- Kannada News Photo gallery Union Defense Minister Rajnath Singh visits Karwar Seabird Shipyard; Yogasan with the Navy's
ಕಾರವಾರದ ಸೀಬರ್ಡ್ ನೌಕಾನೆಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೇಟಿ: ನೌಕಾಪಡೆಯೊಂದಿಗೆ ಯೋಗಾಸನ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗ ಬಳಿ ಇರುವ ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೇಟಿ ನೀಡಿದ್ದಾರೆ. ಜೊತೆಗೆ ಭಾರತೀಯ ನೌಕಾಪಡೆಯೊಂದಿಗೆ ಯೋಗಾಸದಲ್ಲಿ ಭಾಗವಹಿಸಿದರು.
Updated on:May 27, 2022 | 3:04 PM

ಕಾರವಾರದ ಸೀಬರ್ಡ್ ನೌಕಾನೆಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ದಿನಗಳು ಭೇಟಿ ನೀಡಲಿದ್ದು, ಇಂದು ಆಗಮಿಸಿದ್ದಾರೆ.

ಸ್ವದೇಶಿ ನಿರ್ಮಿತ ಕಲ್ವಾರಿ ಕ್ಲಾಸ್ ಐಎನ್‌ಎಸ್ ಖಂಡೇರಿ ಸಬ್‌ಮೇರಿನ್‌ನಲ್ಲಿ ಸಚಿವ ರಾಜನಾಥ್ ಸಿಂಗ್ ಸಮುದ್ರಯಾನ ನಡೆಸಿದರು.

ಐಎನ್ಎಸ್ ಖಂಡೇರಿ ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮದ ಪ್ರಾಜೆಕ್ಟ್ 75 ಜಲಾಂತರ್ಗಾಮಿ ನೌಕೆಗಳಲ್ಲಿ ಎರಡನೇಯದ್ದಾಗಿದೆ. 2019ರಲ್ಲಿ ಈ ಸಬ್ ಮೆರಿನ್ನ್ನು ರಾಜನಾಥ್ ಸಿಂಗ್ ಅವರೇ ಲೋಕಾರ್ಪಣೆ ಮಾಡಿ, ಕರ್ತವ್ಯಕ್ಕೆ ನಿಯೋಜಿಸಿದ್ದರು.

ಪ್ರಸ್ತುತ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಕಾರವಾರ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಯೋಗ ಅಧಿವೇಶನದಲ್ಲಿ ಭಾಗವಹಿಸಿದರು.

ಕಾರವಾರ ನೌಕಾನೆಲೆಯಲ್ಲಿ ಭಾರತೀಯ ನೂರಾರು ನೌಕಾಪಡೆಯೊಂದಿಗೆ ರಾಜನಾಥ್ ಸಿಂಗ್ ಯೋಗಾಸನ ಮಾಡಿದರು.

ಯೋಗಾಸನದ ವಿವಿಧ ಭಂಗಿಗಳನ್ನು ಸಚಿವ ರಾಜನಾಥ್ ಸಿಂಗ್ ಪ್ರದರ್ಶಿಸಿದರು.

ಕಾರವಾರ ನೌಕಾನೆಲೆಯ ಪ್ರಾಜೆಕ್ಟ್ ಸೀಬರ್ಡ್ ಸಂಪರ್ಕದಾರರು, ಎಂಜಿನಿಯರ್‌ಗಳು, ಅಧಿಕಾರಿಗಳು, ನಾವಿಕರು ಮತ್ತು ನಾಗರಿಕರೊಂದಿಗೆ ರಾಜನಾಥ್ ಸಿಂಗ್ ಸಂವಾದ ಮಾಡಿದರು.

ತಮ್ಮ ಭಾಷಣದಲ್ಲಿ ‘ಸೀಬರ್ಡ್ ಪ್ರಾಜೆಕ್ಟ್’ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದರು.
Published On - 3:02 pm, Fri, 27 May 22




