ಸಾಂಗ್ ಹಿಟ್ ಆದರೆ ಚಿತ್ರದ ಮೈಲೇಜ್ ಹೆಚ್ಚುತ್ತದೆ. ಈ ಮೊದಲು ಈ ರೀತಿ ಆದ ಸಾಕಷ್ಟು ಉದಾಹರಣೆಗಳು ಇವೆ. ಈಗಾಗಲೇ ‘ವಿಕ್ರಾಂತ್ ರೋಣ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈಗ ರಿಲೀಸ್ ಆದ ‘ರಾ ರಾ ರಕ್ಕಮ್ಮ’ ಹಾಡಿನಿಂದ ಚಿತ್ರಕ್ಕೆ ಒಳ್ಳೆಯ ಹೈಪ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು, ಇದೊಂದು ಪಾರ್ಟಿ ಸಾಂಗ್ ರೀತಿ ಇದ್ದು, ಕುಣಿದು ಎಂಜಾಯ್ ಮಾಡುವವರಿಗೆ ಬೇಗ ಇಷ್ಟವಾಗುತ್ತದೆ.
Gadang Rakkamma – The Queen Of Good Times OUT NOW to rule your playlists | #RaRaRakkamma Kannada lyric video released. https://t.co/PEk7RCLVdf#VRonJuly28 #VikrantRona @Asli_Jacqueline @AJANEESHB @anupsbhandari @SunidhiChauhan5 @AzizNakash
— Kichcha Sudeepa (@KicchaSudeep) May 23, 2022
ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಸಾಂಗ್ ಏಕ ಕಾಲದಲ್ಲಿ ರಿಲೀಸ್ ಮಾಡಲಾಗುತ್ತದೆ. ಆದರೆ, ‘ವಿಕ್ರಾಂತ್ ರೋಣ’ ಬೇರೆ ತಂತ್ರ ಬಳಸಿದೆ. ‘ರಾ ರಾ ರಕ್ಕಮ್ಮ..’ ಸಾಂಗ್ ಇಂದು ರಿಲೀಸ್ ಆಗಿದೆ. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಅನುಕ್ರಮವಾಗಿ ಮೇ 24, ಮೇ 25, ಮೇ 26 ಹಾಗೂ ಮೇ 27ರಂದು ಮಧ್ಯಾಹ್ನ 1.05 ಗಂಟೆಗೆ ಬಿಡುಗಡೆ ಆಗಲಿದೆ.
‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಈ ಸಿನಿಮಾ ರಿಲೀಸ್ ಆಗುತ್ತಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿರುವುದು ಇನ್ನಷ್ಟು ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ‘ಶಾಲಿನಿ ಆರ್ಟ್ಸ್’ ಬ್ಯಾನರ್ ಮೂಲಕ ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಪಕರಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.