ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್? ಗೃಹ ಸಚಿವರಿಗೆ ಜಯಕರ್ನಾಟಕ ಸಂಘಟನೆ ಸದಸ್ಯರಿಂದ ದೂರು
ಗುಣರಂಜನ್ ಶೆಟ್ಟಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. ಗುಣರಂಜನ್ ಶೆಟ್ಟಿ ಮತ್ತು ಮನ್ಮಿತ್ ಇಬ್ಬರೂ ಮುತ್ತಪ್ಪ ರೈ ಜೊತೆ ಇದ್ದವರು. ನಂತರ ಮುತ್ತಪ್ಪ ರೈ ಜೊತೆಯಿಂದ ಮನ್ಮಿತ್ ಹೊರಬಂದಿದ್ದ.
ಬೆಂಗಳೂರು: ಜಯಕರ್ನಾಟಕ ಸಂಘಟನೆಯ (Jayakarnataka Organization) ಗುಣರಂಜನ್ ಶೆಟ್ಟಿ (Gunaranjan Shetty) ಕೊಲೆಗೆ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿ ಜಯಕರ್ನಾಟಕ ಸಂಘಟನೆ ಸದಸ್ಯರು ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ನೀಡಿದ್ದಾರೆ. ದಿವಂಗತ ಡಾನ್ ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಹತ್ಯೆಗೆ ಸ್ಕೆಚ್ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಹತ್ಯೆಗೆ ಸ್ಕೆಚ್ ಹಾಕಿರುವ ಆರೋಪವನ್ನು ತಳ್ಳಿ ಹಾಕಿರುವ ಮನ್ಮಿತ್ ರೈ, ಬ್ಯುಸಿನೆಸ್ ವಿಚಾರವಾಗಿ ತಾನು ವಿದೇಶದಲ್ಲಿರುವುದಾಗಿ ಹೇಳುತ್ತಿದ್ದಾರೆ.
ಗುಣರಂಜನ್ ಶೆಟ್ಟಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. ಗುಣರಂಜನ್ ಶೆಟ್ಟಿ ಮತ್ತು ಮನ್ಮಿತ್ ಇಬ್ಬರೂ ಮುತ್ತಪ್ಪ ರೈ ಜೊತೆ ಇದ್ದವರು. ನಂತರ ಮುತ್ತಪ್ಪ ರೈ ಜೊತೆಯಿಂದ ಮನ್ಮಿತ್ ಹೊರಬಂದಿದ್ದ.
ಆರೋಪದ ಬಗ್ಗೆ ಮಾತನಾಡಿರುವ ಮನ್ಮಿತ್ ರೈ, ಇದು ಎಷ್ಟು ಸತ್ಯ ಎಂಬುವುದನ್ನ ಪೊಲೀಸರು ತನಿಖೆ ಮಾಡುತ್ತಾರೆ. ಆದ್ರೆ ಈ ವಿಚಾರದಲ್ಲಿ ನನ್ನ ಹೆಸರು ಏಕೆ ಬರುತ್ತಿದೆಯೋ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ ಸ್ಟೇಷನ್ನಲ್ಲೂ ಎಫ್ಐಆರ್ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಿಲ್ಲದಿದ್ದರೂ ಯಾಕೆ ನನ್ನ ವಿರುದ್ದ ಆರೋಪ ಬರುತ್ತಿದೆ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಉಗ್ರನ ಬಂಧನ ಪ್ರಕರಣ; ಪೊಲೀಸರಿಗೆ ಕೊನೆಗೂ ಸಿಕ್ತು ಉಗ್ರ ತಾಲಿಬ್ ಮಾಹಿತಿ
ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಟಿವಿ9 ಜೊತೆ ಮಾತನಾಡಿ, ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಫೋನ್ ಮಾಡಿ ನಿಮಗೆ ಬೇದರಿಕೆ ಇದೆ. ಹತ್ಯೆಯ ಪ್ಲ್ಯಾನ್ನಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ನೀವು ಹುಷಾರಾಗಿರಿ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು. ಈ ವೇಳೆ ಶ್ರೀರಂಗ ಮನ್ಮಿತ್ ಭಾಗಿಯಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ.
ಈ ವಿಚಾರ ಗೊತ್ತಾಗಿ ತಂಗಿ ಅನುಷ್ಕಾ ಶೆಟ್ಟಿ ಕರೆ ಮೇಲೆ ಕರೆ ಮಾಡಿದ್ದರು. ಅವರ ಜೊತೆ ಮಾತಾಡಲು ಅವೈಡ್ ಮಾಡಿದ್ದೇನೆ. ಅವರಿಗೆ ಸಿಕ್ಕಿ ಎಲ್ಲ ವಿಚಾರ ಹೇಳುತ್ತೇನೆ. ಭೂಗತ ಲೋಕವನ್ನು ಕಂಟ್ರೋಲ್ ಪಡೆಯಬೇಕು ಅಂತ ಕೆಲವರು ಓಡಾಡುತ್ತಿದ್ದಾರೆ. ವಿದೇಶದಲ್ಲಿ ಕುಳಿತುಕೊಂಡು ಹೆದರಿಸಬಹುದು ಅನ್ನೋ ಯೋಚನೆಯಲ್ಲಿದ್ದಾರೆ. ನಾನು ಸೆಲೆಬ್ರೆಟಿ ಅಣ್ಣ ಆಗಿರುವುದರಿಂದ ನನ್ನನ್ನು ಟಚ್ ಮಾಡಿದರೆ ಅವರಿಗೆ ಮೈಲೇಜ್ ಸಿಗುತ್ತೆ. ನನಗೆ ಯಾವ ಬೆದರಿಕೆ ಕರೆ ಕೂಡ ಬಂದಿಲ್ಲ ಯಾರಿಗೂ ನನ್ನ ಬಳಿ ದ್ವೇಷ ಇಲ್ಲ. ಯಾಕೆ ಹೀಗೆ ಮಾಡಿದರು ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ. ನಾನು ಈ ಎಲ್ಲಾ ಬೆದರಿಕೆಗಳಿಗೆ ಹೆದರುವುದಿಲ್ಲ. ಕೊಲ್ಲುವನು ಒಬ್ಬನಿದ್ದರೆ ಕಾಯುವನು ಮೇಲೊಬ್ಬ ಇರುತ್ತಾನೆ. ಪೊಲೀಸ್ ಇಲಾಖೆ ತನಿಖೆಗೆ ಬೇಕಾದ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಗುಣರಂಜನ್ ಅಭಿಪ್ರಾಯಪಟ್ಟರು.
ಇನ್ನು ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಮುತ್ತಪ್ಪ ರೈ ರೈಟ್ ಹ್ಯಾಂಡ್ ರಾಕೇಶ್ ಮಲ್ಲಿ, ಮಾಡೋಕೆ ಕೆಲಸ ಇಲ್ಲದವರು ಇಂತಹ ಆರೋಪ ಮಾಡುತ್ತಿದ್ದಾರೆ. ಏನು ಮಾಡೋದು ಜನರಿಗೆ ಕೆಲಸ ಇಲ್ಲವಲ್ಲ ಅಂತ ಹೇಳಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Sun, 12 June 22