Stranger Things 4: ‘ಸ್ಟ್ರೇಂಜರ್​ ಥಿಂಗ್ಸ್​ 4’ನಲ್ಲಿ ಗಾಂಧಿ ಹೆಸರು ಉಲ್ಲೇಖ; ಮುಂದಿನ ಸೀಸನ್​ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ

Netflix | Mahatma Gandhi: ನೆಟ್​ಫ್ಲಿಕ್ಸ್​​ನ ಪ್ರಸಿದ್ಧ ಸರಣಿಯಾಗಿರುವ ‘ಸ್ಟ್ರೇಂಜರ್ ಥಿಂಗ್ಸ್​​’ನ 4ನೇ ಆವೃತ್ತಿಯ ಮೊದಲ ಭಾಗ ರಿಲೀಸ್ ಆಗಿದೆ. ಅದರಲ್ಲಿ ಸಂಭಾಷಣೆಯೊಂದರಲ್ಲಿ ‘ಗಾಂಧಿ’ ಹೆಸರು ಪ್ರಸ್ತಾಪವಾಗಿದೆ. ಇದು ಮುಂದಿನ ಭಾಗಗಳಬಗ್ಗೆ ಕುತೂಹಲ ಮೂಡಿಸಿದೆ.

May 31, 2022 | 9:13 PM
TV9kannada Web Team

| Edited By: shivaprasad.hs

May 31, 2022 | 9:13 PM

ನೆಟ್​ಫ್ಲಿಕ್ಸ್​ ಕೊನೆಗೂ ಬಹುನಿರೀಕ್ಷಿತ ‘ಸ್ಟ್ರೇಂಜರ್ ಥಿಂಗ್ಸ್​ 4’ ರಿಲೀಸ್​ ಮಾಡಿದೆ. ಮೇ 27ರಂದು 7 ಸಂಚಿಕೆಗಳ ವೆಬ್​ ಸರಣಿಯನ್ನು ಬಿಡುಗಡೆ ಮಾಡಿ, ಜನರ ಕಾಯುವಿಕೆಗೆ ಕೊನೆ ಹಾಡಿದೆ.

1 / 5
ಸೀರೀಸ್​ನಲ್ಲಿ ಹಲವು ವಿಚಾರಗಳನ್ನು ಪ್ರೇಕ್ಷಕರು ಗುರುತಿಸುತ್ತಿದ್ದಾರೆ. ಭಾರತೀಯ ಪ್ರೇಕ್ಷಕರು ಮತ್ತೊಂದು ವಿಚಾರವನ್ನು ಗಮನಿಸಿದ್ದಾರೆ.

2 / 5
ಹೌದು, ಸ್ಟ್ರೇಂಜರ್ ಥಿಂಗ್ಸ್​ನಲ್ಲಿ  ಜಿಮ್ ಹಾಪರ್​ (ಡೇವಿಡ್ ಹಾರ್ಬರ್) ಹಾಗೂ ರಷ್ಯನ್ ಜೈಲು ಅಧಿಕಾರಿ ಎನ್ಜೋ ಪಾತ್ರದ ನಡುವೆ ಮಾತುಕತೆ ನಡೆಯುವ ವೇಳೆಗೆ ಗಾಂಧಿ ಹೆಸರು ಪ್ರಸ್ತಾಪವಾಗಿದೆ. ಸಂಭಾಷಣೆಯನ್ನು ಗಮನಿಸಿದಾಗ ಇದು ಮಹಾತ್ಮ ಗಾಂಧಿ ಯನ್ನು ಉಲ್ಲೇಖಿಸಿ ಹೇಳಲಾಗಿದೆ ಎನ್ನುವುದು ತಿಳಿಯುವಂತಿದೆ.

3 / 5
ಪ್ರಸ್ತುತ ‘ಸ್ಟ್ರೇಂಜರ್ ಥಿಂಗ್ಸ್​ 4’ನೇ ಸೀಸನ್​ನ ಮೊದಲ ಭಾಗ ರಿಲೀಸ್ ಮಾಡಲಾಗಿದೆ. ಮುಂದಿನ ಭಾಗದಲ್ಲಿ ಭಾರತದ ಕುರಿತು ಮತ್ತಷ್ಟು ಉಲ್ಲೇಖವಿರಲಿದೆ ಎಂದು ಹೇಳಲಾಗಿದೆ.

4 / 5
1980ರ ದಶಕದಲ್ಲಿ ನಡೆಯುವ ಕತೆ ಇದಾಗಿದ್ದು, ಮೊದಲ ಭಾಗ ಹಾಕಿನ್ಸ್​​ ಹಿನ್ನೆಲೆಯಲ್ಲಿ ಹಾಗೂ ಎರಡನೆಯದು ಕ್ಯಾಲಿಫೋರ್ನಿಯಾ ಹಿನ್ನೆಲೆಯಲ್ಲಿ ನಡೆಯಲಿದೆ. ಇದೀಗ ‘ಗಾಂಧಿ’ಉಲ್ಲೇಖದ ಸಂಭಾಷಣೆ ಕುತೂಹಲ ಮೂಡಿಸಿದೆ.

5 / 5

Follow us on

Most Read Stories

Click on your DTH Provider to Add TV9 Kannada