ಮನ್ಮಿತ್ ರೈಗೆ ಇದೆ ಅಂಡರ್​​ವರ್ಲ್ಡ್​ ಡಾನ್ ಆಗೋ ಆಸೆ! ಟಿವಿ9 ಗೆ ಎಕ್ಸ್​ಕ್ಲೂಸಿವ್ ಮಾಹಿತಿ ಲಭ್ಯ

Manmith Rai: ಮನ್ಮಿತ್ ರೈಗೆ ಸಂಬಂಧಿಸಿದ ಕೆಲ ಮಾಹಿತಿಗಳು ಸ್ನೇಹಿತರ ಮೂಲದಿಂದ ಟಿವಿ9ಗೆ ಲಭ್ಯವಾಗಿದ್ದು, ಮನ್ಮಿತ್​ಗೆ ಅಂಡರ್​​ವರ್ಲ್ಡ್ ಡಾನ್ ಆಗುವ ಆಸೆ ಇದೆ ಎಂದು ಹೇಳಲಾಗುತ್ತಿದೆ.

ಮನ್ಮಿತ್ ರೈಗೆ ಇದೆ ಅಂಡರ್​​ವರ್ಲ್ಡ್​ ಡಾನ್ ಆಗೋ ಆಸೆ! ಟಿವಿ9 ಗೆ ಎಕ್ಸ್​ಕ್ಲೂಸಿವ್ ಮಾಹಿತಿ ಲಭ್ಯ
ಮನ್ಮಿತ್ ರೈ ಬಾಡಿಗಾರ್ಡ್ಸ್ ಜೊತೆ ಓಡಾಡುತ್ತಾನೆ
TV9kannada Web Team

| Edited By: sandhya thejappa

Jun 14, 2022 | 10:52 AM

ಮಂಗಳೂರು: ನಟಿ ಅನುಷ್ಕಾ ಶೆಟ್ಟಿ (Anushka Shetty) ಅಣ್ಣ ಗುಣ ರಂಜನ್ ಶೆಟ್ಟಿ ಕೊಲೆಗೆ ಮನ್ಮಿತ್ ರೈ (Manmith Rai) ಸಂಚು ರೂಪಿಸಿದ್ದಾನೆ ಎಂದು ಜಯಕರ್ನಾಟಕ ಸಂಘಟನೆ ಜೂನ್ 12 ರಂದು ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ನೀಡಿದ್ದಾರೆ. ಆದರೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನ್ಮಿತ್ ರೈ, ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ವಿದೇಶದಲ್ಲಿ ಇದ್ದೇನೆ ಎಂದು ಹೇಳಿದ್ದಾನೆ. ಈ ನಡುವೆ ಮನ್ಮಿತ್ ರೈಗೆ ಸಂಬಂಧಿಸಿದ ಕೆಲ ಮಾಹಿತಿಗಳು ಸ್ನೇಹಿತರ ಮೂಲದಿಂದ ಟಿವಿ9ಗೆ ಲಭ್ಯವಾಗಿದ್ದು, ಮನ್ಮಿತ್​ಗೆ ಅಂಡರ್​​ವರ್ಲ್ಡ್ ಡಾನ್ ಆಗುವ ಆಸೆ ಇದೆ ಎಂದು ಹೇಳಲಾಗುತ್ತಿದೆ.

ಮಾಮ ಮುತ್ತಪ್ಪ ರೈ ರೀತಿಯೇ ಆಗಬೇಕು ಎನ್ನುವ ಆಸೆ ಮನ್ಮಿತ್ ರೈಗೂ ಇದೆ ಎಂದು ಸ್ನೇಹಿತರ ಮೂಲದಿಂದ ತಿಳಿದು ಬಂದಿದೆ. ಇದರಿಂದಲೇ ತನ್ನ ಜೊತೆ ಹುಡುಗರನ್ನು ಇಟ್ಟುಕೊಳ್ಳಲು ಸಿಕ್ಕ ಸಿಕ್ಕ ಕಾರ್ಯಕ್ರಮಗಳಿಗೆ ಫಂಡಿಂಗ್ ಮಾಡುತ್ತಾರೆ. ಇನ್ನು ಅದೇ ಕಾರ್ಯಕ್ರಮಕ್ಕೆ ಮನ್ಮಿತ್ ರೈ ಅತಿಥಿ ಆಗಿ ಹೋಗುತ್ತಿದ್ದನಂತೆ. ಜೊತೆಗೆ ಸಾರ್ವಜನಿಕವಾಗಿ ಓಡಾಡುವಾಗ ಬಾಡಿಗಾರ್ಡ್ಸ್ ಇಟ್ಟುಕೊಂಡಿದ್ದಾನಂತೆ.

ಬಾಡಿಗಾರ್ಡ್ಸ್ ಭದ್ರತೆಯಲ್ಲಿ ಸಾಗುವಂತೆ ಮನ್ಮಿತ್ ರೈ ಸ್ಕೋಪ್ ಕೊಡುತ್ತಿದ್ದ. ಅಲ್ಲದೇ, ಪೊಲೀಸರಿಗೆ ನಿಂಧಿಸಿ ರೀಲ್ಸ್ ಮಾಡುತ್ತಿದ್ದ ಎಂಬೆಲ್ಲಾ ಮಾಹಿತಿಗಳು ವಿಡಿಯೋ ಸಮೇತ ಟಿವಿ9ಗೆ ಲಭ್ಯವಾಗಿದೆ.

ಇದನ್ನೂ ಓದಿ: ಫೋಟೋದಲ್ಲಿರುವ ಬಾಲಕ ಈಗ ದೊಡ್ಡ ಸ್ಟಾರ್ ನಟ; ನೂರಾರು ಕೋಟಿ ಒಡೆಯ ಯಾರೆಂದು ಗುರುತಿಸುತ್ತೀರಾ?

ಮನ್ಮಿತ್ ರೈ ಮುತ್ತಪ್ಪಾ ರೈ ಸಂಬಂಧಿ. ಈ ಹಿಂದೆ ಗುಣ ರಂಜನ್ ಮತ್ತು ಮನ್ಮಿತ್ ಒಟ್ಟಿಗೆ ಇದ್ದರು. ಬಳಿಕೆ ಬೇರೆ ಬೇರೆಯಾಗಿದ್ದಾರೆ. ಸದ್ಯ ಮನ್ಮಿತ್ ರೈ ವಿರುದ್ಧ ಕೊಲೆಗೆ ಸಂಚು ರೂಪಿಸಿರುವ ಆರೋಪ ಕೇಳಿಬಂದಿದೆ.

ಹುಡುಗಿಯರ ಮೇಲೆ ಹಣದ ಕಂತೆ ಎಸೆದ ಮನ್ಮಿತ್: ಹುಟ್ಟುಹಬ್ಬದ ಪಾರ್ಟಿಗೆಂದು ಮನ್ಮಿತ್ ರೈ ಭಾರತದಿಂದ ಥೈಲ್ಯಾಂಡ್​ಗೆ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದ. ಈ ವೇಳೆ ಸ್ನೇಹಿತರ ಜೊತೆ ಸೇರಿ ಮೋಜು ಮಸ್ತಿ ಮಾಡಿದ್ದಾನೆ. ನೃತ್ಯ ಮಾಡುವ ಹುಡುಗಿಯರ ಮೇಲೆ ದುಡ್ಡು ಎಸೆದಿದ್ದು, ವಿಡಿಯೋ ವೈರಲ್ ಆಗಿದೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada