ಮೂವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ; ಆಸ್ಕರ್ ವಿಜೇತ ನಟನಿಗೆ ಹೆಚ್ಚಾಯ್ತು ಸಂಕಷ್ಟ

Kevin Spacey: ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿರುವ ಹಾಲಿವುಡ್​ನ ಖ್ಯಾತ ನಟ ಕೆವಿನ್ ಸ್ಪೇಸಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಲಾಗಿದೆ. ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ನಾಲ್ಕು ಆರೋಪಗಳನ್ನು ನಟನ ವಿರುದ್ಧ ಮಾಡಲಾಗಿದೆ.

ಮೂವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ; ಆಸ್ಕರ್ ವಿಜೇತ ನಟನಿಗೆ ಹೆಚ್ಚಾಯ್ತು ಸಂಕಷ್ಟ
ಕೆವಿನ್ ಸ್ಪೇಸಿImage Credit source: Reuters
Follow us
TV9 Web
| Updated By: shivaprasad.hs

Updated on:May 27, 2022 | 12:45 PM

ವರದಿಗಳ ಪ್ರಕಾರ ಹಾಲಿವುಡ್​ನ (Hollywood) ಖ್ಯಾತ ನಟ ಕೆವಿನ್ ಸ್ಪೇಸಿ (Kevin Spacey) ವಿರುದ್ಧ ಬ್ರಿಟನ್​ನ ಕ್ರೌನ್ ಪ್ರೊಟೆಕ್ಷನ್ ಸರ್ವಿಸಸ್ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದೆ. ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೆವಿನ್ ಮೇಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ತನಿಖೆ ನಡೆಸಿ ಆರೋಪಗಳನ್ನು ಅಧಿಕೃತಗೊಳಿಸಲಾಗಿದೆ. ರಾಯಿಟರ್ಸ್ ತನ್ನ ವರದಿಯಲ್ಲಿ ತಿಳಿಸಿರುವಂತೆ, ಬುಧವಾರ ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸೇವೆಯು ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ಕು ಕ್ರಿಮಿನಲ್ ಆರೋಪಗಳನ್ನು ಅಧಿಕೃತಗೊಳಿಸಿದೆ. ಹಾಲಿವುಡ್​ನಲ್ಲಿ ಕೆವಿನ್ ದೊಡ್ಡ ಹೆಸರಾಗಿದ್ದು 2 ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 62 ವರ್ಷ ವಯಸ್ಸಿನ ನಟ 2017 ರಿಂದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮ ಅವರ ವೃತ್ತಿ ಬದುಕಿನಲ್ಲೂ ಆಗಿದ್ದು, ಅವರು ಕಾಣಿಸಿಕೊಳ್ಳಬೇಕಿದ್ದ ಚಿತ್ರದಲ್ಲಿ ಬೇರೆ ನಟ ಕಾಣಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ 2018ರಿಂದ ಕೆವಿನ್ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.

ವೆರೈಟಿ ವರದಿಯ ಪ್ರಕಾರ ಬ್ರಿಟಿಷ್ ಪ್ರಾಸಿಕ್ಯೂಷನ್ ಕೆವಿನ್ ಸ್ಪೇಸಿ ಮೇಲಿನ ಆರೋಪವನ್ನು ಅಧಿಕೃತಗೊಳಿಸಿದೆ. ಪೊಲೀಸರು ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಂದಹಾಗೆ ಕೆವಿನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಕೂಡ ಅವರಿಗೆ ನ್ಯಾಯಯುತ ವಿಚಾರಣೆಯ ಹಕ್ಕಿದೆ ಎಂದು ತಿಳಿಸಲಾಗಿದೆ.

2017ರಲ್ಲಿ ವ್ಯಕ್ತಿಯೋರ್ವರು 1986 ರಲ್ಲಿ ತಮಗೆ 14 ವರ್ಷ ವಯಸ್ಸಾಗಿದ್ದಾಗ ಕೆವಿನ್ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. ಇದರ ನಂತರದಲ್ಲಿ ನೆಟ್​ಫ್ಲಿಕ್ಸ್​ನ ಜನಪ್ರಿಯ ಶೋ ಆದ ‘ಹೌಸ್ ಆಫ್ ಕಾರ್ಡ್ಸ್​​’ ತಂಡದ ಕೆಲವು ಸದಸ್ಯರು ಕೂಡ ಇದೇ ಆರೋಪಗಳನ್ನು ಮಾಡಿದರು. ಆ ಸರಣಿಯ ಜನಪ್ರಿಯ ನಟರಾಗಿದ್ದ ಕೆವಿನ್​ರನ್ನು ಕಂಪನಿಯ ಲೈಂಗಿಕ ಕಿರುಕುಳ ನೀತಿಯ ಉಲ್ಲಂಘನೆಯ ಕಾರಣದಿಂದ $ 31 ಮಿಲಿಯನ್ ಪಾವತಿಸಲು ಆದೇಶಿಸಿತ್ತು.

ಇದನ್ನೂ ಓದಿ
Image
ಕರಣ್ ಜೋಹರ್​ ಬರ್ತ್​ಡೇ ಪಾರ್ಟಿಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ರಶ್ಮಿಕಾ
Image
ಆರ್​ಸಿಬಿ ಮ್ಯಾಚ್ ನಡೆಯುವಾಗ ಅನುಷ್ಕಾ ಶರ್ಮಾ ಏನು ಮಾಡುತ್ತಿದ್ದರು? ಇಲ್ಲಿವೆ ಫೋಟೋಗಳು
Image
Bhavana Menon: ಸಾಂಪ್ರದಾಯಿಕ ಲುಕ್​ನಲ್ಲಿ ಅಭಿಮಾನಿಗಳ ಮನಗೆದ್ದ ಭಾವನಾ; ಇಲ್ಲಿವೆ ಫೋಟೋಗಳು
Image
Jeff Goldblum: ‘ನಾನು ಯೋಗದ ವಿದ್ಯಾರ್ಥಿ’; ಹೆಮ್ಮೆಯಿಂದ ಭಾರತದ ಮೇಲಿನ ಪ್ರೀತಿಯನ್ನು ಹೇಳಿಕೊಂಡ ಹಾಲಿವುಡ್​ನ ಖ್ಯಾತ ನಟ

ಇದನ್ನೂ ಓದಿ: Jeff Goldblum: ‘ನಾನು ಯೋಗದ ವಿದ್ಯಾರ್ಥಿ’; ಹೆಮ್ಮೆಯಿಂದ ಭಾರತದ ಮೇಲಿನ ಪ್ರೀತಿಯನ್ನು ಹೇಳಿಕೊಂಡ ಹಾಲಿವುಡ್​ನ ಖ್ಯಾತ ನಟ

ಪ್ರಸ್ತುತ ಕೆವಿನ್, ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾರೆ. ಅವರ ಹೊಸ ಚಿತ್ರ ಪೀಟರ್ ಫೈವ್ ಎಯ್ಟ್‌ನಲ್ಲಿ ಕೊಲೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಟ್ರೇಲರ್​ ಇತ್ತೀಚೆಗೆ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 am, Fri, 27 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ