Vikrant Rona: ‘ಊರಲ್ಲೆಲ್ಲಾ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು..’; ಭರ್ಜರಿಯಾಗಿ ‘ವಿಕ್ರಾಂತ್ ರೋಣ’ ಡೈಲಾಗ್ ಹೊಡೆದ ಜಾಕ್ವೆಲಿನ್​

Jacqueline Fernandez | Kichcha Sudeep: ‘ರಾ ರಾ ರಕ್ಕಮ್ಮ’ ಹಾಡು ಇದೀಗ ಸಖತ್ ವೈರಲ್ ಆಗಿದೆ. ಹಾಡಿನಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್​ ಭರ್ಜರಿಯಾಗಿ ಹೆಜ್ಜೆಹಾಕಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಸುದೀಪ್ ಸಹಾಯದಿಂದ ‘ವಿಕ್ರಾಂತ್ ರೋಣ’ದ ಡೈಲಾಗ್​ ಒಂದನ್ನು ಹೇಳಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್​.

Vikrant Rona: ‘ಊರಲ್ಲೆಲ್ಲಾ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು..’; ಭರ್ಜರಿಯಾಗಿ ‘ವಿಕ್ರಾಂತ್ ರೋಣ’ ಡೈಲಾಗ್ ಹೊಡೆದ ಜಾಕ್ವೆಲಿನ್​
‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಜಾಕ್ವೆಲಿನ್- ಕಿಚ್ಚ ಸುದೀಪ್
Follow us
TV9 Web
| Updated By: shivaprasad.hs

Updated on: May 26, 2022 | 3:01 PM

‘ರಾ ರಾ ರಕ್ಕಮ್ಮ’ (Ra Ra Rakkamma) ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿ ‘ವಿಕ್ರಾಂತ್ ರೋಣ’ (Vikrant Rona) ಚಿತ್ರತಂಡ ಖುಷಿಯಾಗಿದೆ. ಪ್ರಸ್ತುತ ದಿನಕ್ಕೊಂದು ಅವತರಣಿಕೆಯಲ್ಲಿ ಹಾಡು ತೆರೆಕಾಣುತ್ತಿದ್ದು, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದೆ. ಇಂದು (ಮೇ 26) ತಮಿಳಿನಲ್ಲಿ ‘ರಕ್ಕಮ್ಮ’ ಹಾಡು ರಿಲೀಸ್ ಆಗಿದೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಹಾಗೂ ಕಿಚ್ಚ ಸುದೀಪ್​ ಭರ್ಜರಿಯಾಗಿ ಹೆಜ್ಜೆಹಾಕಿರುವುದು ಅಭಿಮಾನಿಗಳ ಮನಸೂರೆಗೊಂಡಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಬೇರೆ ಚಿತ್ರರಂಗಗಳಲ್ಲಿ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಈ ನಡುವೆ ಕಿಚ್ಚ ಸುದೀಪ್ (Kichcha Sudeep) ಹಾಗೂ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​​ ಹಾಡಿನ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಿರೂಪಕ ಅಕುಲ್ ಬಾಲಾಜಿ (Akul Balaji) ಜತೆಗಿನ ಸಂದರ್ಶನದಲ್ಲಿ ಅವರು ಹಾಡಿನ ಬಗ್ಗೆ ಹಾಗೂ ಜಾಕ್ವೆಲಿನ್ ಅವರ ಕಾರ್ಯವೈಖರಿಯ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸುದೀಪ್ ಜತೆ ಜಾಕ್ವೆಲಿನ್ ದೂರವಾಣಿ ಸಂಭಾಷಣೆಯನ್ನೂ ನಡೆಸಿ, ವಿಕ್ರಾಂತ್ ರೋಣ ಡೈಲಾಗ್ ಹೊಡೆದಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ.

ಮಾತುಕತೆಯಲ್ಲಿ ಮೊದಲಿಗೆ ಚಿತ್ರೀಕರಣದ ಸಂದರ್ಭಧ ಹಲವು ಮಜವಾದ ವಿಚಾರಗಳನ್ನು ಕಿಚ್ಚ ಸುದೀಪ್ ಹಾಗೂ ಜಾನಿ ಮಾಸ್ಟರ್ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅತ್ಯುತ್ತಮವಾಗಿ ಡಾನ್ಸಿಂಗ್ ಮಾಡುತ್ತಾರೆ ಎಂದು ಜಾನಿ ಮಾಸ್ಟರ್ ಹೊಗಳಿದ್ದಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸುತ್ತಾ, ಅವರು ಹೇಳುವಂತಹ ಉತ್ತಮ ಡಾನ್ಸರ್ ನಾನಲ್ಲ. ಆದರೆ ಜಾನಿ ಮಾಸ್ಟರ್​ ನನ್ನ ಕಂಫರ್ಟ್ ಜೋನ್ಅನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಹಾಡು ಉತ್ತಮವಾಗಿ ಮೂಡಿ ಬಂದಿದೆ. ಆದರೆ ನಾನು ಪ್ರತಿ ಚಿತ್ರದಲ್ಲೂ ನೃತ್ಯಕ್ಕಾಗಿ ಒಂದು ಪ್ರತ್ಯೇಕ ಹಾಡಿನಲ್ಲೆಲ್ಲಾ ಹೆಜ್ಜೆ ಹಾಕುವುದಿಲ್ಲ. ಅದು ನನ್ನಿಂದ ಸಾಧ್ಯವಿಲ್ಲ ಎಂದು ನಗುತ್ತಲೇ ಹೇಳಿದ್ದಾರೆ ಸುದೀಪ್.

ಮುಂದುವರೆದು ಮಾತನಾಡಿದ ಕಿಚ್ಚ, ‘‘ಡಾನ್ಸ್​ಅನ್ನು ಖುಷಿಗಾಗಿ ಮಾಡುತ್ತಾರೆ, ಹಣಕ್ಕಾಗಿ ಮಾಡುತ್ತಾರೆ ಅಥವಾ ಮರ್ಯಾದೆ ಉಳಿಸಿಕೊಳ್ಳಲು ಮಾಡುತ್ತಾರೆ. ನನ್ನದು ಮೂರನೇ ರೀತಿ. ರಕ್ಕಮ್ಮ ಹಾಡಿನಲ್ಲಿ ಮರ್ಯಾದೆ ಉಳಿಸಿಕೊಳ್ಳಲು ಹೆಜ್ಜೆಹಾಕಿದ್ದೇನೆ’’ ಎಂದು ನಕ್ಕಿದ್ದಾರೆ.

ಇದನ್ನೂ ಓದಿ
Image
ಚೈತ್ರಾ ಹಳ್ಳಿಕೇರಿ ಹಣಕ್ಕಾಗಿ ಮೆಂಟಲಿ ಟಾರ್ಚರ್ ಮಾಡುತ್ತಿದ್ದಾರೆ; ಪತಿ ಬಾಲಾಜಿ ಪೋತರಾಜ್ ಆರೋಪ
Image
Bidisha De Majumdar: ಶಾಕಿಂಗ್ ಘಟನೆ: ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾದ ಯುವ ನಟಿ
Image
Bhool Bhulaiyaa 2 BO Collections: 6ನೇ ದಿನವೂ ಕಡಿಮೆಯಾಗಿಲ್ಲ ‘ಭೂಲ್ ಭುಲಯ್ಯ 2’ ಹವಾ; ಇದೇ ದಿನ ‘ಕೆಜಿಎಫ್ ಚಾಪ್ಟರ್ 2’ ಎಷ್ಟು ಗಳಿಸಿತ್ತು?
Image
Karan Johar: ರಶ್ಮಿಕಾ, ವಿಜಯ್ ದೇವರಕೊಂಡ, ಸಲ್ಮಾನ್..; ಕರಣ್ ಜೋಹರ್​​ ಬರ್ತ್​ಡೇ ಪಾರ್ಟಿಯಲ್ಲಿ ಭಾಗವಹಿಸಿದ ತಾರೆಯರು ಯಾರೆಲ್ಲಾ?

ಜಾಕ್ವೆಲಿನ್ ಬಗ್ಗೆ ಕಿಚ್ಚ, ಜಾನಿ ಮಾಸ್ಟರ್ ಹೇಳಿದ್ದೇನು?

‘ವಿಕ್ರಾಂತ್ ರೋಣ’ ಚಿತ್ರಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ದೊಡ್ಡ ಮೈಲೇಜ್ ನೀಡಿದ್ದಾರೆ. ‘ಗಡಂಗ್ ರಕ್ಕಮ್ಮ’ ಪಾತ್ರದ ಮೂಲಕ ಈಗಾಗಲೇ ಅವರು ದೇಶಾದ್ಯಂತ ಕುತೂಹಲದ ಕೇಂದ್ರವಾಗಿದ್ದಾರೆ. ಇದುವರೆಗೆ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಬಾಲಿವುಡ್ ಬೆಡಗಿ ನಟಿಸುತ್ತಿರುವುದೂ ಕೂಡ ಇದಕ್ಕೆ ಕಾರಣ. ಈಗ ರಿಲೀಸ್ ಆಗಿರುವ ‘ರಾ ರಾ ರಕ್ಕಮ್ಮ’ ಹಾಡಿನಲ್ಲಿ ಜಾಕ್ವೆಲಿನ್ ಜತೆಗಿನ ಚಿತ್ರೀಕರಣದ ಅನುಭವಗಳನ್ನು ಸುದೀಪ್ ಹೇಳಿಕೊಂಡಿದ್ದಾರೆ.

‘‘ಜಾಕ್ವೆಲಿನ್ ಅದ್ಬುತ ಡಾನ್ಸರ್. ಅದು ಈಗಾಗಲೇ ಸಾಬೀತಾಗಿದೆ. ಸಾಮಾನ್ಯವಾಗಿ ಬಾಲಿವುಡ್​ನವರಿಗೆ ದಕ್ಷಿಣದ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ಜಾಕ್ವೆಲಿನ್​ಗೆ ಹಾಗಾಗಲಿಲ್ಲ. ಜತೆಗೆ ಅವರು ಹಾಡಿನ ಸಾಲುಗಳನ್ನು ಅರ್ಥ ಮಾಡಿಕೊಂಡಿದ್ದರು. ಯಾವುದೇ ಅಡೆತಡೆಯಿಲ್ಲದೇ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಇದು ಆಶ್ಚರ್ಯ ಉಂಟುಮಾಡಿತು’’ ಎಂದಿದ್ದಾರೆ ಸುದೀಪ್.

ಮೊದಲಿಗೆ 5 ದಿನಕ್ಕೆ ಡೇಟ್ ನೀಡಿದ್ದ ಜಾಕ್ವೆಲಿನ್, ಚಿತ್ರದ ವಾತಾವರಣ ಇಷ್ಟವಾಗಿ ಮತ್ತೊಂದು ದಿನ ಚಿತ್ರೀಕರಣದಲ್ಲಿ ಭಾಗಿಯಾದ ವಿಚಾರವನ್ನು ಸುದೀಪ್ ಹಂಚಿಕೊಂಡಿದ್ದಾರೆ. ಜಾಕ್ವೆಲಿನ್ ಅವರನ್ನೇ ‘ರಕ್ಕಮ್ಮ’ ಪಾತ್ರಕ್ಕೆ ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ‘‘ಒಂದು ಪಾತ್ರ ಬರುತ್ತಿದ್ದ ಹಾಗೆ ಸ್ಕ್ರೀನ್​ನಲ್ಲಿ ಎನರ್ಜಿ ತುಂಬಬೇಕು. ಅದಕ್ಕೆ ಜಾಕ್ವೆಲಿನ್ ಹೊಂದಿಕೆಯಾಗುತ್ತಿದ್ದರು. ಜತೆಗೆ ಹಿಂದಿಯ ನಟಿಯರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದಿದ್ದರೆ ದೊಡ್ಡ ನಟಿಯನ್ನೇ ಆಯ್ಕೆ ಮಾಡೋಣ. ಇಲ್ಲದಿದ್ದರೆ ಬೇಡ ಎಂದು ಯೋಚಿಸಿದ್ದೆವು. ನಮ್ಮ ಚಿತ್ರದ ತಯಾರಿ ನಡೆದಂತೆ ಅದಕ್ಕೆ ಜಾಕ್ವೆಲಿನ್ ಅವರೇ ಸೂಕ್ತ ಎಂದನ್ನಿಸಿತು’’ ಎಂದಿದ್ದಾರೆ ಸುದೀಪ್.

ಪಾತ್ರಕ್ಕಾಗಿ ಜಾಕ್ವೆಲಿನ್ ಅವರನ್ನು ಮಾತನಾಡಿಸಿದಾಗ ಯಾವುದೇ ಹಿಂಜರಿಕೆ ಇಲ್ಲದೇ ಅವರು ಒಪ್ಪಿಕೊಂಡರು ಎಂದಿರುವ ಸುದೀಪ್, ಹೆಚ್ಚಿನ ನಟಿಯರು ಹಾಡುಗಳಲ್ಲಿ ಹೆಜ್ಜೆ ಹಾಕುತ್ತಾರೆ. ಆದರೆ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳಬೇಕು ಎಂದಾಗ ಯೋಚಿಸುತ್ತಾರೆ. ಕಾರಣ ಅವರು ಸಹನಟಿಯಾಗುವ ಭಯ ಇರುತ್ತದೆ. ಅದು ಸಹಜವಾಗಿದ್ದು. ಆದರೆ ಜಾಕ್ವೆಲಿನ್​ ಹಾಗೆ ಭಾವಿಸದೇ ನಟಿಸಿದ್ದಾರೆ. ಅವರ ಪಾತ್ರ ಬಹಳ ಪ್ರಮುಖವಾದುದು ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಜಾಕ್ವೆಲಿನ್ ವಿಚಾರ ಬಂದಿದ್ದರಿಂದ ನಟಿಯನ್ನು ಮಾತನಾಡಿಸಬಹುದೇ ಎಂದು ಅಕುಲ್ ಕೇಳಿದರು. ಜಾಕ್ವೆಲಿನ್ ಬಿಡುವಿದ್ದುದನ್ನು ಖಚಿತಪಡಿಸಿಕೊಂಡು ನಂತರ ಸುದೀಪ್ ದೂರವಾಣಿಯಲ್ಲಿ ಮಾತನಾಡಿದರು. ಈ ವೇಳೆ ಸಂತಸದಿಂದ ಮಾತನಾಡಿದ ನಟಿ ‘ರಾ ರಾ ರಕ್ಕಮ್ಮ’ ಹಾಡು ಅದ್ಭುತವಾಗಿದ್ದು, ದೊಡ್ಡ ಮಟ್ಟದ ಹಿಟ್ ಆಗುವ ವಿಶ್ವಾಸ ವ್ಯಕ್ತಪಡಿಸಿದರು.

‘ರಕ್ಕಮ್ಮ’ ಹಾಡಿನಲ್ಲಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ಜಾಕ್ವೆಲಿನ್​ಗೆ ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಕೇಳಲಾಯಿತು. ಹಾಡು ಬಿಡುಗಡೆಯಾದ ಅರ್ಧ ಗಂಟೆಯೊಳಗೇ ಲುಕ್​ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬರಲು ಆರಂಭವಾಯಿತು ಎಂದಿದ್ದಾರೆ. ಕಿಚ್ಚ ಸುದೀಪ್ ಎನರ್ಜಿಯನ್ನು ಮ್ಯಾಚ್ ಮಾಡಲಾಗಲಿಲ್ಲ ಎಂದೂ ನಟಿ ಹೊಗಳಿದ್ದಾರೆ. ಜತೆಗೆ ನಿರ್ದೇಶಕ, ಚಿತ್ರತಂಡದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ ನಟಿ.

ಕನ್ನಡದಲ್ಲಿ ‘ವಿಕ್ರಾಂತ್ ರೋಣ’ ಡೈಲಾಗ್ ಹೊಡೆದ ಜಾಕ್ವೆಲಿನ್:​

ಜಾಕ್ವೆಲಿನ್​ಗೆ ‘ವಿಕ್ರಾಂತ್ ರೋಣ’ ಚಿತ್ರದ ಯಾವುದಾದರೂ ಸಂಭಾಷಣೆಯನ್ನು ಹೇಳುವಂತೆ ಕೇಳಲಾಯಿತು. ಆಗ ‘‘ಊರಲ್ಲೆಲ್ಲಾ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು.. ವಿಕ್ರಾಂತ್ ರೋಣ’’ ಎಂಬ ಡೈಲಾಗ್ ಅನ್ನು ಭರ್ಜರಿಯಾಗಿ ಹೇಳಿದ್ದಾರೆ ಜಾಕ್ವೆಲಿನ್. ಇದಕ್ಕೆ ಸುದೀಪ್ ಸಹಾಯ ಮಾಡಿದ್ದಾರೆ. ಸದ್ಯ ಜಾಕ್ವೆಲಿನ್ ಮಾತನಾಡಿರುವ ಈ ಮಜವಾದ ಸಂದರ್ಶನ ಅಭಿಮಾನಿಗಳ ಮನಗೆದ್ದಿದೆ.

ಜಾಕ್ವೆಲಿನ್ ಸಂಭಾಷಣೆ ಹೇಳಿರುವ ವಿಡಿಯೋ ಇಲ್ಲಿದೆ:

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ