ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ

ಸೋನಾಲಿ ಬೇಂದ್ರೆಗೆ ಹಲವು ಸಿನಿಮಾ ಆಫರ್​ಗಳು ತಪ್ಪಿ ಹೋಗಿತ್ತು. ಇದಕ್ಕೆ ಕಾರಣವಾಗಿದ್ದು ಭೂಗತಲೋಕ. ಈ ಬಗ್ಗೆ ಅವರು ವಿವರಿಸಿದ್ದಾರೆ.

ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
ಸೋನಾಲಿ
TV9kannada Web Team

| Edited By: Rajesh Duggumane

Jun 26, 2022 | 2:54 PM

ನಟಿ ಸೋನಾಲಿ ಬೇಂದ್ರೆ (Sonali Bendre) ಅವರು ಬಾಲಿವುಡ್​ನ ಖ್ಯಾತ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. 90ರ ದಶಕದಲ್ಲಿ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು. ಹಲವು ಸ್ಟಾರ್​​ಗಳ ಜತೆ ನಟಿಸಿದ್ದರು. 2013ರಿಂದ ಈಚೆ ಅವರು ದೊಡ್ಡ ಪರದೆಗೆ ಕಾಲಿಟ್ಟಿಲ್ಲ. ಈಗ ವೆಬ್ ಸೀರಿಸ್ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ‘ದಿ ಬ್ರೋಕನ್​ ನ್ಯೂಸ್’ (The Broken News) ವೆಬ್ ಸರಣಿಯಲ್ಲಿ ಅಮಿನಾ ಖುರೇಷಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸೀರಿಸ್ ಪ್ರಚಾರದ ವೇಳೆ ಅವರು ಒಂದು ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾರೆ. ಬಾಲಿವುಡ್​ಗೆ ಅಂಡರ್​​ವರ್ಲ್ಡ್​ನ ಸಂಪರ್ಕ ಇತ್ತು ಎನ್ನುವ ವಿಚಾರವನ್ನು ಹೇಳಿಕೊಂಡಿದ್ದಾರೆ.  ‘

1994ರಲ್ಲಿ ತೆರೆಗೆ ಬಂದ ‘ಆಗ್’ ಚಿತ್ರದಲ್ಲಿ ಸೋನಾಲಿ ಬೇಂದ್ರೆ ನಟಿಸಿದರು. ಇದು ಅವರ ಮೊದಲ ಸಿನಿಮಾ. ಆಗ ಅವರಿಗೆ 19 ವರ್ಷ ವಯಸ್ಸು. ಸಣ್ಣ ವಯಸ್ಸಿಗೆ ನಟಿಯಾಗಿ ಮಿಂಚಿದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸೋನಾಲಿ ಬೇಂದ್ರೆಗೆ ಹಲವು ಸಿನಿಮಾ ಆಫರ್​ಗಳು ತಪ್ಪಿ ಹೋಗಿತ್ತು. ಇದಕ್ಕೆ ಕಾರಣವಾಗಿದ್ದು ಭೂಗತಲೋಕ. ಈ ಬಗ್ಗೆ ಅವರು ವಿವರಿಸಿದ್ದಾರೆ.

‘ಹಲವು ಒಳ್ಳೆಯ ನಿರ್ಮಾಣ ಸಂಸ್ಥೆಗಳು ಸಿನಿಮಾಗೆ ಬಂಡವಾಳ ಹೂಡುತ್ತವೆ. ಆದರೆ, ಇದರ ಜತೆಗೆ ಬೇರೆ ಬೇರೆ ರೀತಿಯಿಂದಲೂ ಚಿತ್ರರಂಗಕ್ಕೆ ಹಣ ಹರಿದು ಬರುತ್ತಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್​ಗೆ ಭೂಗತಲೋಕದಿಂದ ಹಣ ಬರುತ್ತಿತ್ತು ಎಂಬುದನ್ನು ಹೇಳಿದ್ದಾರೆ.

‘ಅಂದು ಯಾವುದಾದರೂ ಆಫರ್​ ನನಗೆ ಬರುತ್ತಿತ್ತು. ಆದರೆ,  ನಂತರ ಆ ಪಾತ್ರ ಬೇರೆಯವರ ಪಾಲಾಗುತ್ತಿತ್ತು. ನಿರ್ಮಾಪಕರಿಗೆ ಬೇರೆ ಎಲ್ಲಿಂದಲೂ ಬುಲಾವ್ ಬರುತ್ತಿತ್ತು. ನಂತರ ನಿರ್ದೇಶಕರು ಅಥವಾ ನಟರು ನಮ್ಮನ್ನು ಕರೆದು ನನಗೆ ಬೇರೆ ಕಡೆಯಿಂದ ಒತ್ತಡ ಇತ್ತು. ನಾವು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳುತ್ತಿದ್ದರು. ಅದು ನನಗೆ ಅರ್ಥವಾಗುತ್ತಿತ್ತು’ ಎಂದಿದ್ದಾರೆ ಸೋನಾಲಿ.

ಸೋನಾಲಿ ಬೇಂದ್ರೆ ನಟನೆಯ ‘ದಿ ಬ್ರೋಕನ್ ನ್ಯೂಸ್’ ಜೀ5ನಲ್ಲಿ ಜೂನ್ 10ರಂದು ರಿಲೀಸ್ ಆಗಿದೆ. ಜೈದೀಪ್​ ಅಹ್ಲಾವತ್ ಮೊದಲಾದವರು ಇದರಲ್ಲಿ ನಟಿಸಿದ್ದಾರೆ. ವಿನಯ್​ ವೈಕುಲ್ ಇದನ್ನು ನಿರ್ದೇಶನ ಮಾಡಿದ್ದಾರೆ. ಸೋನಾಲಿಗೆ 2018ರಲ್ಲಿ ಕ್ಯಾನ್ಸರ್ ಪತ್ತೆ ಆಗಿತ್ತು. ಇದನ್ನು ಅವರು ಜಯಸಿದ್ದರು.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?

 ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada