಹುದು ಎಂಬುದನ್ನು ಈಗಲೇ ಅಭಿಮಾನಿಗಳು ಊಹಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಈ ಬಗ್ಗೆ ಮಾತನಾಡುತ್ತಾ, ‘ಸಲಾರ್’ ಹಾಗೂ ಜ್ಯೂ.ಎನ್​ಟಿಆರ್ ಅವರ ಚಿತ್ರಗಳ ನಂತರ ‘ಕೆಜಿಎಫ್’ ಸರಣಿಯ ಮುಂದಿನ ಚಿತ್ರದ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಯಶ್ ಕೂಡ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿತ್ತು. ಹೀಗಾಗಿ ‘ಕೆಜಿಎಫ್ ಚಾಪ್ಟರ್ 3’ ಸೆಟ್ಟೇರಲು ಕೆಲವು ಕಾಲ ಕಾಯಲೇಬೇಕಾಗಿದೆ. ಈ ನಡುವೆ ‘ಸಲಾರ್’ ಹಾಗೂ ‘ಕೆಜಿಎಫ್ 3’ ಚಿತ್ರದ ಕನೆಕ್ಷನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada