- Kannada News Photo gallery Stranger Things 4 Gandhi name gets a mention in a Netflix series fans curious on next edition
Stranger Things 4: ‘ಸ್ಟ್ರೇಂಜರ್ ಥಿಂಗ್ಸ್ 4’ನಲ್ಲಿ ಗಾಂಧಿ ಹೆಸರು ಉಲ್ಲೇಖ; ಮುಂದಿನ ಸೀಸನ್ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ
Netflix | Mahatma Gandhi: ನೆಟ್ಫ್ಲಿಕ್ಸ್ನ ಪ್ರಸಿದ್ಧ ಸರಣಿಯಾಗಿರುವ ‘ಸ್ಟ್ರೇಂಜರ್ ಥಿಂಗ್ಸ್’ನ 4ನೇ ಆವೃತ್ತಿಯ ಮೊದಲ ಭಾಗ ರಿಲೀಸ್ ಆಗಿದೆ. ಅದರಲ್ಲಿ ಸಂಭಾಷಣೆಯೊಂದರಲ್ಲಿ ‘ಗಾಂಧಿ’ ಹೆಸರು ಪ್ರಸ್ತಾಪವಾಗಿದೆ. ಇದು ಮುಂದಿನ ಭಾಗಗಳಬಗ್ಗೆ ಕುತೂಹಲ ಮೂಡಿಸಿದೆ.
Updated on: May 31, 2022 | 9:13 PM

ನೆಟ್ಫ್ಲಿಕ್ಸ್ ಕೊನೆಗೂ ಬಹುನಿರೀಕ್ಷಿತ ‘ಸ್ಟ್ರೇಂಜರ್ ಥಿಂಗ್ಸ್ 4’ ರಿಲೀಸ್ ಮಾಡಿದೆ. ಮೇ 27ರಂದು 7 ಸಂಚಿಕೆಗಳ ವೆಬ್ ಸರಣಿಯನ್ನು ಬಿಡುಗಡೆ ಮಾಡಿ, ಜನರ ಕಾಯುವಿಕೆಗೆ ಕೊನೆ ಹಾಡಿದೆ.

ಸೀರೀಸ್ನಲ್ಲಿ ಹಲವು ವಿಚಾರಗಳನ್ನು ಪ್ರೇಕ್ಷಕರು ಗುರುತಿಸುತ್ತಿದ್ದಾರೆ. ಭಾರತೀಯ ಪ್ರೇಕ್ಷಕರು ಮತ್ತೊಂದು ವಿಚಾರವನ್ನು ಗಮನಿಸಿದ್ದಾರೆ.

ಹೌದು, ಸ್ಟ್ರೇಂಜರ್ ಥಿಂಗ್ಸ್ನಲ್ಲಿ ಜಿಮ್ ಹಾಪರ್ (ಡೇವಿಡ್ ಹಾರ್ಬರ್) ಹಾಗೂ ರಷ್ಯನ್ ಜೈಲು ಅಧಿಕಾರಿ ಎನ್ಜೋ ಪಾತ್ರದ ನಡುವೆ ಮಾತುಕತೆ ನಡೆಯುವ ವೇಳೆಗೆ ಗಾಂಧಿ ಹೆಸರು ಪ್ರಸ್ತಾಪವಾಗಿದೆ. ಸಂಭಾಷಣೆಯನ್ನು ಗಮನಿಸಿದಾಗ ಇದು ಮಹಾತ್ಮ ಗಾಂಧಿ ಯನ್ನು ಉಲ್ಲೇಖಿಸಿ ಹೇಳಲಾಗಿದೆ ಎನ್ನುವುದು ತಿಳಿಯುವಂತಿದೆ.

ಪ್ರಸ್ತುತ ‘ಸ್ಟ್ರೇಂಜರ್ ಥಿಂಗ್ಸ್ 4’ನೇ ಸೀಸನ್ನ ಮೊದಲ ಭಾಗ ರಿಲೀಸ್ ಮಾಡಲಾಗಿದೆ. ಮುಂದಿನ ಭಾಗದಲ್ಲಿ ಭಾರತದ ಕುರಿತು ಮತ್ತಷ್ಟು ಉಲ್ಲೇಖವಿರಲಿದೆ ಎಂದು ಹೇಳಲಾಗಿದೆ.

1980ರ ದಶಕದಲ್ಲಿ ನಡೆಯುವ ಕತೆ ಇದಾಗಿದ್ದು, ಮೊದಲ ಭಾಗ ಹಾಕಿನ್ಸ್ ಹಿನ್ನೆಲೆಯಲ್ಲಿ ಹಾಗೂ ಎರಡನೆಯದು ಕ್ಯಾಲಿಫೋರ್ನಿಯಾ ಹಿನ್ನೆಲೆಯಲ್ಲಿ ನಡೆಯಲಿದೆ. ಇದೀಗ ‘ಗಾಂಧಿ’ಉಲ್ಲೇಖದ ಸಂಭಾಷಣೆ ಕುತೂಹಲ ಮೂಡಿಸಿದೆ.









