ಕರ್ಕಶವಾಗಿ ಸದ್ದು ಮಾಡುವಂತೆ ಮಾಡಿಫೈಯಾಗಿದ್ದ ಸೈಲೆನ್ಸರ್​ಗಳನ್ನು ಕಿತ್ತು ರೋಡ್ ರೋಲರ್ ಅಡಿ ಜಜ್ಜಿಸಿದರು ಕಡೂರು ಪಿಎಸ್ಐ!

ಕರ್ಕಶವಾಗಿ ಸದ್ದು ಮಾಡುವಂತೆ ಮಾಡಿಫೈಯಾಗಿದ್ದ ಸೈಲೆನ್ಸರ್​ಗಳನ್ನು ಕಿತ್ತು ರೋಡ್ ರೋಲರ್ ಅಡಿ ಜಜ್ಜಿಸಿದರು ಕಡೂರು ಪಿಎಸ್ಐ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 27, 2022 | 8:10 AM

ನಗರದ ನಿವಾಸಿಗಳಿಂದ ಕರ್ಕಶವಾಗಿ ಶಬ್ದ ಮಾಡಿಕೊಂಡು ಓಡಾಡುವ ವಾಹನಗಳಿಂದ ಅಗುತ್ತಿರುವ ಕಿರಿಕಿರಿ ಮತ್ತು ಶಬ್ದಮಾಲಿನ್ಯದ ಬಗ್ಗೆ ದೂರುಗಳು ಬಂದ ಬಳಿಕ ರಮ್ಯಾ ಕಾರ್ಯಾಚರಣೆ ಶುರುಮಾಡಿ ಅಂಥ ಸುಮಾರು 35 ದ್ವಿಚಕ್ರ ವಾಹನಗಳನ್ನು ಸ್ಟೇಶನ್ ಗೆ ಎಳೆತಂದು ಸೈಲೆನ್ಸರ್ ಗಳನ್ನು ಬಿಚ್ಚಿಸಿ ಗತಿ ಕಾಣಿಸಿದ್ದಾರೆ.

Chikkamagalur: ದ್ವಿಚಕ್ರ ವಾಹನಗಳ ಸೈಲೆನ್ಸರ್ ಗಳನ್ನು (silencer) ಕಿವಿಗಡಚಿಕ್ಕುವಂತೆ ಶಬ್ದ ಮಾಡುವ ಹಾಗೆ ಮಾಡಿಫೈ ಮಾಡಿಸಿಕೊಂಡು ರಸ್ತೆಯಲ್ಲಿ ಓಡಾಡುವ ಜನರಲ್ಲಿ ಕಿರಿಕಿರಿ, ಅಸಹನೀಯತೆ ಉಂಟಾಗುವಷ್ಟು ಮಟ್ಟಿಗೆ ತಮ್ಮ ಬೈಕ್ ಗಳನ್ನು ಓಡಿಸಿಕೊಂಡು ಹೋಗುವ ಪುಂಡ ಯುವಕರು ನಿಮ್ಮ ಊರಲ್ಲೂ ಇರಬಹುದು. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಅಂಥ ಪಡ್ಡೆಗಳಿದ್ದರು. ಅದರೆ ಅವರು ಇನ್ನು ಮುಂದೆ ಹಾಗೆ ಮಾಡಲಾರರು. ಯಾಕೆಂದರೆ ಕಡೂರು ಪೊಲೀಸ್ ಠಾಣೆಯ (Kadur police station) ಇನ್ಸ್ಪೆಕ್ಟರ್ ರಮ್ಯಾ (PSI Ramya) ಪಡ್ಡೆಗಳನ್ನೇ ಮಾಡಿಫೈ ಮಾಡಿದ್ದಾರೆ. ಹೇಗೆ ಅಂತ ನೀವೇ ಈ ವಿಡಿಯೋನಲ್ಲಿ ನೋಡಿ. ಸುಮಾರು 35 ಕ್ಕೂ ಹೆಚ್ಚು ವಾಹನಗಳ ಸೈಲೆನ್ಸರ್ ಗಳನ್ನು ಕಿತ್ತಿಸಿ ಅವುಗಳನ್ನು ತಮ್ಮ ಪೊಲೀಸ್ ಸ್ಟೇಶನ್ ಅವರಣದಲ್ಲಿ ಸಾಲಾಗಿ ಇರಿಸಿ ಅವುಗಳ ಮೇಲೆ ರೋಡ್ ರೋಲರ್ ಓಡಿಸಲು ಹೇಳಿ ಕ್ರಶ್ ಮಾಡಿಸಿದ್ದಾರೆ.

ಈ ಅಪೂರ್ವ ದೃಶ್ಯವನ್ನು ಪಿಎಸ್ ಐ ರಮ್ಯಾ ಸೇರಿದಂತೆ ಅವರ ಜೊತೆ ಕೆಲಸ ಮಾಡುವ ಪೊಲೀಸರು ಸಹ ತಮ್ಮ ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ವಾಹನ ಸವಾರರು ಕೂಡ ಪ್ರಾಯಶಃ ದೂರದಲ್ಲಿ ನಿಂತು ತಮ್ಮ ಮಾಡಿಫೈಡ್ ಸೈಲೆನ್ಸರ್ ಗಳಿಗೆ ಆಗುತ್ತಿರುವ ಗತಿಯನ್ನು ವಿಷಾದದಿಂದ, ದುಃಖದಿಂದ ಗಮನಿಸುತ್ತಿರಬಹುದು.

ನಗರದ ನಿವಾಸಿಗಳಿಂದ ಕರ್ಕಶವಾಗಿ ಶಬ್ದ ಮಾಡಿಕೊಂಡು ಓಡಾಡುವ ವಾಹನಗಳಿಂದ ಅಗುತ್ತಿರುವ ಕಿರಿಕಿರಿ ಮತ್ತು ಶಬ್ದಮಾಲಿನ್ಯದ ಬಗ್ಗೆ ದೂರುಗಳು ಬಂದ ಬಳಿಕ ರಮ್ಯಾ ಕಾರ್ಯಾಚರಣೆ ಶುರುಮಾಡಿ ಅಂಥ ಸುಮಾರು 35 ದ್ವಿಚಕ್ರ ವಾಹನಗಳನ್ನು ಸ್ಟೇಶನ್ ಗೆ ಎಳೆತಂದು ಸೈಲೆನ್ಸರ್ ಗಳನ್ನು ಬಿಚ್ಚಿಸಿ ಗತಿ ಕಾಣಿಸಿದ್ದಾರೆ. ಹಾಗೆಯೇ ಸವಾರರಿಗೆ ಮತ್ತೊಮ್ಮೆ ಅಂಥ ಸಾಹಸಕ್ಕಿಳಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಅಂತ ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.