Sruthi Hariharan: ಶೃತಿ ಹರಿಹರನ್ ಬತ್ತಳಿಕೆಯಲ್ಲಿ ಎಷ್ಟು ಚಿತ್ರಗಳಿವೆ? ಹೊಸ ಸಿನಿಮಾದ ಬಗ್ಗೆ ಹೊರಬಿತ್ತು ವಿಶೇಷ ಮಾಹಿತಿ
Sruthi Hariharan Photos: ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಈಗ ಸಾಲುಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿಯ ಹೊಸ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ನಟಿಯ ಕ್ಯೂಟ್ ಫೋಟೋಗಳು ಇಲ್ಲಿವೆ.
Updated on:May 27, 2022 | 3:05 PM

ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ‘ಸಿನಿಮಾ ಕಂಪನಿ’ ಎಂಬ ಮಲಯಾಳಂ ಚಿತ್ರದ ಮೂಲಕ. 2013ರಲ್ಲಿ ‘ಲೂಸಿಯಾ’ ಮೂಲಕ ನಟಿ ಸ್ಯಾಂಡಲ್ವುಡ್ ಪ್ರವೇಶ ಮಾಡಿದರು. ಅಲ್ಲಿಂದ ಅವರು ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ಶೃತಿ ಚಿತ್ರರಂಗದಿಂದ ತುಸು ಬ್ರೇಕ್ ತೆಗೆದುಕೊಂಡಿದ್ದರು. ಪುತ್ರಿಯ ಆರೈಕೆಯ ಕಡೆಗೆ ಅವರು ಗಮನಹರಿಸಿದ್ದರು. ಇದೀಗ ಮತ್ತೆ ಸಾಲುಸಾಲು ಚಿತ್ರಗಳಲ್ಲಿ ಶೃತಿ ನಟಿಸುತ್ತಿದ್ದಾರೆ.

ಶೃತಿ ಬತ್ತಳಿಕೆಯಲ್ಲಿ ಈಗಾಗಲೇ ಅಧಿಕೃತವಾಗಿ ಘೋಷಣೆಯಾದ ನಾಲ್ಕು ಚಿತ್ರಗಳಿವೆ.

ಕನ್ನಡದ ‘ಸಾಲುಗಾರ’ ಹಾಗೂ ‘ಸ್ಟ್ರಾಬೆರಿ’ ಚಿತ್ರದಲ್ಲಿ ನಟಿ ಬಣ್ಣಹಚ್ಚಿದ್ದು, ಎರಡರ ಚಿತ್ರೀಕರಣ ಮುಕ್ತಾಯವಾಗಿದೆ.

ಧನಂಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಹೆಡ್ ಬುಷ್’ನಲ್ಲೂ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳು ಚಿತ್ರವೊಂದರಲ್ಲೂ ಶೃತಿ ನಟಿಸುತ್ತಿದ್ದು, ಏಜೆಂಟ್ ಕನ್ನಾಯಿರಾಮ್ನಲ್ಲಿ ಅಭಿನಯಿಸುತ್ತಿದ್ದಾರೆ.

ಇದೀಗ ಶೃತಿ ಹೊಸ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ.

ನಿರ್ದೇಶಕ ಶಂಕರ್ ಎನ್ ಸೊಂಡೂರ್ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅವರ ಮುಂದಿನ ಚಿತ್ರಕ್ಕೆ ಶೃತಿ ನಾಯಕಿ ಎಂದು ಘೋಷಿಸಿದ್ದಾರೆ. ವಿವರಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಅವರು ಹಂಚಿಕೊಂಡ ಫೋಟೋದಲ್ಲಿ ಶೃತಿ ಪುತ್ರಿಯೊಂದಿಗೆ ಪೋಸ್ ನೀಡಿದ್ದಾರೆ.

ಶೃತಿ ಮತ್ತೆ ಬ್ಯಾಕ್ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಿಗೆ ಖುಷಿ ತಂದಿದೆ.
Published On - 2:24 pm, Fri, 27 May 22



















