ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕದ ಉದ್ಘಾಟನೆ ಯಾವಾಗ ಎಂಬುದರ ಬಗ್ಗೆ ಟಿವಿ9 ಜತೆ ನಟ ಅನಿರುದ್ಧ್ (Aniruddha) ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರಿನಲ್ಲಿ ತಯಾರಾಗುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕ ಎಲ್ಲವೂ ಅಂದುಕೊಂಡಂತಾದರೆ ಈ ವರ್ಷದ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಸೆಪ್ಟೆಂಬರ್ 18 ಅವರ ಹುಟ್ಟುಹಬ್ಬ. ಅದರ ಒಳಗೆ ಕಟ್ಟಡದ ಕೆಲಸ ಸಂಪೂರ್ಣಗೊಳ್ಳುತ್ತದೆ. ಒಟ್ಟು ಐದೂಮುಕ್ಕಾಲು ಎಕರೆ ಜಾಗವಿದ್ದು, ಅದರಲ್ಲಿ ಎರಡೂಮುಕ್ಕಾಲು- ಮೂರು ಎಕರೆ ಜಾಗ ಸ್ಮಾರಕಕ್ಕೆಂದು ಮೀಸಲಿಡಲಾಗಿದೆ. ಉಳಿದ ಜಾಗವನ್ನು ‘ಫಿಲ್ಮ್ ಆಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದ ಶಾಖೆಗೆಂದು ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ಸ್ಮಾರಕ ತಯಾರಾಗಲಿದೆ. ಅದು ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಬೇಕಿದೆ. ಈಗಾಗಲೇ ಶೇ.90ರಷ್ಟು ಕೆಲಸ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ ಅನಿರುದ್ಧ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ